ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದಲ್ಲಿರುವ ಡಾ.ಗುಬ್ಬಿ ವೀರಣ್ಣ ರಂಗಮAದಿರದಲ್ಲಿ ಡಿ. 25 ರಿಂದ 29 ರವರೆಗೆ 5 ದಿವಸಗಳ ಕಾಲ ಪ್ರತಿ ದಿನ ಸಂಜೆ 6.30 ಕ್ಕೆ ಹಾಸ್ಯ ಬ್ರಹ್ಮ ನರಸಿಂಹರಾಜು ಜನ್ಮ ಶತಮಾನೋತ್ಸವ ನಾಟಕೋತ್ಸವವನ್ನು ಆಯೋಜಿಸುತ್ತಿದೆ ಎಂದು ಕಲಾಶ್ರೀ ಡಾ.ಲಕ್ಷö್ಮಣ್‌ದಾಸ್ ತಿಳಿಸಿದ್ದಾರೆ.
ಗುಬ್ಬಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 25 ರಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಜಿ. ಪರಮೇಶ್ವರ್ ನಾಟಕೋತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಕೇಂದ್ರ ರೈಲ್ವೆ ಸಚಿವ ವಿ. ಸೋಮಣ್ಣ ಆಗಮಿಸಲಿದ್ದಾರೆ. ಆಧ್ಯಕ್ಷತೆಯನ್ನು ಗುಬ್ಬಿ ಶಾಸಕ ಎಸ್.ಆರ್. ಶ್ರೀನಿವಾಸ್ ವಹಿಸಲಿದ್ದಾರೆ. ಅತಿಥಿಯಾಗಿ ಗುಬ್ಬಿ ಪ.ಪಂ.ಅಧ್ಯಕ್ಷೆ ಮಂಗಳಮ್ಮ ರಾಜಣ್ಣ, ಉಪಾಧ್ಯಕ್ಷೆ ಮಮತಾ ಶಿವಪ್ಪ, ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ ಪ್ರಾಸ್ತವಿಕವಾಗಿ ಮಾತನಾಡಲಿದ್ದಾರೆ. ಹಿರಿಯ ಚಲನಚಿತ್ರ ಕಲಾವಿದ ದೊಡ್ಡಣ್ಣ ಅವರು ಹಾಸ್ಯಬ್ರಹ್ಮ ನರಸಿಂಹರಾಜುರವರ ಭಾವಚಿತ್ರವನ್ನು ಅನಾವರಣ ಮಾಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ನರಸಿಂಹರಾಜು ಪುತ್ರಿ ಸುಧಾ ನರಸಿಂಹರಾಜು ಆಗಮಿಸಲಿದ್ದಾರೆ. ಕರ‍್ಯಕ್ರಮದಲ್ಲಿ ಆಕಾಡೆಮಿ ರಿಜಿಸ್ಟಾçರ್ ನಿರ್ಮಲ ಮಠಪತಿ, ಕರ್ನಾಟಕ ನಾಟಕ ಆಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್ ಹಾಜರಿರುವರು.
26 ರಂದು ಬೆಂಗಳೂರಿನ ರಂಗಸಿರಿ ತಂಡವು ಬ್ಲಾಕ್ ಔಟ್ ನಾಟಕ ಪ್ರದರ್ಶಿಸಲಿದೆ. ಅಂದು ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಕೇಂದ್ರ ಸಂಗೀತ ಮತ್ತು ನಾಟಕ ಆಕಾಡೆಮಿ ಪ್ರಶಸ್ತಿ ಪುರಸ್ಕೃತ ಲಕ್ಷö್ಮಣದಾಸ್, ಹಿರಿಯ ರಂಗಕರ್ಮಿ ಎಚ್.ಎಂ. ರಂಗಯ್ಯ, ಕರ್ನಾಟಕ ನಾಟಕ ಆಕಾಡೆಮಿ ಸದಸ್ಯ ಜಗದೀಶ್ ಜಾಲ ಆಗಮಿಸಲಿದ್ದಾರೆ.
27 ರಂದು ಚನ್ನಪ್ಪ ಚನ್ನೇಗೌಡ ನಾಟಕ ಪ್ರದರ್ಶನವಿದೆ. ಮುಖ್ಯ ಅತಿಥಿಯಾಗಿ ನಿವೃತ್ತ ಐಎಎಸ್ ಆಧಿಕಾರಿ ಸಿ. ಸೋಮಶೇಖರ್, ಗುಬ್ಬಿ ವೀರಣ್ಣ ಟ್ರಸ್ಟ್ ನ ಸದಸ್ಯ ಕುಮಾರಸ್ವಾಮಿ ಆಗಮಿಸಲಿದ್ದಾರೆ. ಅತಿಥಿಯಾಗಿ ನಾಟಕ ಆಕಾಡೆಮಿ ಸದಸ್ಯ ಟಿ.ಹೆಚ್. ಲವಕುಮಾರ್ ಆಗಮಿಸಲಿದ್ದಾರೆ.
28 ರಂದು ಗೌಡ ಮೆಚ್ಚಿದ ಹುಡುಗಿ ನಾಟಕ ಪ್ರದರ್ಶನವಿದೆ. ಅಂದು ವೇದಿಕೆಯಲ್ಲಿ ನರಸಿಂಹರಾಜು ಮೊಮ್ಮಗ ಅರವಿಂದ್ ಎಸ್.ಡಿ. ಆವಿನಾಶ್ ಎಸ್.ಡಿ. , ಗುಬ್ಬಿ ವೀರಣ್ಣ ಟ್ರಸ್ಟ್ ನ ಸದಸ್ಯ ಕಾಡಶೆಟ್ಟಿಹಳ್ಳಿ ಸತೀಶ್ ಆಗಮಿಸಲಿದ್ದಾರೆ. ನಾಟಕ ಅಕಾಡೆಮಿ ಸದಸ್ಯ ಜಿಪಿಓ ಚಂದ್ರು ಉಪಸ್ಥಿತರಿರುವರು.
29 ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಸಮಾರೋಪ ನುಡಿಯನ್ನು ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ಆಡಲಿದ್ದಾರೆ. ಮುಖ್ಯ ಅತಿಥಿಯಾಗಿ ಹಿರಿಯ ಚಲನಚಿತ್ರ ಕಲಾವಿದ ಡಾ. ಮುಖ್ಯಮಂತ್ರಿ ಚಂದ್ರು ಆಗಮಿಸಲಿದ್ದಾರೆ. ಆಧ್ಯಕ್ಷತೆಯನ್ನು ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷ ನಾಗರಾಜ ಮೂರ್ತಿ ವಹಿಸಲಿದ್ದಾರೆ. ನಾಟಕ ಅಕಾಡೆಮಿ ಸದಸ್ಯ ರವೀಂದ್ರನಾಥ್ ಸಿರಿವರ ಉಪಸ್ಥಿತರಿರುವರು. ಸಂಜೆ ತಾಜ್ ಮಹಲ್ ಟೆಂಡರ್ ನಾಟಕ ಪ್ರದರ್ಶನವಿದೆ.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಉಗಮ ಶ್ರೀನಿವಾಸ್, ಗುಬ್ಬಿ ವೀರಣ್ಣ ಟ್ರಸ್ಟ್ ನ ಖಜಾಂಚಿ ರಾಜೇಶ್ ಗುಬ್ಬಿ, ಪ.ಪಂ. ಸದಸ್ಯ ಜಿ.ಸಿ. ಕೃಷ್ಣಮೂರ್ತಿ ಇದ್ದರು.