ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಲ್ಲ್ಲಿ ಛಲವಾದಿ/ಹೊಲೆಯ ಸಮುದಾಯವು ಪಾಲ್ಗೊಂಡು ಧರ್ಮದ ಕಾಲಂನಲ್ಲಿ ಬೌದ್ಧ ಎಂದೂ, ಜಾತಿ ಕಾಲಂನಲ್ಲಿ ಪರಿಶಿಷ್ಠ ಜಾತಿಯೆಂದು ಹಾಗೂ ಉಪಜಾತಿ ಕಾಲಂನಲ್ಲಿ ಛಲವಾದಿ/ಹೊಲೆಯ ಎಂದು ನಮೂದಿಸಬೇಕೆಂದು ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟದ ತುಮಕೂರು ಜಿಲ್ಲಾ ಸಂಚಾಲಕ ಸಿ.ಭಾನುಪ್ರಕಾಶ್ ಮನವಿ ಮಾಡಿದ್ದಾರೆ.
ತುಮಕೂರಿನಲ್ಲಿ ಸಭೆ ನಡೆಸಿದ ಬಲಗೈ ಸಮುದಾಯದ ಮುಖಂಡರು, ಪರಿಶಿಷ್ಠ ಜಾತಿಯ ಛಲವಾದಿ/ಹೊಲೆಯ ಸಮುದಾಯದವರು ಈ ಸಮೀಕ್ಷೆಯ ಜಾತಿ ಕಾಲಂ 9ರಲ್ಲಿ ಕಡ್ಡಾಯವಾಗಿ ಎಕೆ, ಎಡಿ, ಎಎ ಎಂದು ನಮೂದಿಸಬಾರದು ಎಂದು ಛಲವಾದಿ ಸಮುದಾಯದ ಹಿರಿಯ ಮುಖಂಡ ಶ್ರೀನಿವಾಸಯ್ಯ ಮನವಿ ಮಾಡಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗವು ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ, ಸಮೀಕ್ಷೆಯಲ್ಲಿ ಜಿಲ್ಲೆಯ ಛಲವಾದಿ/ಹೊಲೆಯ ಜಾತಿಯವರು ಕಡ್ಡಾಯವಾಗಿ ಈ ಸಮೀಕ್ಷೆಯಲ್ಲಿ ಭಾಗವಹಿಸಬೇಕೆಂದು ಛಲವಾದಿ ಸಮುದಾಯದ ಪಿ.ಚಂದ್ರಪ್ಪ ಕರೆ ನೀಡಿದ್ದಾರೆ.
ಜಾತಿವಾರು ಸಮೀಕ್ಷೆಯಲ್ಲಿ ಜಿಲ್ಲೆಯ ಛಲವಾದಿ / ಹೊಲೆಯ ಜಾತಿಯವರು ನಾಗಮನೋಹನ್‌ದಾಸ್ ಆಯೋಗ ನಡೆಸಿದ ಸಮೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳದೇ ಇರುವುದರಿಂದ ಸರ್ಕಾರ ಕೈಗೊಂಡ ತೀರ್ಮಾನದಿಂದ ನಮ್ಮ ಸಮುದಾಯಕ್ಕೆ ಆಗಿರುವ ಅನ್ಯಾಯವನ್ನು ಸರಿದೂಗಿಸಿಕೊಳ್ಳಲು ಹಿಂದುಳಿದ ವರ್ಗಗಳ ಆಯೋಗ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ನಮ್ಮ ಪಾಲನ್ನು ಪಡೆಯಲು ಸಹಕರಿಸಬೇಕೆಂದು ಮುಖಂಡ ಬಿ.ಎಸ್.ದಿನೇಶ್ ವಿನಂತಿಸಿದ್ದಾರೆ.
ಛಲವಾದಿ ಶೇಖರ್, ಹೆಚ್, ಸಿದ್ಧಲಿಂಗಯ್ಯ, ಕಿಟ್ಟಿ ಹೆಗ್ಗೆರೆ, ಶಿರಾ ಬಲರಾಜು, ಕುಣಿಗಲ್ ದಾಸಪ್ಪ, ದಲಿತ್ ನಾರಾಯಣ್, ಚಿಕ್ಕಣ್ಣ, ಪಾವಗಡ ಕೆ.ಟಿ.ನಾಗರಾಜು, ಕಣಮಪ್ಪ, ಮಧುಗಿರಿ ಸಿದ್ಧಲಿಂಗಪ್ಪ, ತುರುವೇಕೆರೆ ಜಯರಾಮಯ್ಯ, ಕಲ್ಲಬೋರನಹಳ್ಳಿ, ಸಂಪತ್‌ಕುಮಾರ್, ಚಿರಂಜೀವಿ ಇದ್ದರು.


