ಸಂಸತ್ ನ 24ಕ್ಕೂ ಹೆಚ್ಚು ಸಂಸದೀಯ ಸ್ಥಾಯಿ ಸಮಿತಿಗಳನ್ನು ಶನಿವಾರ ಪುನರ್ ರಚಿಸಲಾಗಿದ್ದು ಹಿರಿಯ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರನ್ನು ಸಿಬ್ಬಂದಿ ಮತ್ತು ಕಾನೂನು ಸಮಿತಿ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ. ಹಿಂದಿನ ಸಮಿತಿಗಳ ಇತರೆ ಅಧ್ಯಕ್ಷರನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.
ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿಯ ಮುಖ್ಯಸ್ಥರನ್ನಾಗಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರನ್ನು ಮರು ನೇಮಕ ಮಾಡಲಾಗಿದೆ. ಇದು ಭಾರತೀಯ ಜನತಾ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಎಂಪಿ ಶಶಿಕಾಂತ್ ದುಬೆ ಮಾಹಿತಿ ತಂತ್ರಜ್ಞಾನ ಅಧ್ಯಕ್ಷರಾಗಿದ್ದ ತರೂರ್ ಅವರು ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ದೂರಿದ್ದರು.
ದುಬೆ ತರೂರ್ ವಿರುದ್ಧ ಸದನದಲ್ಲಿ ಹಕ್ಕುಚ್ಯುತಿ ಮಂಡಿಸಿದ್ದರು. ಆದರೆ ಯಾವುದೇ ಪಕ್ಷದ ಸದಸ್ಯರು ಹಕ್ಕುಚ್ಯುತಿ ವಿರುದ್ಧ ಮತ ಚಲಾಯಿಸಿರಲಿಲ್ಲ. ಇದರ ನಡುವೆಯೇ ಶಶಿ ತರೂರ್ ಅವರನ್ನು ಐಟಿ ಸಮಿತಿಗೆ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಮುಂದುವರಿಯಲು ಅವಕಾಶ ಕಲ್ಪಿಸಲಾಗಿದೆ.
ಕಾಂಗ್ರೆಸ್ ನ ಆನಂದಶರ್ಮಾ ಅವರನ್ನು ಗೃಹ ಸಮಿತಿ ಆಧ್ಯಕ್ಷರನ್ನಾಗಿ, ಜಯರಾಮ್ ರಮೇಶ್ ಅವರನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಭರ್ತೃಹರಿ ಮೊಹತಬ್ ಅವರನ್ನು ಕಾರ್ಮಿಕ ಸಮಿತಿಗೆ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ.
ವಿಜಯಸಾಯಿ ರೆಡ್ಡಿ ಅವರನ್ನು ವಾಣಿಜ್ಯ ಸಮಿತಿಗೆ, ಕೆ.ಕೇಶವರಾವ್ ಅವರನ್ನು ಕೈಗಾರಿಕಾ ಸಮಿತಿಗೆ, ವಿನಯ ಸಹಸ್ರಬುದ್ದಿ ಅವರು ಶಿಕ್ಷಣ ಸಮಿತಿ ಮುಖ್ಯಸ್ಥರಾಗಿದ್ದಾರೆ. ರಾಮ್ ಗೋಪಾಲ್ ಯಾದವ್ ಅವರನ್ನು ಆರೋಗ್ಯ ಸಮಿತಿ ಅಧ್ಯಕ್ಷರನ್ನಾಗಿ, ಟಿ.ಸಿ. ವೆಂಕಟೇಶ್ ಅವರನ್ನು ಸಾರಿಗೆ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ.
ಜುಯಲ್ ಓರಂ ಅವರನ್ನು ರಕ್ಷಣಾ ಸಮಿತಿ ಅಧ್ಯಕ್ಷರನ್ನಾಗಿ, ಜಯಂತ ಸಿನ್ಹಾ ಅವರನ್ನು ಹಣಕಾಸು ಸಮಿತಿ ಸದಸ್ಯರಾಗಿ ಮುಂದುವರಿಸಲಾಗಿದೆ. ರಾಹುಲ್ ಗಾಂಧಿ ಮತ್ತು ಪಿ.ಪಿ. ಚೌದರಿ ಅವರನ್ನು ವಿದೇಶಾಂಗ ವ್ಯವಹಾರಗಳ ಸಮಿತಿ ಸದಸ್ಯರನ್ನಾಗಿ ಮುಂದುವರಿಸಲಾಗಿದೆ.
ಟಿಎಂಸಿ ಸಂಸದ ಡೆರೆಕ್ ಓ ಬ್ರಿಯನ್ ಅವರನ್ನು ಸಾರಿಗೆ ಸಮಿತಿ ಸದಸ್ಯರನ್ನಾಗಿ, ಆಭಿಷೇಕ್ ಮಾನು ಸಿಂಘ್ವಿ ಅವರನ್ನು ರಕ್ಷಣಾ ಸಮಿತಿ ಸದಸ್ಯರನ್ನಾಗಿ ಮರುನೇಮಕ ಮಾಡಿದೆ.


