Friday, September 20, 2024
Google search engine
Homeಮುಖಪುಟಒಮಿಕ್ರಾನ್ ಸೋಂಕು ಹರಡುವಿಕೆ 3 ಪಟ್ಟು ಹೆಚ್ಚು - ಅಧ್ಯಯನ

ಒಮಿಕ್ರಾನ್ ಸೋಂಕು ಹರಡುವಿಕೆ 3 ಪಟ್ಟು ಹೆಚ್ಚು – ಅಧ್ಯಯನ

ಡೆಲ್ಟಾ ಅಥವಾ ಬೀಟಾ ತಳಿಗಳಿಗೆ ಹೋಲಿಸಿದರೆ ಒಮಿಕ್ರಾನ್ ರೂಪಾಂತರ ಸೋಂಕು ಹರಡುವ ತೀವ್ರತೆ ಮೂರು ಪಟ್ಟು ಹೆಚ್ಚಾಗಿದೆ ಎಂದು ದಕ್ಷಿಣ ಆಫ್ರಿಕಾದ ವಿಜ್ಞಾನಿಕಗಳ ಪ್ರಾಥಮಿಕ ಅಧ್ಯಯನ ತಿಳಿಸಿದೆ.

ದೇಶದ ಆರೋಗ್ಯ ವ್ಯವಸ್ಥೆಯಿಂದ ಸಂಗ್ರಹಿಸಿದ ದತ್ತಾಂಶವನ್ನು ಆಧರಿಸಿ ಸಂಶೋಧನೆಗಳು ನಡೆಯುತ್ತಿದ್ದು ಒಮಿಕ್ರಾನ್ ಸೋಂಕು ಹರಡುವ ಸಾಮರ್ಥ್ಯ ಹೆಚ್ಚಾಗಿದೆ ಎಂದು ಹೇಳಲಾಗಿದೆ.

ನವೆಂಬರ್ 27ರವರೆಗೆ 2.8 ಮಿಲಿಯನ್ ವ್ಯಕ್ತಿಗಳಲ್ಲಿ 35,670 ಶಂಕಿತ ಮರು ಸೋಂಕುಗಳು ಕಂಡುಬಂದಿವೆ. 90 ದಿನಗಳ ಅಂತರದಲ್ಲಿ ಪರೀಕ್ಷೆ ಮಾಡಿದರೆ ಪ್ರಕರಣಗಳು ಮರುಸೋಂಕು ಎಂದು ಪರಿಗಣಿಸಲಾಗಿದೆ ಎಂದು ಅಧ್ಯಯನದ ವರದಿ ಹೇಳಿದೆ.

ಎಲ್ಲಾ ಮೂರು ಅಲೆಗಳಲ್ಲಿ ಪ್ರಾಥಮಿಕ ಸೋಂಕುಗಳು ಸಂಭವಿಸಿದ ವ್ಯಕ್ತಿಗಳಲ್ಲಿ ಇತ್ತೀಚಿನ ಮರು ಸೋಂಕುಗಳು ಸಂಭವಿಸಿವೆ. ಹೆಚ್ಚಿನವು ಡೆಲ್ಟಾ ಪ್ರಾಥಮಿಕ ಸೋಂಕನ್ನು ಹೊಂದಿರುವುದು ಪತ್ತೆಯಾಗಿದೆ ಎಂದು ದಕ್ಷಿಣ ಆಫ್ರಿಕಾದ ಡಿಎಸ್ಐ-ಎನ್ಆರ್.ಎಫ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ಎಪಿಡೆಮಿಯೊಲಾಜಿಕಲ್ ಮಾಡೆಲಿಮಗ ಮತ್ತು ಅನಾಲಿಸಿಸ್ ನಿರ್ದೇಶಕ ಜೂಲಿಯೆಟ್ ಪುಲ್ಲಿಯಂ ಹೇಳಿದ್ದಾರೆ.

ಮುಂಚಿನ ಸೋಂಕಿನ ಇತಿಹಾಸ ಹೊಂದಿರುವ ವ್ಯಕ್ತಿಗಳನ್ನು ಒಳಗೊಂಡಂತೆ ಒಮಿಕ್ರಾನ್ ಸೋಂಕಿನೊಂದಿಗೆ ಸಂಬಂಧಿಸಿದ ರೋಗದ ತೀವ್ರತೆಯ ಮೇಲೆ ಡೇಟಾ ತುರ್ತಾಗಿ ಅಗತ್ಯವಿದೆ ಎಂದು ತಿಳಿಸಿದ್ದಾರೆ.

ಸೌತಾಂಪ್ಟನ್ ವಿಶ್ವವಿದ್ಯಾನಿಲಯದ ವಿಜ್ಞಾನಿ ಮೈಕೆಲ್ ಹೆಡ್ ಸಂಶೋಧನೆ ಉತ್ತಮ ಗುಣಮಟ್ಟದಿಂದ ಕೂಡಿದೆ ಎಂದು ಶ್ಲಾಘಿಸಿದ್ದಾರೆ. ಈ ವಿಶ್ಲೇಷಣೆಯು ಬಹಳ ಕಾಳಜಿಯನ್ನು ತೋರಿಸುತ್ತದೆ. ಹಿಂದಿನ ಸೋಂಕುಗಳಿಂದ ಪ್ರತಿರಕ್ಷೆಯನ್ನು ತುಲನಾತ್ಮಕವಾಗಿ, ಸುಲಭವಾಗಿ ಬೈಪಾಸ್ ಮಾಡಲಾಗಿದೆ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular