ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾರ್ಚ್ 7ರಂದು ತಮ್ಮ ದಾಖಲೆಯ 16ನೇ ಬಜೆಟ್ ಅನ್ನು ಮಂಡಿಸಿದ್ದು ವಿವಿಧ ಹೊಸ ಯೋಜನೆಗಳನ್ನು ಘೋಷಿಸಿದ್ದಾರೆ. ಬಜೆಟ್ ಮುಖ್ಯಾಂಶಗಳು ಈ ಕೆಳಗಿನಂತಿವೆ.
- ಅಂಗನವಾಡಿ ಕಾರ್ಯಕರ್ತೆಯರಿಗೆ 1 ಸಾವಿರ ರೂಪಾಯಿ ಗೌರವಧನ ಹೆಚ್ಚಳ
- ಸಹಾಯಕರಿಗೆ 750 ರೂ ಸಹಾಯಧನ ಹೆಚ್ಚಳ
- ಶಾಲೆಗಳಲ್ಲಿ ಬಿಸಿಯೂಟ ತಯಾರಿಸುವ ಮಹಿಳೆಯರಿಗೆ 1000 ರೂ ಗೌರವಧನ ಹೆಚ್ಚಳ
- 12 ಸಾವಿರ ಕೃಷಿ ಹೊಂಡಗಳ ನಿರ್ಮಾಣ
- ಶಕ್ತಿ ಯೋಜನೆಗೆ 530 ಕೋಟಿ ರೂ ಅನುದಾನ
- ಶಿಕ್ಷಣ ಇಲಾಖೆಗೆ 45,286 ಕೋಟಿ ಅನುದಾನ
- ಪ್ರಥಮ ದರ್ಜೆ ಕಾಲೇಜುಗಳ ಅಭಿವೃದ್ಧಿಗೆ 2500 ಕೋಟಿ
- ವಿಶ್ವ ಬ್ಯಾಂಕ್ ನೆರವಿನೊಂದಿಗೆ 2500 ಕೋಟಿ ಯೋಜನೆ
- ಅತಿಥಿ ಶಿಕ್ಷಕರ ಗೌರವ ಧನ 2000 ರೂ ಹೆಚ್ಚಳ
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ 34,933 ಕೋಟಿ ಅನುದಾನ
- ಇಂಧನ ಇಲಾಖೆಗೆ 26,896 ಕೋಟಿ ಅನುದಾನ
- ಬೆಂಗಳೂರು ವಿವಿಗೆ ಮರುನಾಮಕರಣ-ಡಾ.ಮನಮೋಹನ್ ಸಿಂಗ್ ವಿವಿ ಎಂದು ನಾಮಕರಣ
- ಮುಖ್ಯಮಂತ್ರಿಗಳ ಮಾಧ್ಯಮ ಸಂಜೀವಿನ ಯೋಜನೆ
- 5 ಲಕ್ಷದವರೆಗೆ ಉಚಿತ ಚಿಕಿತ್ಸೆ
- ಮಾನ್ಯತೆ ಹೊಂದಿರುವ ಪತ್ರಕರ್ತರಿಗೆ ಅನ್ವಯ
- ಕನ್ನಡ ಚಿತ್ರರಂಗಕ್ಕೆ ಸರ್ಕಾರದಿಂದ ಒಟಿಟಿ ಯೋಜನೆ
- ಮಲ್ಟಿಪ್ಲೆಕ್ಸ್ ಗಳಲ್ಲಿ ಏಕರೂಪ ಟಿಕೆಟ್ ನಿಗದಿ
- 200 ರೂಪಾಯಿ ಟಿಕೆಟ್ ದರ ನಿಗದಿ ಮಾಡಿದ ಸರ್ಕಾರ
- ಬೆಂಗಳೂರಿನಲ್ಲಿ ಟನಲ್ ಯೋಜನೆಗೆ40 ಸಾವಿರ ಕೋಟಿ ರೂ ಅನುದಾನ
- ಬೆಂಗಳೂರಿನಲ್ಲಿ 11 ಪೊಲೀಸ್ ವಿಭಾಗ ಸ್ಥಾಪನೆ
- ಮಂಡ್ಯದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ
- ಬ್ರಾಡ್ ಬೆಂಗಳೂರಿಗೆ 1800 ಕೋಟಿ ರೂ ಮೀಸಲು
- ಬ್ರಾಡ್ ಬೆಂಗಳೂರು ನಿರ್ಮಾಣಕ್ಕೆ 21 ಯೋಜನೆ
- ಮೆಜೆಸ್ಟಿಕ್ ಬಸ್ ನಿಲ್ದಾಣ ಮೇಲ್ದರ್ಜೆಗೆ
- ಮೈಸೂರಿನಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಾಣ
- ದಕ್ಷಿಣ ಕನ್ನಡದ ಪಿಲಿಕುಳದಲ್ಲಿ ಅಂತಾರಾಷ್ಟ್ರೀಯ ಯುವಕರ ತರಬೇತಿ ಕೇಂದ್ರ ಸ್ಥಾಪನೆ
- ಅಥಣಿಯಲ್ಲಿ ಹೊಸ ಕೃಷಿ ಕಾಲೇಜು ಸ್ಥಾಪನೆ
- ಮೈಸೂರಿನಲ್ಲಿ ಫಿಲ್ಮ್ ಸಿಟಿ ಸ್ಥಾಪನೆಯ ಘೋಷಣೆ


