Monday, December 30, 2024
Google search engine
Homeಮುಖಪುಟವಿಷ ಸೇವಿಸಿ ದಂಪತಿ ಆತ್ಮಹತ್ಯೆ

ವಿಷ ಸೇವಿಸಿ ದಂಪತಿ ಆತ್ಮಹತ್ಯೆ

ವಿಷ ಸೇವಿಸಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದ ಹೊರವಲಯದ ಚಳ್ಳಕೆರೆ ರಸ್ತೆ ಸಮೀಪದ ಜಮೀನಿನಲ್ಲಿ ನಡೆದಿದೆ.

ತಾಲೂಕಿನ ಸಾಸಲಕುಂಟೆ ಗ್ರಾಮದ ಸಮೀಪವಿರುವ ವೆಂಕಟಮನಹಳ್ಳಿ ಗ್ರಾಮದ ಗೋವಿಂದ ರೆಡ್ಡಿ ಮತ್ತು ಜ್ಯೋತಿ ಎಂಬುವರು ಮೃತಪಟ್ಟವರು. ಗೋವಿಂದ ರೆಡ್ಡಿಗೆ ಎರಡು ಮದುವೆಯಾಗಿದ್ದು, ಜ್ಯೋತಿ ಮೊದಲನೇ ಹೆಂಡತಿ ಎಂದು ಹೇಳಲಾಗಿದೆ. ಈತನ ಎರಡನೇ ಹೆಂಡತಿ ಲಕ್ಷ್ಮೀದೇವಿ ಎಂದು ತಿಳಿದು ಬಂದಿದ್ದು, ಸದ್ಯ ಈಕೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಎಂದು ಹೇಳಲಾಗಿದೆ.

ಪಾವಗಡ ಪಟ್ಟಣದ ಲಾಡ್ಜ್ ವೊಂದರಲ್ಲಿ ಗುರುವಾರ ರಾತ್ರಿ ಜ್ಯೋತಿ ಮತ್ತು ಗೋವಿಂದ ರೆಡ್ಡಿ ತಂಗಿದ್ದು, ಬೆಳಿಗ್ಗೆ ಸುಮಾರು 9 ಗಂಟೆಯ ಸಂದರ್ಭದಲ್ಲಿ ಪಟ್ಟಣದ ಹೊರವಲಯದ ಜಮೀನೊಂದರ ಬಂಡೆಯ ಮೇಲೆ ಮದ್ಯಕ್ಕೆ ವಿಷ ಮಿಶ್ರಣ ಮಾಡಿ ಕುಡಿದಿದ್ದು, ಜ್ಯೋತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಗೋವಿಂದ ರೆಡ್ಡಿಯನ್ನು ಪೊಲೀಸರು ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೂ ಸಹ ಚಿಕಿತ್ಸೆ ಫಲಕಾರಿಯಾಗದೆ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ತುಮಕೂರು ಎ.ಎಸ್.ಪಿ. ಮರಿಯಪ್ಪ, ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ, ಪಾವಗಡ ಸಿಪಿಐ ಸುರೇಶ್, ಪಿಎಸ್‌ಐ ಗುರುನಾಥ ಭೇಟಿ ನೀಡಿ ಪರಿಶೀಲಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular