Saturday, January 11, 2025
Google search engine
Homeಮುಖಪುಟಏಳನೇ ತರಗತಿ ವಿದ್ಯಾರ್ಥಿ ತ್ರಿಶಾಲ್ ಆತ್ಮಹತ್ಯೆ

ಏಳನೇ ತರಗತಿ ವಿದ್ಯಾರ್ಥಿ ತ್ರಿಶಾಲ್ ಆತ್ಮಹತ್ಯೆ

ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ನಗರದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ತ್ರಿಶಾಲ್ ಎಂದು ಗುರುತಿಸಲಾಗಿವೆ.

ತುಮಕೂರು ನಗರದ ದೇವನೂರು ಚರ್ಚ್ ಬಳಿಯ ವಿಜಯನಗರದಲ್ಲಿ ವಾಸವಾಗಿದ್ದ ತ್ರಿಶಾಲ್ ಎಂದಿನಂತೆ ಶುಕ್ರವಾರ ಶಾಲೆಗೆ ತೆರಳಿ ವಾಪಸ್ಸು ಮನೆಗೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ.

ತ್ರಿಶಾಲ್ ತುಮಕೂರು ಜಿಲ್ಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ಮುಖ್ಯಸ್ಥರಾಗಿರುವ ಶಕುಂತಲಾ ನಟರಾಜ್ ಅವರ ಪುತ್ರ ಎಂದು ಹೇಳಲಾಗಿದೆ.

ಸ್ಥಳೀಯ ಶಾಲೆಯೊಂದರಲ್ಲಿ  ಏಳನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ತ್ರಿಶಾಲ್ ಎಂದಿನಂತೆ ಶುಕ್ರವಾರ ಶಾಲೆಗೆ ತೆರಳಿ ಮನೆಗೆ ವಾಪಸ್ ಆಗಿರುವ ಬಾಲಕ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.

ಘಟನೆ ನಡೆದ ಕೂಡಲೇ ಶಕುಂತಲಾ ನಟರಾಜ್ ಅವರ ಮನೆಗೆ ಹಲವು  ಬಿಜೆಪಿ ನಾಯಕರು ಭೇಟಿ ನೀಡಿ ಪೋಷಕರಿಗೆ ಧೈರ್ಯ ತುಂಬಿದರು. ಘಟನಾ ಸ್ಥಳಕ್ಕೆ ಜಯನಗರ ಪೊಲೀಸ್ ಹಾಗೂ ಬೆರಳಚ್ಚು ತಂಡದ ಅಧಿಕಾರಿಗಳು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular