ತುರುವೇಕೆರೆ ತಾಲೂಕು ಮಾಯಸಂದ್ರ ಹೋಬಳಿ ಶೆಟ್ಟಿಗೊಂಡನಹಳ್ಳಿಯ ಜ್ಞಾನಭಾರತಿ ಸನಿವಾಸ ಪ್ರೌಢಶಾಲೆಯಲ್ಲಿ ಶಾಲಾ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.
ತುಮಕೂರು ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಲೆಫ್ಟಿನೆಂಟ್ ಶ್ರೀನಿವಾಸಮೂರ್ತಿ ಮಾತನಾಡಿ, ನೆಲಮೂಲ ಸಂಸ್ಕೃತಿ ಉಳಿದಿರುವುದು ಸರ್ಕಾರಿ ಮತ್ತು ಅನುದಾನಿತ ಕನ್ನಡ ಶಾಲೆಗಳಲ್ಲಿ ಎಂದರು.
ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಮುಚ್ಚಿದರೆ ಒಂದು ಸಂಸ್ಕೃತಿ ಪರಂಪರೆಯ ನಾಶವಾಗುತ್ತದೆ ಎಂದರು.
ಸಂಸ್ಥೆಯ ಕಾರ್ಯದರ್ಶಿ ವಸಂತಲಕ್ಷ್ಮಿ ಎಲ್ ಮಾತನಾಡಿ, ಅನುದಾನಿತ ಶಾಲೆಗಳ ಉಳಿವಿಗಾಗಿ ಸರ್ಕಾರ ಸಮಯಕ್ಕೆ ಸರಿಯಾಗಿ ಹುದ್ದೆ ಭರ್ತಿ ಮಾಡಿಕೊಳ್ಳಬೇಕು. ಪೋಷಕರು ಇಂಗ್ಲಿಷ್ ವ್ಯಾಮೋಹ ತೊರೆದು ಮಕ್ಕಳ ಆಸಕ್ತಿ ಮತ್ತು ಸ್ಥಳೀಯತೆಗೆ ಆದ್ಯತೆ ಕೊಡಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಗಂಗಮ್ಮ ವಹಿಸಿದ್ದರು. ಅಜ್ಜನಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಮಹಮ್ಮದ್ ಜಿಲಾನೀ ದೈಹಿಕ ಶಿಕ್ಷಕ ಹೆಗ್ಗಪ್ಪ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೆಂಪಣ್ಣ, ಸದಸ್ಯ ಶಶಿಧರ್, ಶಾಲಾ ಸಿಬ್ಬಂದಿ ಶ್ರೀನಿವಾಸಮೂರ್ತಿ ಟಿ ಕೆ, ವೆಂಕಟೇಶ್, ಮೀನಾಕುಮಾರಿ, ಹೇಮಲತಾ, ಮಾನಸ, ವೀಣಾ, ಸಿಮ್ರಾನ್, ವಸಂತಮ್ಮ ಭಾಗ್ಯಮ್ಮ ಇದ್ದರು.