ತುಮಕೂರು ನಗರದ ಅಮಾನಿಕೆರೆಯಲ್ಲಿ ಸಾರ್ವಜನಿಕರಿಗಾಗಿ ದೋಣಿ ವಿಹಾರವನ್ನು ಪುನರ್ ಆರಂಭಿಸಲಾಯಿತು. ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ ಸಂದರ್ಭಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಅವರು ದೋಣಿ ವಿಹಾರ ಉದ್ಘಾಟಿಸಿದರು.
ನಂತರ ಸಚಿವ ಡಾ.ಪರಮೇಶ್ವರ್, ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಬಿ.ಸುರೇಶ್‌ಗೌಡ, ಸಚಿವರ ಪತ್ನಿ ಕನ್ನಿಕಾ ಪರಮೇಶ್ವರ್, ಜಿಲ್ಲಾಧಿಕಾರಿ ಶುಭಾಕಲ್ಯಾಣ್, ಜಿಲ್ಲಾ ಪಂಚಾಯ್ತಿ ಸಿಇಓ ಜಿ.ಪ್ರಭು, ಎಸ್ಪಿ ಕೆ.ವಿ.ಅಶೋಕ್, ನಗರಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ.ತಿಪ್ಪೇಸ್ವಾಮಿ. ಉಪವಿಭಾಗಾಧಿಕಾರಿ ನಾಹಿದಾ ಜಮ್‌ಜಮ್, ತಹಶೀಲ್ದಾರ್ ರಾಜೇಶ್ವರಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರಗೌಡ ಮೊದಲಾದವರು ದೋಣಿ ವಿಹಾರ ಮಾಡಿ ಸಂಭ್ರಮಿಸಿದರು.

ಎಸ್ಕೇಪ್2 ಎಕ್ಸ್ಫ್ಲೋರ್ ಸಂಸ್ಥೆಯವರು ಅಮಾನಿಕೆರೆಯ ದೋಣಿ ವಿಹಾರವನ್ನು ನಿರ್ವಹಣೆ ಮಾಡುತ್ತಿದ್ದಾರೆ. ಮೂರು ಮಾದರಿಯ ಬೋಟ್‌ಗಳು ಸಾರ್ವಜನಿಕರ ವಿಹಾರಕ್ಕೆ ಸಿದ್ಧ ಇವೆ. ಎಲ್ಲವಕ್ಕೂ ಪ್ರತ್ಯೇಕ ಸೇವಾದರ ನಿಗದಿ ಮಾಡಲಾಗಿದೆ.
ಬೋಟಿಂಗ್ ವೇಳೆ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ದೋಣಿ ವಿಹಾರ ಮಾಡುವವರಿಗೆ ಸುರಕ್ಷಾ ಕವಚ ನೀಡಲಾಗುತ್ತದೆ. ಗೋವಾದ ವಾಟರ್ ಸ್ಪೋರ್ಟ್ಸ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ಪರಿಣಿತ ತರಬೇತಿದಾರರು ದೋಣಿ ನಡೆಸುವರು.


