Tuesday, January 20, 2026
Google search engine
Homeಮುಖಪುಟಜ.17ರಂದು ಪ್ರೊ. ಬರಗೂರು ನಿರ್ದೇಶನದ 'ತಾಯಿ ಕಸ್ತೂರ್ ಗಾಂಧಿ' ಸಿನೆಮಾ ಪ್ರದರ್ಶನ

ಜ.17ರಂದು ಪ್ರೊ. ಬರಗೂರು ನಿರ್ದೇಶನದ ‘ತಾಯಿ ಕಸ್ತೂರ್ ಗಾಂಧಿ’ ಸಿನೆಮಾ ಪ್ರದರ್ಶನ

ಅಮೆರಿಕಾದ ಅಂತರರಾಷ್ಟ್ರೀಯ ಚಿತ್ರೋತ್ಸವ ಸ್ಪರ್ಧೆಯಲ್ಲಿ ಇಂಗ್ಲೀಷೇತರ ಭಾಷೆಗಳಲ್ಲಿ ಬಂದ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದ ಏಕೈಕ ಕನ್ನಡ ಸಿನಿಮಾ ಇದೇ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಸಂಕಲನ ಪ್ರಶಸ್ತಿಗೆ ಭಾಜನವಾದ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ನಿರ್ದೇಶನದ ಜನಮಿತ್ರ ಮೂವೀಸ್‌ನ ‘ತಾಯಿ ಕಸ್ತೂರ್ ಗಾಂಧಿ’ ಚಿತ್ರ ಜ.17ರಂದು ಅಪರಾಹ್ನ 3.30ಕ್ಕೆ ತುಮಕೂರಿನ ಕನ್ನಡ ಭವನದಲ್ಲಿ ಪ್ರದರ್ಶನಗೊಳ್ಳಲಿದೆ.

ರಾಜ್ಯಾದ್ಯಂತ ಚಿತ್ರಯಾತ್ರೆಯ ಉದ್ಘಾಟನೆಯನ್ನು ಲೇಖಕ ಹಾಗೂ ಪತ್ರಕರ್ತ ರಘುನಾಥ್ ಚ.ಹ ನೇರವೇರಿಸುವರು. ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಆಶಯ ನುಡಿಗಳನ್ನಾಡುವರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಬಾಲಗುರುಮೂರ್ತಿ, ಕಸಾಪ ಜಿಲ್ಲಾಧ್ಯಕ್ಷೆ ಸಿದ್ದಲಿಂಗಪ್ಪ ಭಾಗವಹಿಸುವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಚಿಂತಕ ದೊರೈರಾಜ್ ವಹಿಸುವರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular