Saturday, October 19, 2024
Google search engine
Homeಮುಖಪುಟನಟ ಪುನೀತ್ ಹೃದಯಾಘಾತದಿಂದ ನಿಧನ

ನಟ ಪುನೀತ್ ಹೃದಯಾಘಾತದಿಂದ ನಿಧನ

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 46 ವರ್ಷ ವಯಸ್ಸಾಗಿತ್ತು. ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಅಕ್ಟೋಬರ್ 29ರಂದು ಬೆಳಗ್ಗೆ ಪುನೀತ್ ಆರೋಗ್ಯದಲ್ಲಿ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಅಪ್ಪು ನಿಧನರಾಗಿದ್ದಾರೆ.

ಪುನೀತ್ ತಂದೆಯಂತೆಯೇ ನೇತ್ರದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ.

ನಿನ್ನೆ ಜಿಮ್ ಗೆ ಹೋಗಿ ಬಂದಿದ್ದರು. ರಾತ್ರಿ ಆರೋಗ್ಯವಾಗಿಯೇ ಇದ್ದ ಪುನೀತ್ ರಾಜ್ ಕುಮಾರ್ ತೀವ್ರ ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ.

ಅಪ್ಪು ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ನಟನಟಿಯರ ದಂಡೇ ವಿಕ್ರಂ ಆಸ್ಪತ್ರೆಗೆ ಬೇಟಿ ನೀಡಿತು. ಹಿರಿಯ ನಟ ರವಿಚಂದ್ರನ್, ಸೋದರರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ದರ್ಶನ್, ಯಶ್, ಗಣೇಶ್, ತಾರಾ, ಶೃತಿ, ಸುಧಾರಾಣಿ ಸೇರಿದಂತೆ ಹಲವರು ಭೇಟಿ ನೀಡಿ ಅಗಲಿದ ನಟನಿಗೆ ಕಂಬನಿ ಮಿಡಿದರು.

ಅಪ್ಪು ಕೊನೆಯುಸಿರೆಳೆದ ಸುದ್ದಿ ವ್ಯಾಪಕವಾಗಿ ಹರಡಿತು. ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ವಿಕ್ರಂ ಆಸ್ಪತ್ರೆಯ ಬಳಿ ಸೇರಿದರು. ಪೊಲೀಸರು ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸಪಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular