ಮೀಟರ್ ಬಡ್ಡಿ ದಂಧೆಕೋರರ ಕಿರುಕುಳದಿಂದ ಬೇಸತ್ತ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ನಡೆದಿದೆ.
ಪಾವಗಡ ತಾಲ್ಲೂಕಿನ ನಾಗಲಾಪುರ ಗ್ರಾಮದ ವೈ.ಟಿ. ಮಂಜುನಾಥ (38) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ ಎಂದು ತಿಳಿದು ಬಂದಿದೆ.
ಆತ ಖಾಸಗಿ ವ್ಯಕ್ತಿಗಳಿಂದ ಮೀಟರ್ ಬಡ್ಡಿಗೆ ಸಾಲ ಪಡೆದಿದ್ದ. ಸುಮಾರು 15 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ಎನ್ನಲಾಗಿದೆ. ತಿಂಗಳಿಗೆ ಲಕ್ಷ ಲಕ್ಷ ಬಡ್ಡಿ ಕೂಡ ಕಟ್ಟಿದ್ದ. ಆದರೂ ಮೀಟರ್ ಬಡ್ಡಿ ದಂಧೆಕೋರರ ಹಾವಳಿ ತಪ್ಪಿರಲಿಲ್ಲ ಎಂದು ತಿಳಿದು ಬಂದಿದೆ.
ಮೃತ ಯುವಕ ಊರಿನಲ್ಲಿ ಕೈ ಸಾಲ ಪಡೆದಿರುವ ಬಗ್ಗೆ ಸುದ್ದಿ ಹರಡಿದೆ. ಆತ ಒಂದು ವಾರಕ್ಕೆ 15 ರಿಂದ 25 ಸಾವಿರ ಬಡ್ಡಿ ಕಟ್ಟಬೇಕಾದ ಸ್ಥಿತಿಯಲ್ಲಿದ್ಧರಿಂದ ಬಡ್ಡಿ ಕಟ್ಟಲು ಸಾಧ್ಯವಾದೆ ನೇಣುಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.
ನಾಗಲಾಪುರ ಗ್ರಾಮದಲ್ಲಿ ಮೀಟರ್ ಬಡ್ಡಿ ಅತಿಯಾಗಿದ್ದು ಈ ದಂಧೆಯನ್ನು ಮಾಡುವವರ ಬಿರುದ್ದ ಸಂಬಂಧಪಟ್ಟ ಜಿಲ್ಲಾ ಅಧಿಕಾರಿಗಳು ರೌಡಿ ಶೀಟರ್ ಅಡಿಯಲ್ಲಿ ಪ್ರಕಾರ ದಾಖಲಿಸಬೇಕೆಂದು ಗ್ರಾಮಸ್ಥರ ಒತ್ತಾಯಿಸಿದ್ದಾರೆ. ವೈ.ಎನ್. ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


