ಭ್ರಷ್ಟ ಅಧಿಕಾರಿಗಳು ಮತ್ತು ಅವರು ಸಾಕಿಕೊಂಡಿರುವ ಗೂಂಢಾ ಸಹಚರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕರ್ನಾಟಕ ರಾಷ್ಟ್ರ ಸಮಿತಿ ನೇತೃತ್ವದಲ್ಲಿ ಪಾಂಡವಪುರ ಚಲೋ ಹಮ್ಮಿಕೊಳ್ಳಲಾಗಿತ್ತು. ಚಲೋದಲ್ಲಿ ಬಾಗಿಯಾಗಲು ಬಂದ ನೂರಾರು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಕೊವಿಡ್ ನೆಪವೊಡ್ಡಿ ಜಿಲ್ಲೆಯಲ್ಲಿ ನಿಷೇಧಾಜ್ಞೆ ಹೇರಿದ್ದರಿಂದ ಪಾಂಡವಪುರ ಕಚೇರಿಗೆ ಮುತ್ತಿಗೆ ಹಾಕುವುದಕ್ಕೆ ಆಗಲಿಲ್ಲ. ಭ್ರಷ್ಟ ಅಧಿಕಾರಿಗಳಾದ ಶಿವಾನಂದಮೂರ್ತಿ, ತಹಶೀಲ್ದಾರ್ ಪ್ರಮೋದ್ ಪಾಟೀಲ್ ಮತ್ತು ಅವರ ಗೂಂಡಾ ಸಹಚರರಿಗೆ ಕಾನೂನು ರೀತಿ ಕ್ರಮಕೈಗೊಳ್ಳಬೇಕು ಎಂದು ಪಕ್ಷದ ರಾಜ್ಯಧ್ಯಕ್ಷ ರವಿಕೃಷ್ಣಾರೆಡ್ಡಿ ಆರೋಪಿಸಿದ್ದಾರೆ.
ಪಾಂಡವಪುರ ಕಚೇರಿಯನ್ನು ಮುತ್ತಿಗೆ ಹಾಕಲು ಮುಂದಾದೆವು. ಆದರೆ ಪೊಲೀಸರು ಕಟ್ಟುನಿಟ್ಟಿನ ಬಂದೋಬಸ್ತ್ ಏರ್ಪಡಿಸಿದ್ದರು. ಆವರಣದ ಎರಡೂ ಬಾಗಿಲುಗಳನ್ನು ಮುಚ್ಚಿ ನೂರಕ್ಕೆ ಹೆಚ್ಚು ಮಂದಿ ಪೊಲೀಸರು ಕಾವಲು ಕಾಯುತ್ತಿದ್ದರು. ಆದ್ದರಿಂದ ಹೊರಗೆ, ಒಳಗೆ ಹೋಗಲು ಆಗಲಿಲ್ಲ ಎಂದು ಹೇಳಿದ್ದಾರೆ.
ಕೆಆರ್.ಎಸ್ ಟಿ ಶರ್ಟ್ ಹಾಕಿಕೊಂಡವರನ್ನು ಪೊಲೀಸರು ಬಂಧಿಸಿದರು. ರೈಲ್ವೆ ನಿಲ್ದಾಣದಲ್ಲೂ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ತುಮಕೂರಿನಿಂದ ಬಂದ ಗುಂಪನ್ನು ವಾಹನದಿಂದ ಇಳಿಯಲು ಬಿಡದೆ ಅವರನ್ನು ಡಿಎಆರ್ ಮೈದಾನಕ್ಕೆ ಕರೆತಂದರು
ಎರಡು ದಿನಗಳು ನಮ್ಮ ಕಾರ್ಯಕರ್ತರು ಜೈಲಿನಲ್ಲೇ ಕಳೆಯಬೇಕಾಯಿತು. ಸರ್ಕಾರ ಏನೇ ಕ್ರಮ ಕೈಗೊಂಡರೂ ಈ ಚಳವಳಿ ಇಲ್ಲಿಗೆ ನಿಲ್ಲುವುದಿಲ್ಲ ಎಂದು ರವಿಕೃಷ್ಣಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ.
ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳು ಇದನ್ನು ನೆನಪಿಟ್ಟುಕೊಳ್ಳಬೇಕು ಮತ್ತು ಹದ್ದುಬಸ್ತಿನಲ್ಲಿ ವರ್ತಿಸಬೇಕು. ಸತ್ಯಾಗ್ರಹ ಮಾಡಿ ಕೇಸು ಹಾಕಿಸಿಕೊಳ್ಳಲು ಮತ್ತು ಜೈಲಿಗೆ ಹೋಗಲು ಅಂಜುವುದಿಲ್ಲ. ತಮ್ಮ ಕಡೆಯಿಂದ ಯಾವುದೇ ತಪ್ಪಿಲ್ಲದಿದ್ದರೂ ಎರಡು ದಿನ ಜೈಲುವಾಸ ಮಾಡಬೇಕಾಗಿ ಬಂತು ಎಂದು ಕಿಡಿಕಾರಿದ್ದಾರೆ.


