ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೆ ಸಂಪೂರ್ಣ ಬದ್ಧತೆಯ ಭರವಸೆ ನೀಡಿರುವ ಫ್ರೆಂಚ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲಿ, ಭಾರತದ ಕೋರಿಕೆಯ ಮೇರೆಗೆ ಹೆಚ್ಚುವರಿ ರಫೇಲ್ ಯುದ್ದ ವಿಮಾನಗಳನ್ನು ಒದಗಿಸಲು ಮುಕ್ತವಾಗಿದೆ ಮತ್ತು ಸಿದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.
ಫ್ರಾನ್ಸ್ ನ ಭಾರತದ ಮಾಜಿ ರಾಯಭಾರಿ ಡಾ.ಮೋಹನ್ ಕುಮಾರ್ ಅವರೊಂದಿಗೆ ನಡೆದ ಸಂವಾದದಲ್ಲಿ ಈ ಹೇಳಿಕೆ ನೀಡಿದ್ದಾರೆ.
ಭಾರತದಿಂದ ಮಾಡಬಹುದಾದ ಯಾವುದೇ ಹೆಚ್ಚುವರಿ ಅಗತ್ಯತೆಗಳು ಅಥವಾ ವಿನಂತಿಗಳಿಗೆ ಉತ್ತರಿಸಲು ನಾವು ಸಿದ್ದರಿದ್ದೇವೆ. ಶೀಘ್ರವೇ ವಿಮಾನ ವಾಹಕ ನೌಕೆ ತಲುಪಿಸುತ್ತೇವೆ ಮತ್ತು ಭಾರತದ ಕೋರಿಕೆ ಮೇರೆಗೆ ನಾವು ಹೆಚ್ಚುವರಿ ರಫೇಲ್ ವಿಮಾನ ಗಳನ್ನು ಒದಗಿಸಲು ಸಿದ್ದರಿದ್ದೇವೆ ಎಂದು ಖಚಿತಪಡಿಸಿದರು.
ಫ್ರಾನ್ಸ್ ಭಾರತಕ್ಕೆ 30 ರಫೇಲ್ ಯುದ್ದ ವಿಮಾನಗಳನ್ನು ತಲುಪಿಸಿದ್ದು, ಮುಂದಿನ ವರ್ಷ ಏಪ್ರಿಲ್ ವೇಳೆಗೆ ಇನ್ನೂ ಆರು ರಫೇಲ್ ವಿಮಾನಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದರು.
ಮೇಕ್ ಇನ್ ಇಂಡಿಯಾ ಹಲವು ವರ್ಷಗಳಿಂದ ಫ್ರೆಂಚ್ ಉದ್ಯಮಕ್ಕೆ ವಿಶೇಷವಾಗಿ ಜಲಾಂತರ್ಗಾಮಿ ನೌಕೆಗಳಂತಹ ರಕ್ಷಣಾ ಸಾಧನಗಳಿಗೆ ವಾಸ್ತವವಾಗಿದೆ. ನಾವು ಬಹುಪಕ್ಷೀಯತೆ ಮತ್ತು ನಿಯಮಾಧಾರಿತ ಅಂತಾರಾಷ್ಟ್ರೀಯ ಕ್ರಮದ ರಕ್ಷಣೆಯನ್ನು ಉತ್ತೇಜಿಸುತ್ತೇವೆ ಎಂದು ಹೇಳಿದರು.
ವಿಶ್ವಸಂಸ್ಥೆಯ ಶಾಂತಿಪಾಲನ ಕಾರ್ಯಾಚರಣೆಗೆ ಭಾರತ ಅತಿದೊಡ್ಡ ಕೊಡುಗೆ ನೀಡುವ ದೇಶಗಳಲ್ಲಿ ಒಂದಾಗಿದೆ. ಫ್ರಾನ್ಸ್ ವಿಶ್ವದ ಅನೇಕ ಭಾಗಗಳಲ್ಲಿ ಅಂತಾರಾಷ್ಟ್ರೀಯ ಭದ್ರತೆಗೆ ಕೊಡುಗೆ ನೀಡುತ್ತದೆ. ಹಾಗೆಯೇ ಇಂಡೋ-ಪೆಸಿಫಿಕ್ ಅನ್ನು ಮುಕ್ತ ಮತ್ತು ಅಂತರ್ಗತ ಪ್ರದೇಶವಾಗಿ ರಕ್ಷಿಸಲು ಬಯಸುತ್ತೇವೆ ಎಂದು ಸ್ಪಷ್ಟಪಡಿಸಿದರು.