ಸ್ವಾತಂತ್ರ್ಯ ಹೋರಾಟಗಾರ, ಗಾಂಧೀವಾದಿ, ವೈಜ್ಞಾನಿಕ ಚಿಂತಕ ಪದ್ಮಭೂಷಣ ಡಾ.ಎಚ್.ನರಸಿಂಹಯ್ಯ ಅವರ ಜನ್ಮಶತಮಾನೋತ್ಸವದ ಹಿನ್ನೆಲೆಯಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ವಿಜ್ಞಾನ ಮತ್ತು ತಂತ್ರಜ್ಞಾನ ಸೊಸೈಟಿ, ನ್ಯಾಷನಲ್ ಎಜುಕೇಶನ್ ಸೊಸೈಟಿ ಸಹಯೋಗದಲ್ಲಿ ಜ.27 ರಿಂದ ಜ.31ರವರೆಗೆ ಬೆಂಗಳೂರಿನಿಂದ ಗೌರಿಬಿದನೂರು ತಾಲೂಕು ಹೊಸೂರಿನವರೆಗೆ ವಿಜ್ಞಾನದೆಡೆಗೆ ನಮ್ಮ ನಡಿಗೆ ಕಾರ್ಯಕ್ರಮ ಆಯೋಜಿಸಲಾಗಿದೆ.
ಜ.27ರಂದು ಬೆಳಗ್ಗೆ 9.30ಕ್ಕೆ ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಡಾ.ಎಚ್.ಎನ್ ಮಲ್ಟಿಮೀಡಿಯಾ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಸಮಾರಂಭವನ್ನು ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಉದ್ಘಾಟಿಸುವರು. ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಪುಸ್ತಕಗಳ ಬಿಡುಗಡೆ ಮಾಡುವರು.
ನಾಡೋಜ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಆಶಯನುಡಿಗಳನ್ನು ಮಾತನಾಡುವರು. ವಿಜ್ಞಾನದೆಡೆಗೆ ನಮ್ಮ ನಡಿಗೆ ಕುರಿತು ಸಾಹಿತಿ ಡಾ.ಎಲ್.ಹನುಮಂತಯ್ಯ ಮಾತನಾಡುವರು. ಕೆಜಿವಿಎಸ್ ಅಧ್ಯಕ್ಷ ಡಾ.ಸಿ.ಆರ್.ಚಂದ್ರಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಪಿ.ಜಿ.ಆರ್.ಸಿಂಧ್ಯಾ, ಡಾ.ಏಕ್ ರೂಪ್ ಕೌರ್, ಸದಾಶಿವ ಪ್ರಭು, ವೀರಭದ್ರ ಹಂಚಿನಾಳ, ಡಾ.ಜಿ.ರಾಮಕೃಷ್ಣ, ಡಾ.ಎಚ್.ಎನ್,ಸುಬ್ರಮಣ್ಯ, ಡಾ.ಎಚ್.ಎಲ್.ಪುಷ್ಪ, ವಿ.ವೆಂಕಟಶಿವಾರೆಡ್ಡಿ, ಈ.ಬಸವರಾಜು, ಮಾವಳ್ಳಿ ಶಂಕರ್, ಬಿ.ಎಸ್.ಅರುಣ್ ಕುಮಾರ್, ತಲ್ಲಂ ಆರ್. ದ್ವಾರಕನಾಥ್, ಸುಧಾಕರ್ ಎಸ್ತೂರಿ, ಡಾ.ಸುಚರಿತ ಭಾಗವಹಿಸುವರು.