ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಕೊಳಾಲ ಸರ್ಕಲ್ ನಲ್ಲಿ ಗೊಬ್ಬರ ತುಂಬಿದ್ದ ಲಾರಿಯ ಬ್ರೇಕ್ ವಿಫಲವಾಗಿ ಬ್ಯಾಂಗಲ್ ಸ್ಟೋರ್ ಮತ್ತು ಬೇಕರಿಗೆ ನುಗ್ಗಿದ ಪರಿಣಾಮ ಸ್ಥಳದಲ್ಲಿಯೇ ಮೂವರು ಮೃತಪಟ್ಟಿದ್ದಾರೆ.
ಮೃತರನ್ನು ಕೊರಟಗೆರೆ ತಾಲ್ಲೂಕಿನ, ಕಾಟೇನಹಳ್ಳಿ ಗ್ರಾಮದ 70 ವರ್ಷದ ರಂಗಸ್ವಾಮಯ್ಯ, ಪುರದಹಳ್ಳಿಯ 65 ವರ್ಷದ ಬೈಲಪ್ಪ, ಬ್ಯಾಂಗಲ್ ಸ್ಟೋರ್ ಮಾಲಿಕ ಜಯಣ್ಣ(53 ವರ್ಷ)ಎಂದು ಗುರುತಿಸಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಕಾಂತರಾಜು, ಮೋಹನಕುಮಾರ್ ಅವರನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕೊರಟಗೆರೆ ತಾಲೂಕಿನ ಕೋಳಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


