ಮಸ್ಟ್
ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ತೀವ್ರ ಪೆಟ್ಟಾಗಿ ಮೂರು ಮಂದಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸುಗ್ಗನಹಳ್ಳಿ ಗ್ರಾಮದ ಬಳಿ ಮಂಗಳವಾರ ನಡೆದಿದೆ.
ಮೃತರನ್ನು ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಹೋಬಳಿ ಉಂಗುರ ಗ್ರಾಮದ 65 ವರ್ಷದ ಹುಚ್ಚಪ್ಪ, ಅವರ ಮೊಮ್ಮಗ 11 ವರ್ಷದ ಪ್ರೀತಮ್, ಅವರ ನಾದಿನಿ 45 ವರ್ಷದ ನಿಂಗಮ್ಮ ಎಂದು ಗುರುತಿಸಲಾಗಿದೆ.
ಹುಚ್ಚಪ್ಪ ಮತ್ತು ನಿಂಗಮ್ಮ, ಮೊಮ್ಮಗ ಪ್ರೀತಮ್ ಉಂಗ್ರ ಗ್ರಾಮದಿಂದ ದ್ವಿಚಕ್ರ ವಾಹನದಲ್ಲಿ ಹಳೇಊರು ಗ್ರಾಮಕ್ಕೆ ತೆರಳುತ್ತಿದ್ದಾಗ ಸುಗ್ಗನಹಳ್ಳಿ ಗ್ರಾಮದ ಹತ್ತಿರ ಈ ಘಟನೆ ನಡೆದಿದೆ.
ಹುಚ್ಚಪ್ಪ ಮತ್ತು ಪ್ರೀತಮ್ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ನಿಂಗಮ್ಮ ಚುಂಚನಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


