Friday, October 23, 2026
Google search engine
Homeಮುಖಪುಟಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ : ತುಮಕೂರು ಜಿಲ್ಲೆಯಲ್ಲಿ ಶೇ.71.56 ಮತದಾನ

ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ : ತುಮಕೂರು ಜಿಲ್ಲೆಯಲ್ಲಿ ಶೇ.71.56 ಮತದಾನ

ತುಮಕೂರು ಜಿಲ್ಲೆಯಲ್ಲಿ ಶುಕ್ರವಾರ ನಡೆದ ಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಶೇ.71.56ರಷ್ಟು ಮತದಾನವಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದ್ದಾರೆ.

ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ 21,226 ಪುರುಷ ಹಾಗೂ 14,599 ಮಹಿಳಾ ಮತದಾರರು ಸೇರಿ ಒಟ್ಟು 35,825 ಮತದಾರರು ಮತ ಚಲಾಯಿಸಿದ್ದು, ಜಿಲ್ಲೆಯಲ್ಲಿ ಶೇ.71.56ರಷ್ಟು ಮತದಾನವಾಗಿದೆ ಎಂದು ಹೇಳಿದ್ದಾರೆ.

ಪಾವಗಡದಲ್ಲಿ ಶೇ.73.10ರಷ್ಟು, ಮಧುಗಿರಿ ಶೇ.66.62, ಶಿರಾದಲ್ಲಿ ಶೇ.67.98, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಶೇ. 67.70, ತಿಪಟೂರಿನಲ್ಲಿ ಶೇ.73.84, ತುರುವೇಕೆರೆಯಲ್ಲಿ ಶೇ.76.95, ಕುಣಿಗಲ್ ತಾಲೂಕಿನಲ್ಲಿ ಶೇ. 89.25, ಗುಬ್ಬಿಯಲ್ಲಿ 78.88ರಷ್ಟು, ತುಮಕೂರು ನಗರ ಶೇ.65.80ರಷ್ಟು, ತುಮಕೂರು ಗ್ರಾಮಾಂತರ ಶೇ.73.40, ಕೊರಟಗೆರೆಯಲ್ಲಿ ಶೇ.75.45ರಷ್ಟು ಮತ ಚಲಾಯಿಸಲಾಗಿದೆ.

ಪಾವಗಡ ತಾಲೂಕಿನಲ್ಲಿ 3460, ಮಧುಗಿರಿ ತಾಲೂಕು- 3129, ಶಿರಾ ತಾಲೂಕು-3971, ಚಿಕ್ಕನಾಯಕನಹಳ್ಳಿ ತಾಲೂಕು-2297, ತಿಪಟೂರು ತಾಲೂಕು-3065, ತುರುವೇಕೆರೆ ತಾಲೂಕು-2063, ಕುಣಿಗಲ್ ತಾಲೂಕು-2017, ಗುಬ್ಬಿ ತಾಲೂಕು-3029, ತುಮಕೂರು ನಗರ-7075, ತುಮಕೂರು ಗ್ರಾಮಾಂತರ-3568, ಹಾಗೂ ಕೊರಟಗೆರೆ-2151 ಪದವೀಧರ ಮತದಾರರು ಮತ ಚಲಾಯಿಸಿದ್ದಾರೆ ಎಂದು ಹೇಳಿದ್ದಾರೆ.

ಭಾರತ ಚುನಾವಣಾ ಆಯೋಗವು ಘೋಷಿಸಿದ್ದ ವೇಳಾಪಟ್ಟಿಯಂತೆ ಜಿಲ್ಲೆಯ 80 ಮತಗಟ್ಟೆಗಳಲ್ಲಿ ಶುಕ್ರವಾರ ಬೆಳಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಮತದಾನದಲ್ಲಿ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಚ್ಚಲಾಯಿತು.

ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಪಕ್ಷದಿಂದ ಶಶಿ ಹುಲಿಕುಂಟೆಮಠ್, ಭಾರತೀಯ ಜನತಾ ಪಾರ್ಟಿಯಿಂದ ಕೆ.ಎಂ. ಸುರೇಶ(ಸೋಮೇಶ್ವರ), ಸರ್ವ ಜನತಾ ಪಾರ್ಟಿಯಿಂದ ಜಿ.ಸಿ. ಪಟೇಲ್, ಪಕ್ಷೇತರರಾಗಿ ಕಪನಿಗೌಡ, ಚಿಕ್ಕರಾಜು ಎಸ್. ಯಾದವ್, ಲಕ್ಷö್ಮಯ್ಯ ಆರ್.(ಆರ್.ಎಲ್.), ಲಕ್ಷ್ಮೀಕಾಂತ ಎಸ್. ಯಾದವ್, ಶಶಿ ಹುಲೀಕಟ್ಟಿ, ಸೈಯದ್ ಅಫಾಖ್ ಅಹಮದ್, ಅಡ್ವೊಕೇಟ್ ಬರೀದ್ ಸೇರಿದಂತೆ 10 ಮಂದಿ ಚುನಾವಣಾ ಕಣದಲ್ಲಿದ್ದರು.

ಚುನಾವಣೆಯ ಮತ ಎಣಿಕೆಯು ಅಕ್ಟೋಬರ್ 27ರಂದು ಬೆಂಗಳೂರಿನ ಡಾ. ಅಂಬೇಡ್ಕರ್ ವೀದಿಯಲ್ಲಿರುವ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular