Thursday, January 29, 2026
Google search engine
Homeಚಳುವಳಿಒಳಮೀಸಲಾತಿ-ಮೇ.1ರಿಂದ ಜನಾಂದೋಲನ ಕಾರ್ಯಕ್ರಮ

ಒಳಮೀಸಲಾತಿ-ಮೇ.1ರಿಂದ ಜನಾಂದೋಲನ ಕಾರ್ಯಕ್ರಮ

ಒಳಮೀಸಲಾತಿಗೆ ಸಂಬಂಧಿಸಿದಂತೆ ತುಮಕೂರು ಜಿಲ್ಲೆಯ ಪರಿಶಿಷ್ಟ ಜಾತಿಯ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮೇ.1 ರಿಂದ 7ರವರೆಗೆ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿಯೂ ಒಳಮೀಲಾತಿ ಹೋರಾಟ ಸಮಿತಿಯಿಂದ ಜನಾಂದೋಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಪ್ರಧಾನ ಸಂಚಾಲಕ ಡಾ.ವೈ.ಕೆ.ಬಾಲಕೃಷ್ಣ ತಿಳಿಸಿದ್ದಾರೆ.

ತುಮಕೂರು ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಒಳಮೀಸಲಾತಿ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷರುಗಳ ಸಭೆಯಲ್ಲಿ ಮಾತನಾಡಿದ ಅವರು, ಮೇ1 ರಂದು ಕೊರಟಗೆರೆಯಿಂದ ಆರಂಭವಾಗುವ ಆಂದೋಲನ ಕಾರ್ಯಕ್ರಮ 7ನೇ ತಾರೀಕು ಮುಕ್ತಾಯಗೊಳ್ಳಲಿದೆ. ಆಯಾಯ ತಾಲೂಕಿನಲ್ಲಿ ಮಾದಿಗ ಸಮುದಾಯದ ಮುಖಂಡರನ್ನು ಭೇಟಿಯಾಗಿ, ಅವರಿಗೆ ಸಮೀಕ್ಷೆಯ ರೂಪುರೇಷೆ, ಭರ್ತಿ ಮಾಡಬೇಕಾದ ವಿಷಯಗಳು ಎಲ್ಲವನ್ನು ತಿಳಿಸಿ, ಯಾವುದೇ ಕುಟುಂಬ ಸಮೀಕ್ಷೆಯಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳಬೇಕಿದೆ ಎಂದರು.

ಒಳಮೀಸಲಾತಿಗೆ ಸಂಬಂಧಿಸಿದಂತೆ ನ್ಯಾ.ನಾಗಮೋಹನ್ ದಾಸ್ ಸಮಿತಿ ವತಿಯಿಂದ ಸಮೀಕ್ಷೆಗೆ ಸಂಬಂಧಿಸಿದಂತೆ ಪ್ರತಿಯೊಬ್ಬ ಮಾದಿಗ ಸಮುದಾಯದ ಮುಖಂಡರು ಜಾಗೃತರಾಗಿ ಜಾತಿ ಕಲಂನಲ್ಲಿ ಪರಿಶಿಷ್ಟ ಜಾತಿ, ಉಪ ಜಾತಿ ಕಲಂನಲ್ಲಿ ಮಾದಿಗ ಎಂದು ನಮೂದಿಸಬೇಕು, ಗೊಂದಲಕ್ಕೆ ಒಳಗಾಗುವ ಯಾವ ಜಾತಿ ಸೂಚಕ ಪದಗಳನ್ನು ಬಳಸದೆ ಕೇವಲ ಮಾದಿಗ ಎಂದು ಬರಸಬೇಕು. ಜೊತೆಗೆ, ನಿಮ್ಮ ಅಕ್ಕಪಕ್ಕದ ಮನೆಯ, ಅಥವಾ ತೋಟಗಳಲ್ಲಿ, ಊರಿನ ಹೊರಗೆ ಮನೆ ಮಾಡಿಕೊಂಡಿರುವ ಮಾದಿಗ ಸಮುದಾಯ ಜನರನ್ನು ಗುರುತಿಸಿ,ಅವರು ಸಹ ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕೆಂದು ಬಾಲಕೃಷ್ಣಪ್ಪ ಮನವಿ ಮಾಡಿದರು.

ತುಮಕೂರು ನಗರಕ್ಕೆ ಸಂಬಂಧಿಸಿದಂತೆ ಅಧಿಕಾರಿ, ನೌಕರರು, ಮುಖಂಡರುಗಳ ಸಭೆ ನಡೆಸಲಾಗಿದೆ. ಸಮೀಕ್ಷೆ ನಡೆಸಲು ಮನೆಗಳ ಬಳಿ ಬಂದಾಗ, ಗೊಂದಲಕ್ಕೆ ಒಳಗಾಗದೆ ವಿವರಗಳನ್ನು ನಮೂದಿಸಬೇಕು, ಮಾದಿಗ ಸಮುದಾಯ ಮೀಸಲಾತಿಯಲ್ಲಿ ನ್ಯಾಯಯುತ ಪಾಲು ಪಡೆಯಲು ಇರುವ ಏಕೈಕ ಅವಕಾಶ. ಹಾಗಾಗಿ ರಾಜಕೀಯ ವೈಮನಸ್ಸುಗಳನ್ನು ಬದಿಗೊತ್ತಿ ಎಲ್ಲರೂ ಇದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕಾಗಿದೆ. ಇದು ನಾವು ಮುಂದಿನ ಪೀಳಿಗೆಗೆ ನೀಡುತ್ತಿರುವ ಬಳುವಳಿ ಎಂದು ಎಲ್ಲಾ ಮಾದಿಗ ಸಮುದಾಯದ ಮುಖಂಡರು ತಿಳಿದು ಪಾಲ್ಗೊಳ್ಳುವಂತೆ ಸಲಹೆ ನೀಡಿದರು.

ಸಭೆಯಲ್ಲಿ ಜಿ.ಪಂ.ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಮುಖಂಡರಾದ ಬೆಳಗುಂಬ ವೆಂಕಟೇಶ್, ಶ್ರೀನಿವಾಸ್ ಆಯನಹಳ್ಳಿ, ಹೆತ್ತೇನಹಳ್ಳಿ ಮಂಜು, ರಮೇಶ್, ಮಳೆಕೋಟೆ ಹನುಮಂತರಾಯಪ್ಪ, ಪಿ.ಎನ್.ರಾಮಯ್ಯ, ಗೂಳರಿವೆ ನಾಗರಾಜು, ನರಸಿಂಹಯ್ಯ, ನರಸೀಯಪ್ಪ, ಜಯಮೂರ್ತಿ, ಡಾ.ಬಸವರಾಜು, ಶಿವನಂಜಪ್ಪ, ಡಾ.ಮುಕುಂದ ಎಲ್, ಗಂಗಾಧರ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular