Thursday, September 19, 2024
Google search engine
Homeಮುಖಪುಟಸುಳ್ಳು ಹೇಳಿದ ಸಂಸದ-ತರಾಟೆಗೆ ತೆಗೆದುಕೊಂಡ ಶಾಸಕ ಶ್ರೀನಿವಾಸ್

ಸುಳ್ಳು ಹೇಳಿದ ಸಂಸದ-ತರಾಟೆಗೆ ತೆಗೆದುಕೊಂಡ ಶಾಸಕ ಶ್ರೀನಿವಾಸ್

ಎಂಎಸ್ಎಸ್ ಸ್ಟೇಷನ್ ಉದ್ಘಾಟನೆ ಸಂದರ್ಭದಲ್ಲಿ ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ರೈತರಿಗೆ ಸುಳ್ಳು ಭರವಸೆ ನೀಡುತ್ತಿರುವುದನ್ನು ನೋಡಿ ವೇದಿಕೆಯಲ್ಲಿದ್ದ ಶಾಸಕ ಎಸ್.ಆರ್.ಶ್ರೀನಿವಾಸ್ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲಿ ನಡೆದಿದೆ.

ಸಂಸದ ಬಸವರಾಜು ಅವರು ಎಂಎಸ್ಎಸ್ ಸ್ಟೇಷನ್ ಗೆ ಭೂಮಿ ನೀಡಿದರೆ ಒಂದು ಕೋಟಿ ಪರಿಹಾರ ಸಿಗುತ್ತದೆ. ಗಿಡಮರಗಳಿಗೂ ಪರಿಹಾರ ದೊರೆಯುತ್ತದೆ ಎಂದು ಹೇಳಿದರು. ಚೆಕ್ ಡ್ಯಾಂ ನಿರ್ಮಾಣಕ್ಕೆ ಕೇಂದ್ರ ಸರ್ಕಾರ 500 ಕೋಟಿ ರೂಪಾಯಿ ಮೀಸಲಿಟ್ಟಿದೆ ಎಂದೂ ಸೇರಿಸಿದರು. ಇದರಿಂದ ಕೆಂಡಾಮಂಡಲವಾದ ಶಾಸಕ ಶ್ರೀನಿವಾಸ್ ‘ರೈತರಿಗೆ ಸುಳ್ಳು ಹೇಳಬೇಡಿ. ವಯಸ್ಸಾಗಿದೆ ಈಗಲಾದರೂ ನಿಜ ಹೇಳಿ, ಸುಮ್ಮನೆ ರೈತರಿಗೆ ಸುಳ್ಳು ಹೇಳಿ ವಂಚನೆ ಮಾಡಬೇಡಿ. ಸತ್ಯವನ್ನು ಹೇಳಿ ರೈತರಿಗೆ ಮನವರಿಕೆ ಮಾಡಿ, ಅದು ಬಿಟ್ಟು ಸುಳ್ಳು ಹೇಳಬೇಡಿ ಎಂದು ಏಕವಚನದಲ್ಲೇ ಕಿಡಿಕಾರಿದರು.

ಈ ಕುರಿತು ದಿ ನ್ಯೂಸ್ ಕಿಟ್ ಜೊತೆ ಮಾತನಾಡಿ ಶಾಸಕ ಶ್ರೀನಿವಾಸ್, “ರೈತರ ಬೆಳೆ, ಮರಗಿಡಗಳು ಹಾಳಾದರೆ ಸಬ್ ರಿಜಿಸ್ಟ್ರಾರ್ ಕಚೇರಿಯ ನಿಗದಿಪಡಿಸಿ ದರದ ಮೂರು ಪಟ್ಟು ಪರಿಹಾರವನ್ನು ಕೊಡಿಸಲು ಸಾಧ್ಯವಿದೆ. ಅದು ಬಿಟ್ಟು ಸಂಸದರು ರೈತರಿಗೆ ಸುಳ್ಳು ಹೇಳಲು ಮುಂದಾದರು. ನನಗೆ ಸಿಟ್ಟು ಬಂತು. ರೈತರಿಗೆ ಸುಳ್ಳು ಹೇಳುವುದು ಎಷ್ಟು ಸರಿ. ವಯಸ್ಸಾಗಿದೆ. ಈಗಲಾದರೂ ಸತ್ಯ ಹೇಳಿ” ಎಂದು ಬೈದೆ ಎಂದು ಸ್ಪಷ್ಟಪಡಿಸಿದರು.

“ನಮ್ಮ ಸರ್ಕಾರ ಇದ್ದ ಅವಧಿಯಲ್ಲೇ ಚೆಕ್ ಡ್ಯಾಂ ನಿರ್ಮಾಣಕ್ಕೆ ಹಣ ಬಿಡುಗಡೆಯಾಗಿತ್ತು. ಆದರೆ ಈಗ ಕೇಂದ್ರ ಸರ್ಕಾರ 500 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ ಎಂದು ಸುಳ್ಳು ಹೇಳುತ್ತಾರೆ. ಹಿಂದೆಯೇ ಬಜೆಟ್ ನಲ್ಲೇ ಹಣ ಮೀಸಲಿಟ್ಟಿತ್ತು. ನಾನು ಇದಕ್ಕೆ ಶ್ರಮಿಸಿದ್ದೇನೆ. ಆದರೆ ರೈತರಿಗೆ ಸುಳ್ಳು ಹೇಳಿ ಸಂಸದ ಬಸವರಾಜು ದಿಕ್ಕು ತಪ್ಪಿಸುತ್ತಿದ್ದರು” ಎಂದು ಆರೋಪಿಸಿದರು.

ಚೇಳೂರು ಹೋಬಳಿ ಸಿ.ನಂದಿಹಳ್ಳಿಯಲ್ಲಿ ಅಗಸ್ಟ್ 14ರಂದು ನಡೆದ ಸಭೆಯಲ್ಲಿ ಉಭಯ ನಾಯಕರು ಏಕವಚನದಲ್ಲೇ ಬೈದಾಡಿಕೊಂಡರು. ನಂತರ ಸ್ಥಳೀಯರು ಮಧ್ಯ ಪ್ರವೇಶಿಸಿ ಇಬ್ಬರನ್ನು ಸಮಾಧಾನಪಡಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular