Thursday, January 29, 2026
Google search engine
Homeಮುಖಪುಟಜು.27ರಂದು ರಾಜ್ಯಮಟ್ಟದ ಸಾಹಿತ್ಯ ಸಂವಾದ

ಜು.27ರಂದು ರಾಜ್ಯಮಟ್ಟದ ಸಾಹಿತ್ಯ ಸಂವಾದ

ಬಂಡಾಯ ಸಾಹಿತ್ಯ ಸಂಘಟನೆ ತುಮಕೂರು ಘಟಕದಿಂದ ತುಮಕೂರಿನ ರವೀಂದ್ರ ಕಲಾನಿಕೇತನದಲ್ಲಿ ಜು.27ರಂದು ಬೆಳಗ್ಗೆ 10.15 ಗಂಟೆಗೆ ಚಳವಳಿಯ ಸಂಗಾತಿಯಾಗಿ ಕನ್ನಡ ಸಾಹಿತ್ಯ ಎಂಬ ರಾಜ್ಯಮಟ್ಟದ ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಬೆಳಗ್ಗೆ 10.15ಕ್ಕೆ ಆರಂಭವಾಗುವ ಸಮಾರಂಭವನ್ನು ಕಾವ್ಯ ಗಾಯನದ ಮೂಲಕ ಡಾ.ಲಕ್ಷ್ಮಣದಾಸ್ ಉದ್ಘಾಟಿಸುವರು. ನಾಡೋಜ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಅವರು ದಿಕ್ಸೂಚಿ ಭಾಷಣ ಮಾಡುವರು.

ಅತಿಥಿಯಾಗಿ ಸಾಹಿತಿ ಡಾ.ಕರೀಗೌಡ ಬೀಚನಹಳ್ಳಿ ಭಾಗವಹಿಸಲಿದ್ದು, ಜನಪರ ಚಿಂತಕ ಕೆ.ದೊರೈರಾಜ್ ಅಧ್ಯಕ್ಷತೆ ವಹಿಸುವರು. ಕಾದಂಬರಿಕಾರ ಡಾ.ಓ.ನಾಗರಾಜ್ ಪ್ರಾಸ್ತಾವಿಕ ನುಡಿಗಳನ್ನಾಡುವರು. ಲೇಖಕ ಡಾ.ನಾಗಭೂಷಣ ಬಗ್ಗನಡು ಕಾರ್ಯಕ್ರಮ ನಿರ್ವಹಣೆ ಮಾಡುವರು.

ಮೊದಲ ಗೋಷ್ಠಿ ಬೆಳಗ್ಗೆ 11.30 ರಿಂದ 12.45 ಗಂಟೆಯವರೆಗೆ ನಡೆಯಲಿದ್ದು, ಕನ್ನಡ ವಿವಿಯ ಕನ್ನಡ ವಿಭಾಗದ ಡಾ.ಎಂ.ಬಿ.ಪುಟ್ಟಯ್ಯ ಕನ್ನಡ ಸಾಹಿತ್ಯ ಮತ್ತು ದಲಿತ ಚಳವಳಿಯ ಆಶಯಗಳು ಕುರಿತು ಉಪನ್ಯಾಸ ನೀಡುವರು. ಸಾಹಿತಿ ತುಂಬಾಡಿ ರಾಮಯ್ಯ ಸಂವಾದ ಸ್ಪಂದನೆ ಮಾಡುವರು. ಡಾ.ಬಾಲಗುರುಮೂರ್ತಿ ಅಧ್ಯಕ್ಷತೆ ವಹಿಸುವರು. ಉಪನ್ಯಾಸಕ ಎಚ್.ಗೋವಿಂದಯ್ಯ ಕಾರ್ಯಕ್ರಮ ನಿರೂಪಿಸುವರು.

ಮಧ್ಯಾಹ್ನ 12.45 ರಿಂದ 2 ಗಂಟೆಯವರೆಗೆ ಎರಡನೇ ಗೋಷ್ಠಿ ನಡೆಯಲಿದ್ದು, ಕನ್ನಡ ಸಾಹಿತ್ಯ ಮತ್ತು ಮಹಿಳಾ ಚಳವಳಿಯ ವಿಕಾಸ ವಿಷಯ ಕುರಿತು ಲೇಖಕಿ ಡಾ.ಎನ್.ಗಾಯತ್ರಿ ಉಪನ್ಯಾಸ ನೀಡುವರು. ಡಾ.ಅನಸೂಯ ಕಾಂಬ್ಳೆ ಸಂವಾದ ಸ್ಪಂದನೆ ನೀಡುವರು. ಡಾ.ಕೆ.ಷರೀಫಾ ಅಧ್ಯಕ್ಷತೆ ವಹಿಸುವರು. ಮರಿಯಂಬಿ ಕಾರ್ಯಕ್ರಮ ನಿರ್ವಹಿಸುವರು.

ಮಧ್ಯಾಹ್ನ 2.45 ರಿಂದ 4 ಗಂಟೆಯವರೆಗೆ ಕನ್ನಡ ಸಾಹಿತ್ಯ ಮತ್ತು ಕನ್ನಡ ಪರ ಚಳವಳಿಯ ಚಾರಿತ್ರಿಕತೆ ವಿಷಯ ಕುರಿತು ಡಾ.ಪ್ರಶಾಂತ್ ನಾಯಕ್ ಉಪನ್ಯಾಸ ನೀಡಲಿದ್ದು, ಲೇಖಕ ಕೆ.ಪಿ.ನಟರಾಜ್ ಸಂವಾದ ಸ್ಪಂದನೆ ನೀಡುವರು. ಸಾಹಿತಿ ಡಾ.ರಾಜಪ್ಪ ದಳವಾಯಿ ಅಧ್ಯಕ್ಷತೆ ವಹಿಸುವರು. ಉಪನ್ಯಾಸಕ ಗುಟ್ಟೆ ಅಶ್ವತ್ಥನಾರಾಯಣ್ ಕಾರ್ಯಕ್ರಮ ನಿರ್ವಹಣೆ ಮಾಡುವರು.

ಅಪರಾಹ್ನ 4 ರಿಂದ 5.15ಗಂಟೆಯವರೆಗೆ ಕನ್ನಡ ಸಾಹಿತ್ಯ ಮತ್ತು ರೈತ-ಕಾರ್ಮಿಕ ಚಳವಳಿಯ ವಸ್ತು ವಿನ್ಯಾಸ ವಿಷಯದ ಬಗ್ಗೆ ಸಂವಾದ ನಡೆಯಲಿದ್ದು, ಡಾ.ದಸ್ತಗೀರ್ ಸಾಬ್ ದಿನ್ನಿ ಉಪನ್ಯಾಸ ನೀಡುವರು. ಆರ್.ಜಿ.ಹಳ್ಳಿ ನಾಗರಾಜ್ ಸಂವಾದ ಸ್ಪಂದನೆ ನೀಡುವರು. ಭಕ್ತರಹಳ್ಳಿ ಕಾಮರಾಜ್ ಅಧ್ಯಕ್ಷತೆ ವಹಿಸುವರು. ಉಪನ್ಯಾಸಕ ಎ.ರಾಮಚಂದ್ರಪ್ಪ ಉಪನ್ಯಾಸ ನೀಡುವರು. ಸಂಜೆ 5.30 ರಿಂದ 7 ಗಂಟೆಯವರೆಗೆ ರಾಜ್ಯಮಟ್ಟದ ಕವಿಗೋಷ್ಠಿ ನಡೆಯಲಿದ್ದು, ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸುವರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular