ಸಿಯೆರಾ ಲಿಯೋನ್ ರಾಜಧಾನಿ ಬಳಿ ತೈಲ ಟ್ಯಾಂಕರ್ ಸ್ಪೋಟಗೊಂಡಿದ್ದು ಕನಿಷ್ಠ 99 ಮಂದಿ ಸಾವನ್ನಪ್ಪಿದ್ದಾರೆ. ಸೋರಿಕೆ ಇಂಧನ ಸಂಗ್ರಹಿಸಲು ಜಮಾಯಿಸಿದ ಜನರಲ್ಲಿ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕನ್ನಾಟ್ ಆಸ್ಪತ್ರೆಯ ಶವಾಗಾರಕ್ಕೆ 92 ಶವಗಳನ್ನು ತರಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 30 ಮಂದಿ ತೀವ್ರವಾಗಿ ಸುಟ್ಟಿರುವ ಗಾಯಾಳುಗಳು ಬದುಕುಳಿಯುವ ನಿರೀಕ್ಷೆ ಇಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ಟ್ಯಾಂಕರ್ ಸ್ಫೋಟದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸ್ಪೋಟದ ನಂತರ ರಾತ್ರಿಯ ಆಕಾಶದಲ್ಲಿ ದೈತ್ಯ ಬೆಂಕಿಯ ಚೆಂಡು ಉರಿಯುತ್ತಿರುವ ದೃಶ್ಯಗಳು ಸೆರೆಯಾಗಿವೆ. ಸುಟ್ಟಗಾಯಗಳುಗಳು ನೋವಿನಿಂದ ಕೂಗುತ್ತಿರುವುದು, ಗಾಯಾಳುಗಳನ್ನು ಸಾಗಿಸುತ್ತಿರುವ ಮತ್ತು ಸುಟ್ಟ ಅವಶೇಷಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ದೃಶ್ಯಗಳು ಕಂಡುಬಂದಿವೆ.
ಸ್ಕಾಟ್ ಲೆಂಡ್ ಅಧ್ಯಕ್ಷ ಜೂಲಿಯಸ್ ಮಾಥಾ ಬಯೋ “ಇದೊಂದು ಭಯಾನಕ ಜೀವಹಾನಿ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಪ್ರೀತಿಪಾತ್ರರನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಮತ್ತು ಅಂಗವಿಕಲರಾದವರಿಗೆ ನನ್ನ ತೀವ್ರ ಸಂತಾಪಗಳು’ ಎಂದು ಟ್ವೀಟ್ ಮಾಡಿದ್ದಾರೆ.
ಉಪಾಧ್ಯಕ್ಷ ಮೊಹಮದ್ ಜುಲ್ಡೆಹ್ ಜಲ್ಲೋ “ರಾತ್ರಿಯಿಡೀ ಎರಡು ಆಸ್ಪತ್ರೆಗಳಿಗೆ ಭೇಟಿ ನೀಡಿದರು. ಸಿಯೇರಾ ಲಿಯೋನ ರಾಷ್ಟ್ರೀಯ ವಿಪತ್ತು ನಿರ್ವಹಣ ಸಂಸ್ಥೆ ಸಿಬ್ಬಂದಿ ದಣಿವರಿಯದೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ರಾಷ್ಟ್ರೀಯ ದುರಂತದಿಂದ ನಾವೆಲ್ಲರೂ ತೀವ್ರವಾಗಿ ದುಃಖಿತರಾಗಿದ್ದೇವೆ ಮತ್ತು ಇದು ನಮ್ಮ ದೇಶಕ್ಕೆ ನಿಜಕ್ಕೂ ಕಷ್ಟದ ಕಾಲ” ಎಂದು ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ ಎಂದು ಎಪಿ ಸುದ್ದಿ ಸಂಸ್ಥೆ ತಿಳಿಸಿದೆ.