Thursday, November 21, 2024
Google search engine
Homeಮುಖಪುಟಮತಾಂತರ ನಿಷೇಧ ಮಸೂದೆಗೆ ಬಿಜೆಪಿ ಮುಖಂಡ ಎಚ್.ವಿಶ್ವನಾಥ್ ತೀವ್ರ ವಿರೋಧ

ಮತಾಂತರ ನಿಷೇಧ ಮಸೂದೆಗೆ ಬಿಜೆಪಿ ಮುಖಂಡ ಎಚ್.ವಿಶ್ವನಾಥ್ ತೀವ್ರ ವಿರೋಧ

12ನೇ ಶತಮಾನದ ಬಸವಣ್ಣ ಅಸ್ಪೃಶ್ಯರು ಸೇರಿ ಎಲ್ಲಾ ಜಾತಿಗಳಿಗೂ ಲಿಂಗದೀಕ್ಷೆ ನೀಡಿದರು. ಇದನ್ನು ಮರೆತಿರುವ ವೀರಶೈವ ಧರ್ಮದ ಮಠಗಳು ಬಾಯಿ ಬಿಡುತ್ತಿಲ್ಲ. ಬಸವಣ್ಣನ ಹೆಸರಿನಲ್ಲಿ ಪ್ರಶಸ್ತಿ ನೀಡುವ ಚಿತ್ರದುರ್ಗದ ಸ್ವಾಮೀಜಿ ಬಾಯಿ ಮುಚ್ಚಿಕೊಂಡಿದ್ದಾರೆ. ಸರ್ಕಾರದ ಅನುದಾನ ಪಡೆದಿರುವ ಸ್ವಾಮೀಜಿಗಳ ಬಾಯಿ ಮುಚ್ಚಿಸಿರಬಹುದು ಎಂದು ಟೀಕಿಸಿದರು.

ಅಮೆರಿಕಾ, ಅರಬ್ ರಾಷ್ಟ್ರಗಳು ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಉದ್ಯಮ ಸ್ಥಾಪನೆಗೆ ಮತ್ತು ಶಿಕ್ಷಣ ಪಡೆಯಲು ಹಾತೊರೆಯುವ ಬಿಜೆಪಿ ಮತ್ತು ಆರ್.ಎಸ್.ಎಸ್. ಮುಖಂಡರ ಮಕ್ಕಳು ಕ್ರಿಶ್ಚಿಯನ್ ಮತ್ತು ಮುಸ್ಲೀಮರಿಗೆ ಏಕೆ ಕಿರುಕುಳ ನೀಡುತ್ತೀರಿ ಎಂದು ಬಿಜೆಪಿ ಮುಖಂಡ ಎಚ್. ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಆರ್.ಎಸ್.ಎಸ್. ನಾಯಕರ ಮಕ್ಕಳು ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿಲ್ಲವೇ? ಹೀಗಿದ್ದಾಗಲೂ ಮತಾಂತರ ನಿಷೇಧ ಮಸೂದೆ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಪ್ರಮುಖ ನಾಯಕರ ಹೆಣ್ಣು ಮಕ್ಕಳು ಮುಸ್ಲೀಮ್ ಯುವಕರನ್ನು ವಿವಾವಹವಾಗಿ ಉತ್ತಮ ಜೀವನ ಸಾಗಿಸುತ್ತಿದ್ದಾರೆ. ಅವರಲ್ಲಿ ಮುರಳಿ ಮನೋಹರ ಜೋಶಿ, ಎಲ್.ಕೆ.ಅಡ್ವಾಣಿ, ವಿಎಚ್.ಪಿ ನಾಯಕ ಅಶೋಕ್ ಸಿಂಘಾಲ್, ಹಿಂದುತ್ವವಾದಿ ಸುಬ್ರಮಣ್ಯನ್ ಸ್ವಾಮಿ, ಪ್ರವೀಣ್ ತೊಗಾಡಿಯ ಅವರ ಹೆಣ್ಣು ಮಕ್ಕಳು ಮುಸ್ಲೀಮರನ್ನು ವಿವಾಹವಾಗಿದ್ದಾರೆ.

ಹಾಗೆಯೇ ಶಿವಸೇನೆ ಮುಖ್ಯಸ್ಥ ಬಾಳಠಾಕ್ರೆ ಮೊಮ್ಮಗಳು ಮುಸ್ಲೀಮ್ ವ್ಯಕ್ತಿಯನ್ನು ವಿವಾಹ ಮಾಡಿಕೊಂಡಿದ್ದಾರೆ. ಸೈಫ್ ಅಲಿಖಾನ್, ಶಾರುಖ್ ಖಾನ್ ಮಕ್ಕಳು ಹಿಂದೂ ವ್ಯಕ್ತಿಗಳನ್ನು ವರಿಸಿಲ್ಲವೇ? ಇವರೆಲ್ಲರನ್ನೂ ಜೈಲಿಗೆ ಹಾಕುತ್ತೀರಾ ಎಂದು ವಿಶ್ವನಾಥ್ ತಮ್ಮದೇ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

12ನೇ ಶತಮಾನದ ಬಸವಣ್ಣ ಅಸ್ಪೃಶ್ಯರು ಸೇರಿ ಎಲ್ಲಾ ಜಾತಿಗಳಿಗೂ ಲಿಂಗದೀಕ್ಷೆ ನೀಡಿದರು. ಇದನ್ನು ಮರೆತಿರುವ ವೀರಶೈವ ಧರ್ಮದ ಮಠಗಳು ಬಾಯಿ ಬಿಡುತ್ತಿಲ್ಲ. ಬಸವಣ್ಣನ ಹೆಸರಿನಲ್ಲಿ ಪ್ರಶಸ್ತಿ ನೀಡುವ ಚಿತ್ರದುರ್ಗದ ಸ್ವಾಮೀಜಿ ಬಾಯಿ ಮುಚ್ಚಿಕೊಂಡಿದ್ದಾರೆ. ಸರ್ಕಾರದ ಅನುದಾನ ಪಡೆದಿರುವ ಸ್ವಾಮೀಜಿಗಳ ಬಾಯಿ ಮುಚ್ಚಿಸಿರಬಹುದು ಎಂದು ಟೀಕಿಸಿದರು.

ಕಾಯ್ದೆ ತರುವ ಮೊದಲು ಎಲ್ಲಾ ರಾಜಕೀಯ ಮುಖಂಡರು, ಧಾರ್ಮಿಕ ಮುಖಂಡರ ಸಲಹೆ, ಅಭಿಪ್ರಾಯಗಳನ್ನು ಪಡೆದು ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ವಿಶ್ವನಾಥ್ ಸಲಹೆ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular