Friday, October 23, 2026
Google search engine
Homeಮುಖಪುಟಆಗ್ನೇಯ ಪದವೀಧರರ ಕ್ಷೇತದ ಚುನಾವಣೆ:ಎಲ್ಲೆಡೆ ಶಾಂತಿಯುತ ಮತದಾನ

ಆಗ್ನೇಯ ಪದವೀಧರರ ಕ್ಷೇತದ ಚುನಾವಣೆ:ಎಲ್ಲೆಡೆ ಶಾಂತಿಯುತ ಮತದಾನ

ಆಗ್ನೇಯ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಶುಕ್ರವಾರ ಬೆಳಗ್ಗೆ 8ಗಂಟೆಯಿಂದಲೇ ಆರಂಭವಾಗಿದ್ದು ಎಲ್ಲೆಡೆ ಶಾಂತಿಯುತ ಮತದಾನ ನಡೆದಿದೆ. ನೋಂದಾಯಿತ ಪದವೀಧರ ಮತದಾರರು ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಮಧ್ಯಾಹ್ನ 2ಗಂಟೆ ವೇಳೆಗೆ ಶೇ.45.41ರಷ್ಟು ಮತದಾನವಾಗಿದೆ.

ಪಾವಗಡದಲ್ಲಿ ಶೇ.44.96ರಷ್ಟು, ಮಧುಗಿರಿ ಶೇ.39.39, ಶಿರಾದಲ್ಲಿ ಶೇ.37.05, ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಶೇ. 40.73, ತಿಪಟೂರಿನಲ್ಲಿ ಶೇ.41.03, ತುರುವೇಕೆರೆಯಲ್ಲಿ ಶೇ.53.23, ಕುಣಿಗಲ್ ತಾಲೂಕಿನಲ್ಲಿ ಶೇ. 59.38, ಗುಬ್ಬಿಯಲ್ಲಿ 54.90ರಷ್ಟು, ತುಮಕೂರು ನಗರ ಶೇ.45.05ರಷ್ಟು, ತುಮಕೂರು ಗ್ರಾಮಾಂತರ ಶೇ.49.95, ಕೊರಟಗೆರೆಯಲ್ಲಿ ಶೇ.47.63ರಷ್ಟು ಮತ ಚಲಾಯಿಸಲಾಗಿದೆ.

ತುಮಕೂರು ನಗರ ಸೇರಿದಂತೆ ಎಲ್ಲಾ ಹತ್ತು ತಾಲೂಕು ಕೇಂದ್ರಗಳಲ್ಲೂ ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಬೆಳಗ್ಗೆಯಿಂದಲೇ ಪದವೀಧರ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.

ತುಮಕೂರಿನ ಬಿ.ಹೆಚ್. ರಸ್ತೆಯಲ್ಲಿರುವ ಸಿದ್ದಗಂಗಾ ಪದವಿ ಕಾಲೇಜಿನ ಮತಗಟ್ಟೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಗೆ ಸರದಿಯ ಸಾಲಿನಲ್ಲಿ ನಿಂತು ಮತದಾರರು ಮತಚಲಾಯಿಸಿದರು.

ತುಮಕೂರಿನ ಕ್ಯಾತ್ಸಂದ್ರದ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿರುವ ಮತಗಟ್ಟೆಯಲ್ಲಿ ತುಮಕೂರು ನಗರದ ಮಾಜಿ ಶಾಸಕ ಡಾ. ರಫೀಕ್ ಅಹಮದ್ ಮತದಾನ ಮಾಡಿದರು.

ಆಗ್ನೇಯ ಪದವಿಧರರ ಕ್ಷೇತ್ರದ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ. ಸುರೇಶ್‌ಗೌಡ ಶುಕ್ರವಾರ ಮತ ಚಲಾಯಿಸಿದರು.
ಗ್ರಾಮಾಂತರ ಕ್ಷೇತ್ರದ ಗೂಳೂರಿನ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಸುರೇಶ್‌ಗೌಡ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ತುಮಕೂರಿನ ಬಿ.ಹೆಚ್. ರಸ್ತೆಯಲ್ಲಿರುವ ಸಿದ್ದಗಂಗಾ ಕಾಲೇಜಿನ ಮತಗಟ್ಟೆಯಲ್ಲಿ ಶಾಸಕ ಜಿ.ಬಿ. ಜ್ಯೋತಿಗಣೇಶ್ ಮತ ಚಲಾಯಿಸಿದರು.

ಎಲ್ಲೆಡೆ ಮತದಾನ ಬಿರುಸಿನಿಂದ ನಡೆದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular