Sunday, March 2, 2025
Google search engine
Homeಇತರೆಮಂಡ್ಯ ಜಿಲ್ಲೆಯ ಬಿಜಿಎಸ್ ಕಾಲೇಜಿಗೆ ರಾಜ್ಯ ಮಟ್ಟದ ವಾಲಿ ಬಾಲ್ ಚಾಂಪಿಯನ್ ಪಟ್ಟ

ಮಂಡ್ಯ ಜಿಲ್ಲೆಯ ಬಿಜಿಎಸ್ ಕಾಲೇಜಿಗೆ ರಾಜ್ಯ ಮಟ್ಟದ ವಾಲಿ ಬಾಲ್ ಚಾಂಪಿಯನ್ ಪಟ್ಟ

ತುಮಕೂರು ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ರಾಜ್ಯ ಮಟ್ಟದ ಅಂತರ ಕಾಲೇಜು ವಾಲಿ ಬಾಲ್ ಸ್ಪರ್ದೆಯಲ್ಲಿ, ಪುರುಷರ ವಿಭಾಗದಲ್ಲಿ, ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಬಿಜಿಎಸ್ ಕಾಲೇಜಿಗೆ ಚಾಂಪಿಯನ್ ಪಟ್ಟ ದೊರೆತಿದೆ.

ಮಂಗಳೂರಿನ ನಿಟ್ಟೆ ಕಾಲೇಜು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನವನ್ನು ತುಮಕೂರಿನ ಎಸ್.ಎಸ್.ಐ.ಟಿ ಮತ್ತು ಎಸ್.ಐ.ಟಿ ಕಾಲೇಜುಗಳು ಪಡೆದುಕೊಂಡಿವೆ. ಮಹಿಳೆಯರ ವಿಭಾಗದಲ್ಲಿ ತುಮಕೂರಿನ ಎಸ್.ಎಸ್.ಐ.ಟಿ ಕಾಲೇಜಿನ ಮಹಿಳೆಯರ ತಂಡ ಮೊದಲ ಸ್ಥಾನ ಪಡೆದುಕೊಂಡರೆ, ಹಾಸನದ ಎನ್.ಎ.ವಿ.ಕೆೆ.ಐ.ಎಸ್ಓಂ ಎಂಜಿನಿಯರಿಂಗ್ ಕಾಲೇಜು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಸ್ಟರ್ಧೆಯಲ್ಲಿ 16 ಪುರುಷರ ತಂಡಗಳು, ಮತ್ತು 6 ಮಹಿಳೆಯರ ತಂಡಗಳು ರಾಜ್ಯದ ಹಾಸನ, ಮಂಗಳೂರು, ಮೈಸೂರು, ಚಿಕ್ಕಬಳ್ಳಾಪುರ ಸೇರಿದಂತೆ ವಿವಿಧ ಜಿಲ್ಲೆಗಳ ಕಾಲೇಜುಗಳಿಂದ ಆಗಮಿಸಿದ್ದವು.
ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಎಸ್.ಎಸ್.ಐ.ಟಿ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎಸ್. ರವಿಪ್ರಕಾಶ್, ರಾಜ್ಯದ ವಿವಿಧ ಜಿಲ್ಲಾ ಕಾಲೇಜುಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಇಂತಹ ಅನೇಕ ಸ್ಪರ್ಧೆಗಳನ್ನು ನಡೆಸುವುದಾಗಿ, ವಿದ್ಯಾರ್ಥಿಗಳು ಇದೇ ರೀತಿ ಉತ್ಸಾಹದಿಂದ ಭಾಗವಹಿಸುವಂತೆ ಕೋರಿದರು. ಸ್ಪರ್ಧೆಯ ತೀರ್ಪುಗಾರರು ಕೂಡ ನಿಷ್ಪಕ್ಷಪಾತವಾಗಿ ತೀರ್ಪು ನೀಡಿದ್ದು, ಕ್ರೀಡಾಳುಗಳ ಸ್ಪರ್ಧಾ ಮನೋಭಾವವನ್ನು ಹೆಚ್ಚಿಸಿದೆ ಎಂದರು.
ಟೂರ್ನಮೆಂಟ್‌ನಲ್ಲಿ ದೈಹಿಕ ಶಿಕ್ಷಕರು ಹಾಗೂ ತರಬೇತುದಾರರಾದ ಚನ್ನೇಗೌಡ, ತುಮಕೂರು ಜಿಲ್ಲೆಯ ವಾಲಿ ಬಾಲ್ ಸಂಸ್ಥೆಯ ತೀರ್ಪುಗಾರರಾದ ಸುರೇಶ್, ಸೇರಿದಂತೆ ಮತ್ತಿತರ ತರಬೇತುದಾರರು, ರೆಫರಿಗಳು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಸ್.ಎಸ್.ಐ.ಟಿ.ಯ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ನಿರ್ಮಲಾ ಕಾರ್ಯಕ್ರಮವನ್ನು ನಿರೂಪಿಸಿದರೆ, ದೈಹಿಕ ಶಿಕ್ಷಣ ನಿರ್ದೇಶಕರಾದ ಕೆ.ಆರ್. ರುದ್ರೇಶ್‌ರವರು ಕಾರ್ಯಕ್ರಮಕ್ಕೆ ಆಗಮಿಸಿದವರನ್ನೆಲ್ಲಾ ವಂದಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular