ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಹೆಸರು ನಮೂದಿಸಿರುವುದನ್ನು ಕೈಬಿಡುವುದು ಸೇರಿದಂತೆ ಜಿಲ್ಲೆಯ ಹಲವಾರು ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಜಿಲ್ಲಾಧ್ಯಕ್ಷ ಪೂಜಾರಪ್ಪ ನೇತೃತ್ವದಲ್ಲಿ ತುಮಕೂರಿನ ಡಿಸಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಾಯಿತು.
ರೈತರ ಜಮೀನಿನ ಪಹಣಿಯಲ್ಲಿ ನಮೂದಿಸಿರುವ ವಕ್ಫ್ ಹೆಸರನ್ನು ತಕ್ಷಣವೇ ಕೈಬಿಡಬೇಕು. ಇನ್ನು ಮುಂದೆ ಇಂತಹ ಗೊಂದಲಗಳಿಗೆ ಅವಕಾಶ ಅವಕಾಶ ನೀಡಬಾರದು. ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬೇಳೆ ನಷ್ಟ ಅನುಭವಿಸಿದ ರೈತರಿಗೆ ಒಂದು ಎಕರೆಗೆ 25 ಸಾವಿರ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧ್ಯಕ್ಷ ಪೂಜಾರಪ್ಪ ಆಗ್ರಹಿಸಿದರು.
ಬಗರ್‌ಹುಕುಂ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬ ರೈತರಿಗೂ ಜಮೀನು ಮಂಜೂರು ಮಾಡಬೇಕು. ತಕ್ಷಣವೇ ಹೊಸದಾಗಿ ಅರ್ಜಿಗಳನ್ನು ಕರೆಯಬೇಕು. ಪಾವಗಡ ತಾಲ್ಲೂಕಿನಲ್ಲಿ ಸೋಲಾರ್ ಕಂಪನಿ ಹಾಗೂ ಸರ್ಕಾರದಿಂದ ರೈತರಿಗೆ ಅತಿ ಕಡಿಮೆ ಪರಿಹಾರ ಕೊಡುತ್ತಿದ್ದು ತಕ್ಷಣವೇ ಪರಿಹಾರವನ್ನು ಹೆಚ್ಚಿಸಬೇಕು. ರೈತರು ಬ್ಯಾಂಕುಗಳಲ್ಲಿ ಪಡೆದಿರುವ ಸಾಲವನ್ನು ಎಲ್ಲಾ ಬ್ಯಾಂಕುಗಳು ಸಂಪೂರ್ಣವಾಗಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ತುಮಕೂರು ಜಿಲ್ಲೆಯ ಎಲ್ಲಾ ತಾಲೂಕುಗಳನ್ನು ಬರ ಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿದ್ದರು ಸಹ ಸಾವಿರಾರು ರೇಷನ್ ಕಾರ್ಡ್ಗಳನ್ನು ವಜಾ ಮಾಡಿರುವುದು ಸರಿಯಲ್ಲ. ಸರ್ಕಾರ ಯಾವುದೇ ಕಾರಣಕ್ಕೂ ರೇಷನ್ ಕಾರ್ಡುಗಳನ್ನು ನಿಲ್ಲಿಸದೆ ನಿರ್ಗತಿಕರಿಗೆ ಯಥಾವತ್ತಾಗಿ ಕಾರ್ಡುಗಳನ್ನು ಮುಂದುವರಿಸಬೇಕು.
ರಾಷ್ಟಿçÃಕೃತ ಬ್ಯಾಂಕ್‌ಗಳು ರೈತರಿಗೆ ಯಾವುದೇ ನೋಟಿಸ್ ಕೊಟ್ಟು ಕಿರುಕಳ ಕೊಡಬಾರದು. ರೈತರು ಜಮೀನುಗಳಿಗೆ ಹೋಗಲು ದಾರಿ ಸಮಸ್ಯೆ ಇರುವ ಕಡೆ ತಕ್ಷಣವೇ ತಾಲೂಕು ಆಡಳಿತ ಮಧ್ಯ ಪ್ರವೇಶಿಸಿ ದಾರಿ ಮಾಡಿಕೊಡಬೇಕು. ರಾಜ್ಯ ಸರ್ಕಾರ ಚುನಾವಣೆಗು ಮುನ್ನ ಹೇಳಿದಂತೆ ಬಿಜೆಪಿ ತಂದಿದ್ದ ಕೃಷಿ ಕಾಯ್ದೆಗಳನ್ನು ರದ್ದುಮಾಡಬೇಕು ಎಂದು ಆಗ್ರಹಿಸಿದರು.