Friday, September 20, 2024
Google search engine
Homeಮುಖಪುಟಭಾರತ-ರಷ್ಯಾ ನಡುವೆ 21ನೇ ದ್ವಿಪಕ್ಷೀಯ ಶೃಂಗಸಭೆ - 28 ಒಪ್ಪಂದಗಳಿಗೆ ಸಹಿ

ಭಾರತ-ರಷ್ಯಾ ನಡುವೆ 21ನೇ ದ್ವಿಪಕ್ಷೀಯ ಶೃಂಗಸಭೆ – 28 ಒಪ್ಪಂದಗಳಿಗೆ ಸಹಿ

ಭಾರತ ದೀರ್ಘಕಾಲದ ಸ್ನೇಹಿತ. ನಾವು ಭಾರತವನ್ನು ಒಂದು ಮಹಾನ್ ಶಕ್ತಿಯಾಗಿ ನೋಡುತ್ತೇವೆ. ನಮ್ಮ ಮಿಲಿಟರಿ ಸಂಬಂಧಗಳು ಸಾಟಿಯಿಲ್ಲದವುಗಳಾಗಿವೆ. ನಾವು ಮಿಲಿಟರಿ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಹೆಚ್ಚು ಸಹಕರಿಸುತ್ತೇವೆ. ನಾವು ಒಟ್ಟಾಗಿ ಉನ್ನತ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತೇವೆ ಮತ್ತು ಭಾರತದಲ್ಲಿ ಉತ್ಪಾದಿಸುತ್ತೇವೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದರು.

ಭಾರತ ಮತ್ತು ರಷ್ಯಾ ನಡುವಿನ 21ನೇ ದ್ವಿಪಕ್ಷೀಯ ಶೃಂಗಸಭೆ ದೆಹಲಿಯಲ್ಲಿ ನಡೆಯಿತು. ಸಭೆಯಲ್ಲಿ ಪ್ರಧಾನ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಕ್ಷಣೆ, ವ್ಯಾಪಾರ, ಸಂಸ್ಕೃತಿ, ಬ್ಯಾಹ್ಯಾಕಾಶ, ಇಂಧನ ಮತ್ತು ಇತರೆ ಕ್ಷೇತ್ರಗಳು ಸೇರಿ 28 ಒಪ್ಪಂದಗಳಿಗೆ ಸಹಿ ಹಾಕಿದರು.

ರಷ್ಯಾದಿಂದ ಭಾರತಕ್ಕೆ ಎಸ್-400 ಕ್ಷಿಪಣಿ ಪೂರೈಕೆ ಮುಂದುವರೆಯಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ದೃಢಪಡಿಸಿದರು.

ಭಾರತ ದೀರ್ಘಕಾಲದ ಸ್ನೇಹಿತ. ನಾವು ಭಾರತವನ್ನು ಒಂದು ಮಹಾನ್ ಶಕ್ತಿಯಾಗಿ ನೋಡುತ್ತೇವೆ. ನಮ್ಮ ಮಿಲಿಟರಿ ಸಂಬಂಧಗಳು ಸಾಟಿಯಿಲ್ಲದವುಗಳಾಗಿವೆ. ನಾವು ಮಿಲಿಟರಿ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಹೆಚ್ಚು ಸಹಕರಿಸುತ್ತೇವೆ. ನಾವು ಒಟ್ಟಾಗಿ ಉನ್ನತ ತಂತ್ರಜ್ಞಾನ ಅಭಿವೃದ್ಧಿಪಡಿಸುತ್ತೇವೆ ಮತ್ತು ಭಾರತದಲ್ಲಿ ಉತ್ಪಾದಿಸುತ್ತೇವೆ ಎಂದು ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದರು.

ಐಸಿಸ್, ಅಲ್ ಖೈದಾ, ಎಲ್ಇಟಿ ಸೇರಿ ಯಾವುದೇ ಭಯೋತ್ಪಾದಕ ಗುಂಪುಗಳೀಗೆ ಆಶ್ರಯ, ತರಬೇತಿ, ಯೋಜನೆ ಮತ್ತು ಹಣಕಾಸು ಒದಗಿಸಲು ಆಫ್ಘಾನಿಸ್ತಾದ ನೆಲವನ್ನು ಬಳಸಬಾರದು ಎಂದು ಉಭಯ ನಾಯಕರು ಹೇಳಿದರು.

ಇಂಡೋ-ಪೆಸಿಫಿಕ್ ಪ್ರದೇಶದ ಪರಿಸ್ಥಿತಿಯ ಬಗ್ಗೆ ಚರ್ಚಿಸಿದ್ದು ಅಮೆರಿಕ, ಬ್ರಿಟನ್ ಮತ್ತು ಆಸ್ಟ್ರೇಲಿಯ ನಡುವಿನ ಹೊಸ ಎಯುಕೆಯುಎಸ್ ಒಪ್ಪಂದದ ಬಗ್ಗೆ ರಷ್ಯಾ ಅಧ್ಯಕ್ಷರು ಕಳವಳ ವ್ಯಕ್ತಪಡಿಸಿದರು ಎಂದು ವರದಿಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular