Thursday, November 21, 2024
Google search engine
Homeಮುಖಪುಟಒಳಮೀಸಲಾತಿ-ತಾಳ್ಮೆ ಅಗತ್ಯ-ಉದ್ಯಮಿ ಡಿ.ಟಿ.ವೆಂಕಟೇಶ್

ಒಳಮೀಸಲಾತಿ-ತಾಳ್ಮೆ ಅಗತ್ಯ-ಉದ್ಯಮಿ ಡಿ.ಟಿ.ವೆಂಕಟೇಶ್

ಸುಪ್ರಿಂಕೋರ್ಟು ತೀರ್ಪಿನ ಅನ್ವಯ ಒಳಮೀಸಲಾತಿ ಜಾರಿ ಸಂಬಂಧ ಸರ್ಕಾರ ಏಕವ್ಯಕ್ತಿ ಆಯೋಗ ನೇಮಕ ಮಾಡಿ, ಮೂರು ತಿಂಗಳ ಒಳಗೆ ನಿಖರವಾದ ದಾಖಲೆ ಪಡೆಯಲು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ ಎಂದು ಉದ್ಯಮಿ ಡಿ.ಟಿ.ವೆಂಕಟೇಶ್ ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಲವಕಾಶ ಕೇಳಿರುವುದನ್ನು ನೆಪವಾಗಿಟ್ಟುಕೊಂಡು ಕೆಲವರು, ಸಮುದಾಯದ ಯುವಜನರಲ್ಲಿ ಗೊಂದಲ ಉಂಟುಮಾಡಿ, ಅವರನ್ನು ಪ್ರಚೋದನೆಗೊಳಿಸುವ ಮಾತುಗಳನ್ನು ಆಡುತ್ತಿರುವುದು ಒಳ್ಳೆಯ ಬೆಳೆವಣಿಯಲ್ಲ. ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದೆ. ಹೀಗಾಗಿ ಜನಾಂಗದ ಯುವಕರು ಪ್ರಚೋದನೆಗೆ ಒಳಗಾಗದೆ, ತಾಳ್ಮೆಯಿಂದ ವರ್ತಿಸುವಂತೆ ಮನವಿ ಮಾಡಿದ್ದಾರೆ.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆಂಚಮಾರಯ್ಯ ಮಾತನಾಡಿ, ಒಳ ಮೀಸಲಾತಿ ಜಾರಿ ಎಲ್ಲ ಶೋಷಿತ ಸಮುದಾಯಕ್ಕೆ ಅನುಕೂಲವಾಗಲಿದೆ. ಮೂರು ತಿಂಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸುವ ಬದ್ಧತೆಯನ್ನು ಸರ್ಕಾರ ತೋರಿದ್ದು,ಇದರ ಭಾಗವಾಗಿಯೇ ಅಕ್ಟೋಬರ್ 28ರ ನಂತರ ಯಾವುದೇ ನೇಮಕಾತಿ ನೊಟೀಪಿಕೇಷನ್ ಇಲ್ಲ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ. ಸುಪ್ರೀಂ ಕೋರ್ಟ್ ಆದೇಶಕ್ಕೆ ಸಮುದಾಯದ ಹೋರಾಟ ಕಾರಣವೇ ಹೊರತು ಯಾವುದೇ ಪಕ್ಷದಿಂದ ಆದ ಕೆಲಸ ಅಲ್ಲ. ಹರಿಯಾಣ ಮತ್ತು ತೆಲಂಗಾಣದ ಮಾದರಿಯಲ್ಲಿ ಕಾಲಮಿತಿಗೊಳಪಟ್ಟು ರಾಜ್ಯದಲ್ಲಿ ಆಯೋಗ ರಚಿಸಲಾಗಿದ್ದು ಸಿದ್ದರಾಮಯ್ಯ ಅವರಿಗೆ ಬದ್ಧತೆ ಇದ್ದುದ್ದರಿಂದಲೇ ಬಡ್ತಿ ಮೀಸಲಾತಿ ಕಾನೂನು ಜಾರಿಗೆ ತಂದರು, ಇಲ್ಲದ ಗೊಂದಲವನ್ನು ಸೃಷ್ಟಿಸುವುದು ತರವಲ್ಲ ಎಂದರು.

ಡಾ.ಬಸವರಾಜು ಮಾತನಾಡಿ, ಒಳ ಮೀಸಲಾತಿಗೆ ಸಿಕ್ಕಿರುವ ಸಣ್ಣ ಜಯವನ್ನು ನಿಂದಿಸುವುದರಿಂದ ಅವಮಾನಿಸಿದಂತೆ ಆಗುತ್ತದೆ, ಮೂರು ತಿಂಗಳ ನಂತರ ಸರ್ಕಾರ ಒಳ ಮೀಸಲಾತಿ ಜಾರಿಗೆ ತರದೇ ಹೋದರೆ ಸಮುದಾಯದ ಹೋರಾಟದ ಕಿಚ್ಚನ್ನು ಎದುರಿಸಲಿದೆ. ನಮ್ಮ ಮುಂದೆ 2011ರ ಜನಗಣತಿ, ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ, ನ್ಯಾ.ನಾಗಮೋಹನ್ ದಾಸ್ ವರದಿ, ನ್ಯಾಯವಾದಿ ಕಾಂತರಾಜು ವರದಿ ಹಾಗೂ ಜೆ.ಸಿ.ಮಾಧುಸ್ವಾಮಿ ನೇತೃತ್ವದ ಸಚಿವ ಸಂಪುಟ ಉಪಸಮಿತಿ ವರದಿ ಇದೆ. ಈ ಎಲ್ಲಾ ವರದಿಗಳಲ್ಲಿ ಗೊಂದಲಗಳಿದ್ದು, ಇದನ್ನು ಬಗೆಹರಿಸಿ, ಎಲ್ಲಾ ಜಾತಿಗಳಿಗೂ ಪ್ರಾತಿನಿಧ್ಯ ದೊರೆಯುವಂತೆ ಸರ್ಕಾರ ಮಾಡಬೇಕಿದೆ. ಆಗ ಮಾತ್ರ ಯಾರೇ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದರೆ, ಎದುರಿಸಲು ಸಾಧ್ಯ. ಹಾಗಾಗಿ ಯುವಜನರು ತಾಳ್ಮೆ ವಹಿಸಬೇಕೆಂದರು.

ಸ್ಲಂ ಜನಾಂದೋಲನ ಕರ್ನಾಟಕ ಸಂಚಾಲಕ ಎ.ನರಸಿಂಹಮೂರ್ತಿ ಮಾತನಾಡಿ, ಸುಪ್ರೀಂಕೋರ್ಟ್ ಆದೇಶದಲ್ಲಿ ನಿಖರವಾದ ದತ್ತಾಂಶದ ಆಧಾರದ ಮೇಲೆ ಒಳ ಮೀಸಲಾತಿ ಜಾರಿಗೊಳಿಸಬೇಕಾಗಿದೆ. ನಿಖರವಾದ ಮಾಹಿತಿ ಇಲ್ಲದೇ ಒಳ ಮೀಸಲಾತಿ ಜಾರಿಗೊಳಿಸಿದರೆ, ನ್ಯಾಯಾಲಯ ವಿಮರ್ಶೆಗೊಳಪಡುವುದರಿಂದ ನಿಖರವಾದ ದತ್ತಾಂಶ ಇಲ್ಲದೇ ಹೋದರೆ ರಾಜ್ಯ ಸರ್ಕಾರ ನೀಡಿದ ಒಳ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಲಿದೆ. ಒಂದು ವೇಳೆ ಹೀಗಾದರೆ 30 ವರ್ಷಗಳ ಸುದೀರ್ಘ ಹೋರಾಟ ವ್ಯರ್ಥವಾಗಲಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ದಲಿತ ಮುಖಂಡರಾದ ನರಸಿಂಹಯ್ಯ, ನರಸೀಯಪ್ಪ ಮಾತನಾಡಿದರು. ಹೆತ್ತೇನಹಳ್ಳಿ ಮಂಜುನಾಥ್, ನಟರಾಜಪ್ಪ, ಕೋಡಿಯಾಲ ಮಹದೇವ್ ಸೇರಿದಂತೆ ಹಲವರು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular