ಮಹಿಳೆಯೊಬ್ಬರನ್ನು ಕೊಲೆಗೈದು ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ರಸ್ತೆಯ ಬದಿಯಲ್ಲಿ ಎಲ್ಲೆಂದರಲ್ಲಿ ಎಸೆದಿರುವ ಘಟನೆ ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನಲ್ಲಿ ನಡೆದಿದೆ.
ದುಷ್ಕರ್ಮಿಗಳು ಮಹಿಳೆಯ ಕೊಲೆ ಮಾಡಿ ಎರಡೂ ಕೈಗಳನ್ನು ಬೇರೆ ಬೇರೆ ಜಾಗದಲ್ಲಿ ಎಸೆದು ಹೋಗಿದ್ದಾರೆ. ಕರುಳುಗಳನ್ನು ಚೀಲದಲ್ಲಿ ಕಟ್ಟಿ ಮತ್ತೊಂದು ಕಡೆ ಎಸೆಯಲಾಗಿದೆ. ಇನ್ನಷ್ಟು ದೊರದಲ್ಲಿ ದೇಹದ ಮುಂಡದ ಭಾಗವನ್ನು ಛಿದ್ರಛಿದ್ರಗೊಳಿಸಿ ಬಿಸಾಡಲಾಗಿದೆ.
ಕೈ ಒಂದು ಕಡೆ, ಕರುಳೊಂದು ಕಡೆ, ಮುಂಡವೇ ಇನ್ನೂಂದು ಕಡೆ, ಸಿದ್ದರಬೆಟ್ಟದಿಂದ ತೋವಿನಕೆರೆಗೆ ಸಂರ್ಪಕಿಸುವ ರಸ್ತೆ ಬದಿಯಲ್ಲೂ ಕೂಡ ಮೂಟೆ ಕಟ್ಟಿದ ಚೀಲ ಪತ್ತೆಯಾಗಿದ್ದು ಅದರಲ್ಲಿ ಮಹಿಳೆಯ ಹೊಟ್ಟೆಯ ಭಾಗ ಪತ್ತೆಯಾಗಿದೆ,
ಕೊರಟಗೆರೆ ತಾಲೂಕಿನಲ್ಲಿ ಇಂತಹ ಘಟನೆ ಬೆಳಕಿಗೆ ಬಂದಿದ್ದು ತಾಲೂಕಿನ ಚಿಂಪುಗಾನಹಳ್ಳಿ ಹೊರವಲಯದ ಮುತ್ಯಾಲಮ್ಮ ದೇವಾಲಯದ ಬಳಿ ಕತ್ತರಿಸಿದ ಒಂದು ಕೈ ಪತ್ತೆಯಾದರೆ, ಆ ಜಾಗದಿಂದ ಸುಮಾರು 1 ಕಿ.ಮೀ. ದೂರದಲ್ಲಿ ರಸ್ತೆಯ ಬದಿಯಲ್ಲಯೇ ಮತ್ತೊಂದು ಕೈ ಪತ್ತೆಯಾಗಿದೆ, ಅಲ್ಲಿಂದ ಸ್ವಲ್ಲವೇ ದೂರದಲ್ಲಿ ಮನುಷ್ಯನ ಕರುಳುಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಕಟ್ಟಿ ಎಸೆಯಲಾಗಿದೆ, ಅದರ ಸ್ಪಲ್ಪ ದೂರದಲ್ಲಿ ಎದೆಯ ಭಗವನ್ನು ಛಿದ್ರ ಛಿದ್ರಗೊಳಿಸಿ ಬಿಸಾಡಲಗಿದೆ, ಮೇಲ್ಮೋಟಕ್ಕೆ ಇದು ಮಹಿಳೆಯ ಮೃತದೇಹ ಎನ್ನುವುದು ತಿಳಿದು ಬಂದಿದ್ದು ಇದುವರೆಗೂ ರುಂಡ ಮಾತ್ರ ಪತ್ತೆಯಾಗಿಲ್ಲ,
ಘಟನಾ ಸ್ಥಳಕ್ಕೆ ತುಮಕೂರು ಎಸ್ಟಿ ಅಶೊಕ್ ವೆಂಕಟ್ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಆರೋಪಿಗಳ ಪತ್ತೆಗೆ ಮರ್ಗದರ್ಶನ ನೀಡಿದ್ದು ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತ ಮಹಿಳೆಯ ರುಂಡವನ್ನು ಪತ್ತೆ ಮಡಿ ಮೃತ ಮಹಿಳೆಯ ಗುರುತು ಪತ್ತೆಹಚ್ಚಲು ಕಸರತ್ತು ನಡೆಸುತ್ತಿದ್ದಾರೆ, ಜೊತೆಗೆ ಈ ಕೃತ್ಯ ಎಸಗಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ, ಈಗಾಗಲೆ ಜಿಲ್ಲೆ ಸೇರಿದಂತೆ ಆಂಧ್ರ ಪೊಲೀಸರಿಗೂ ಮಾಹಿತಿ ನೀಡಲಾಗಿದೆ, ಸ್ಥಳಕ್ಕೆ ಡಿವೈಎಸ್ಪಿ ಕುಮಾರಶರ್ಮ, ಕೊರಟಗೆರೆ ಸಿಪಿಐ ಅನಿಲ್, ಪಿಎಸೈ ತೀಥೇಶ್ ನೀಡಿ ಅರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.


