Friday, September 20, 2024
Google search engine
Homeಮುಖಪುಟಕಾನೂನು ವ್ಯವಸ್ಥೆ ದೇಶೀಕರಣ ಆಗಬೇಕು- ಸಿಜೆಐ

ಕಾನೂನು ವ್ಯವಸ್ಥೆ ದೇಶೀಕರಣ ಆಗಬೇಕು- ಸಿಜೆಐ

ದೇಶದ ಕಾನೂನು ವ್ಯವಸ್ಥೆ ಭಾರತೀಯಕರಣವಾಗಬೇಕು ಮತ್ತು ನ್ಯಾಯ ವಿತರಣೆ ಪರಿಣಾಮಕಾರಿಯಾಗಿ ಸಿಗಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ದಿವಂಗತ ಮೋಹನ ಎಂ.ಶಾಂತನಗೌಡರ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದ ಎನ್.ವಿ.ರಮಣ, ನಮ್ಮ ನ್ಯಾಯಾಲಗಳು ಕಕ್ಷಿದಾರ ಕೇಂದ್ರಿತವಾಗಬೇಕು. ನ್ಯಾಯ ವಿತರಣೆ ಸರಳೀಕರಣವಾಗಬೇಕು ಎಂದು ಸಲಹೆ ನೀಡಿದರು.

ಈಗಿನ ನ್ಯಾಯ ವಿತರಣೆ ಸಾಮಾನ್ಯ ಜನರಿಗೆ ಅಡೆತಡೆಗಳನ್ನು ಉಂಟು ಮಾಡುತ್ತಿದೆ. ನ್ಯಾಯಾಲಯದ ಕೆಲಸ ಮತ್ತು ಶೈಲಿಯು ಭಾರತದ ಸಂಕೀರ್ಣತೆಗೆ ಹೊಂದುವುದಿಲ್ಲ. ನಮ್ಮ ವ್ಯವಸ್ಥೆ, ಅಭ್ಯಾಸ, ನಿಯಮಗಲು ವಸಾಹತು ಮೂಲದವಾಗಿದ್ದು, ಇದು ಭಾರತೀಯರಿಗೆ ಸೂಕ್ತವಾಗಿಲ್ಲ ಎಂದು ಹೇಳಿದರು.

ನಮ್ಮ ಸಮಾಜದಲ್ಲಿ ಪ್ರಾಯೋಗಿಕ ವಾಸ್ತವಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ನಮ್ಮ ನ್ಯಾಯ ವಿತರಣೆ ವ್ಯವಸ್ಥೆಯನ್ನು ದೇಶೀಕರಣಗೊಳಿಸಬೇಕು ಎಂದು ತಿಳಿಸಿದರು.

ಕೌಟುಂಬಿಕ ವಿವಾದಗಳ ಬಗೆಹರಿಸಿಕೊಳ್ಳಲು ಗ್ರಾಮೀಣ ಪ್ರದೇಶದಿಂದ ಬರುವ ಕಕ್ಷಿದಾರರಿಗೆ ವಾದ (ಸಮರ್ಥನೆ),ಮನವಿಗಳು ಅರ್ಥವಾಗುವುದಿಲ್ಲ. ಎಲ್ಲವೂ ಇಂಗ್ಲೀಷಿನಲ್ಲಿರುತ್ತದೆ. ಆದ್ದರಿಂದ ಇಂತಹ ಪ್ರಕರಣಗಳನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ಉದಾಹರಣೆ ನೀಡಿದರು.

ತೀರ್ಪುಗಳು ದೀರ್ಘವಾಗಿರುತ್ತವೆ. ಪಕ್ಷಗಾರರು ಅದನ್ನು ಅರ್ಥಮಾಡಿಕೊಂಡರೆ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಹಾಗಾಗಿ ನ್ಯಾಯಾಲಯಗಳು ಪಕ್ಷಗಾರಕೇಂದ್ರಿತವಾದರೆ ಅವರು ಫಲಾನುಭವಿಗಳಾಗುತ್ತಾರೆ. ನ್ಯಾಯ ವಿತರಣೆ ಸರಳೀಕರಣಗೊಳ್ಳಬೇಕು. ನ್ಯಾಯ ವಿತರಣೆ ಪಾರದರ್ಶಕ, ಪರಿಣಾಮಕಾರಿಯಾಗಿ ಕೈಗೆಟುಕುವಂತಿರಬೇಕು ಎಂದು ಪ್ರತಿಪಾದಿಸಿದರು.

ಯಾವುದೇ ನ್ಯಾಯ ವ್ಯವಸ್ಥೆಯ ಕೇಂದ್ರಬಿಂದು ಕಕ್ಷಿದಾರ ಮತ್ತು ನ್ಯಾಯ ಹುಡುಕುವವನು ಎಂಬುದನ್ನ್ಉ ನಾವು ಮರೆಯಬಾರದು ಎಂದು ಹೇಳಿದರು. ‘ಮಧ್ಯಸ್ಥಿಕೆ ಮತ್ತು ಸಮನ್ವಯದಂತಹ ಪರ್ಯಾಯ ಕಾರ್ಯವಿಧಾನಗಳ ಬಳಕೆಯು ಪಕ್ಷಗಾರರ ನಡುವಿನ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಸಂಪನ್ಮೂಲ ಉಳಿಯುತ್ತದೆ. ಇದು ದೀರ್ಘ ವಾದ ಮಾಡುವುದನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular