ತುಮಕೂರು ಜಿಲ್ಲೆಯ ಹಿರಿಯ ಪತ್ರಕರ್ತ, ಮೈತ್ರಿ ನ್ಯೂಸ್ ಪತ್ರಿಕೆ ಸಂಪಾದಕ ವೆಂಕಟಾಚಲ.ಹೆಚ್.ವಿ. ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕು, ಪಂಚನಹಳ್ಳಿ ಹೋಬಳಿಯ ದೇವರ ಹೊಸಹಳ್ಳಿಯ ವೆಂಕಟಯ್ಯ ಮತ್ತು ಯಲ್ಲಮ ದಂಪತಿಯ ಮೂರನೇ ಪುತ್ರರಾಗಿದ್ದಾರೆ.
1988ರಲ್ಲಿ ಪ್ರಜಾಪ್ರಗತಿ ಪತ್ರಿಕೆಯಲ್ಲಿ ಪತ್ರಿಕೆ ವಿತರಕರು, ವರದಿಗಾರರಾಗಿ, ತುಮಕೂರು ವಾರ್ತೆಯಲ್ಲಿ ಪ್ರೋಫ್‌ರೀಡರಾಗಿ, ಪದವಿಯ ನಂತರ ಪೂರ್ಣಪ್ರಮಾಣದ ವರದಿಗಾರರಾಗಿ ಸೊಗಡು ಪತ್ರಿಕೆಯಲ್ಲಿ 20 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ, ಪರಿವರ್ತನ ಮತ್ತು ಸುದ್ದಿ ಅಮೂಲ್ಯ ಪತ್ರಿಕೆಗಳಲ್ಲದೆ, ಲಂಕೇಶ್ ಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.


