ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆದಿರುವುದನ್ನು ಪ್ರಗತಿಪರ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಗವಾಯಿ ಅವರು ಯಾವುದೇ ರಾಜಕೀಯ ಪಕ್ಷದ ಜೊತೆ ಸಂಬಂಧ ಹೊಂದಿದವರಲ್ಲ. ಅವರು ಕಟ್ಟಾ ಸಂವಿಧಾನದ ತತ್ವಗಳು ಮತ್ತು ಅಂಬೇಡ್ಕರ್‌ವಾದಿಯಾಗಿದ್ದಾರೆ, ಆರ್‌ಎಸ್‌ಎಸ್‌ನ ದಸರಾ ಆಹ್ವಾನವನ್ನು ತಿರಸ್ಕರಿಸಿದಕ್ಕಾಗಿ ಅವರ ಮೇಲೆ ಶೂ ಎಸೆದು ಸನಾತನವಾದಿಗಳಿಗೆ ಜಯವಾಗಲಿ ಎಂದು ಕೂಗಿರುವುದು ಸಮರ್ಥಿನೀಯವಲ್ಲ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸದಸ್ಯರು ಹೇಳಿದ್ದಾರೆ.
ದಲಿತ ವರ್ಗಕ್ಕೆ ಸೇರಿದ ಜಸ್ಟೀಸ್ ಗವಾಯಿ ಅವರ ಮೇಲೆ ಶೂ ಎಸೆದು ಸನಾತನಿಯ ಈ ಕ್ರೌರ್ಯ ದೇಶದ ನ್ಯಾಯ ವ್ಯವಸ್ಥೆ ಮತ್ತು ಸಂವಿಧಾನದ ಮೇಲೆ ನಡೆದ ದಾಳಿಯಾಗಿದೆ. ಇಡೀ ನಾಗರೀಕ ಸಮಾಜವೇ ತಲೆತಗ್ಗಿಸುವಂತಹ ಘಟನೆಯಾಗಿದೆ ಎಂದು ಹಿರಿಯ ಚಿಂತಕ ಕೆ. ದೊರೈರಾಜ್ ಖಂಡಿಸಿದ್ದಾರೆ.
ಈ ಘಟನೆ ಕಪ್ಪು ಮಸಿ ಬಳಿದಂತಾಗಿದೆ, ಜಸ್ಟೀಸ್ ಗವಾಯಿರವರ ಮೇಲೆ ಹಲ್ಲೆ ಯತ್ನ ಹಿಂದುರಾಷ್ಟ್ರ ನಿರ್ಮಾಣದ ವಿಚಾರಕ್ಕೆ ತಾವು ಯಾರಾದರೂ ಪ್ರಶ್ನೆ ಮಾಡಿದರೆಯಾರನ್ನು ಬಿಡುವುದಿಲ್ಲ ಎನ್ನುವುದಕ್ಕೆ ಘಟನೆಯೇ ಸಾಕ್ಷಿಯಾಗಿದೆ. ಇದು ಮನುವಾದಿಗಳ ಮನಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ ಎಂದು ಹೇಳಿದರು.
ಎ.ನರಸಿಂಹಮೂರ್ತಿ, ಉಮೇಶ್, ಸುಬ್ರಮಣ್ಯ, ಅರುಣ್, ತಿರುಮಲಯ್ಯ, ಕಲ್ಯಾಣಿ, ಪಾರ್ವತಮ್ಮ, ಕಿಶೋರ್, ಅಶ್ವತ್ಥಯ್ಯ, ಕಲ್ಪನಾ ಇದ್ದರು.


