Wednesday, November 6, 2024
Google search engine
Homeಮುಖಪುಟಸಿಎಂ ಸಿದ್ದರಾಮಯ್ಯಗೆ ಸ್ವಪಕ್ಷೀಯರಿಂದಲೇ ಹೆಚ್ಚಿನ ಕಾಟ-ಸಚಿವ ವಿ.ಸೋಮಣ್ಣ

ಸಿಎಂ ಸಿದ್ದರಾಮಯ್ಯಗೆ ಸ್ವಪಕ್ಷೀಯರಿಂದಲೇ ಹೆಚ್ಚಿನ ಕಾಟ-ಸಚಿವ ವಿ.ಸೋಮಣ್ಣ

ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬಿಜೆಪಿ ಮತ್ತು ಜೆಡಿಎಸ್ ನವರು ಕೊಡುವ ಕಾಟಕ್ಕಿಂತ ಕಾಂಗ್ರೆಸ್ ನವರ ಕಾಟವೇ ಹೆಚ್ಚಾಗಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ  ವಿ. ಸೋಮಣ್ಣ ಆರೋಪಿಸಿದರು.

ತುಮಕೂರಿನಲ್ಲಿ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ, ಬಿಹಾರ, ಜಾರ್ಖಂಡ ಈ ಮೂರು ರಾಜ್ಯಗಳಲ್ಲೂ ಸಹ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

ಹರ್ಯಾಣ ರಾಜ್ಯದಲ್ಲಿ ಬಿಜೆಪಿ ಮೂರನೇ ಬಾರಿಗೆ ಅಧಿಕಾರಕ್ಕೆ ಬಂದಿದೆ. ಜಮ್ಮು- ಕಾಶ್ಮೀರದಲ್ಲೂ ಮುಂದಿನ ದಿನಗಳಲ್ಲಿ ಬದಲಾವಣೆ ಗಾಳಿ ಬಿಸುತ್ತದೆ. ಬಿಹಾರದಲ್ಲಿ ಆರ್ ಜೆ ಡಿ ಆಟ ನಡೆಯದು, ಪ್ರಧಾನಿ ನರೇಂದ್ರ ಮೋದಿ ಕುರಿತು ದೇಶದ ಜನತೆಗೆ ವಿಶೇಷ ಕಾಳಜಿ ಇದೆ. ಭಾರತಕ್ಕೆ ನರೇಂದ್ರ ಮೋದಿ ಅವರ ಅವಶ್ಯಕತೆ ಇದೆ ಎಂದು ಹೇಳಿದರು.

ಇಂಡಿಯಾ ಮೈತ್ರಿಕೂಟದಲ್ಲಿದ ಶರದ್ ಪವರ್, ಶಿವಸೇನೆಯ ಠಾಕ್ರೆ ಎಲ್ಲರೂ ಬದಲಾವಣೆಯಾಗಿದ್ದಾರೆ. ನರೇಂದ್ರ ಮೋದಿ ಜೊತೆ ನೆನ್ನೆ ನಾಲ್ಕು ಗಂಟೆಗೂ ಹೆಚ್ಚು ಕಾಲವಿದ್ದೆ. ಅವರಿಗೆ ದೇಶದ ಬಗ್ಗೆ ಇರುವ ಬದ್ದತೆಯನ್ನು ಹತ್ತಿರದಿಂದ ಗಮನಿಸಿದೆ. ಬಿಜೆಪಿಗೆ ಮೋದಿಯಂತಹ ನಾಯಕ ಸಿಕ್ಕಿರುವುದು ನಮ್ಮ ಪುಣ್ಯ ಎಂದು ತಿಳಿಸಿದರು.

ಜಿಲ್ಲೆಗೆ ಹಲವು ರೈಲ್ವೆ ಯೋಜನೆಗಳನ್ನು ತಂದಿದೇನೆ, ಕನ್ನಡದಲ್ಲೆ ರೈಲ್ವೆ ಪರೀಕ್ಷೆ ಬರೆಯಲು ಆದೇಶ ಮಾಡಲಾಗಿದೆ. ಈ ಹಿಂದೆ ಇದ್ದ ಜಾಪರ್ ಷರಿಫ್, ಮಲ್ಲಿಕಾರ್ಜುನ ಖರ್ಗೆಯವರು ಯಾಕೆ ಕನ್ನಡದಲ್ಲೆ ಪರೀಕ್ಷೆ ಬರೆಯಲು ಅನುಮತಿ ನೀಡಿರಲಿಲ್ಲ ಎಂದು ಪ್ರಶ್ನಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular