Monday, September 16, 2024
Google search engine
Homeಮುಖಪುಟಮೌಮಿತಾ ದೆಬನಾಥ್ ಅತ್ಯಾಚಾರ-ಹತ್ಯೆ ಖಂಡಿಸಿ ಪ್ರತಿಭಟನೆ

ಮೌಮಿತಾ ದೆಬನಾಥ್ ಅತ್ಯಾಚಾರ-ಹತ್ಯೆ ಖಂಡಿಸಿ ಪ್ರತಿಭಟನೆ

ಆಗಸ್ಟ್ 8ರಂದು ಕಲ್ಕತ್ತಾದ ಆರ್.ಜಿ.ಕರ್ ಮೆಡಿಕಲ್ ಕಾಲೇಜಿನ ದ್ವಿತೀಯ ವರ್ಷದ ಸ್ನಾತೋತ್ತರ ವೈದ್ಯಕೀಯ ವಿದ್ಯಾರ್ಥಿನಿ ಡಾ.ಮೌಮಿತಾ ದೆಬನಾಥ್ ಮೇಲೆ ನಡೆದಿರುವ ಅತ್ಯಾಚಾರ ಮತ್ತು ಕೊಲೆ ಖಂಡನೀಯ.ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ವಿಷಯವಾಗಿದೆ ಎಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಡಾ.ಹೆಚ್.ವಿ. ರಂಗಸ್ವಾಮಿ ತಿಳಿಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಇಡೀ ಘಟನೆಯನ್ನು ಅವಲೋಕಿಸಿದಾಗ ಎಲ್ಲಾ ವರ್ಗದ ಮಹಿಳೆಯರಿಗೆ ಸುರಕ್ಷತೆಯ ಕೊರತೆ ಇದೆ ಎಂಬುದು ಸಾಭೀತಾಗುತ್ತದೆ. ಸರ್ಕಾರ ಕೂಡಲೇ ಅತ್ಯಾಚಾರ ಮತ್ತು ಕೊಲೆ ಆರೋಪಿಗಳನ್ನು ಬಂಧಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಇಂತಹ ಘಟನಗಳು ಮರುಕಳುಹಿಸದಂತೆ ಎಚ್ಚರಿಕೆ ವಹಿಸಬೇಕೆಂದು ಒತ್ತಾಯಿಸಿದರು.

ವೈದ್ಯಕೀಯ ಶಿಕ್ಷಣ ಪಡೆಯುವುದು ಹುಡುಗಾಟದ ವಿಷಯವಲ್ಲ. ಸಾಕಷ್ಟು ಶ್ರಮವಹಿಸಿ ಈ ವೃತ್ತಿಯನ್ನು ಆರಿಸಿಕೊಂಡು ಬಂದಿರುತ್ತಾರೆ. ಜೀವ ಉಳಿಸುವ ವೈದ್ಯರ ಸ್ಥಿತಿಯೇ ಹೀಗಾದರೆ, ಜನಸಾಮಾನ್ಯರ ಪಾಡೇನು ಎಂಬ ಪ್ರಶ್ನೆ ಮೂಡುತ್ತದೆ. ವೈದ್ಯರ ಮೇಲಿನ ಹಲ್ಲೆ, ದೌರ್ಜನ್ಯ, ದಬ್ಬಾಳಿಕೆ ಹಾಗೂ ತಮ್ಮದಲ್ಲದೆ ತಪ್ಪಿಗೆ ವೈದ್ಯರು ಹಲ್ಲೆಗಳಿಗೆ ಗುರಿಯಾಗುತ್ತಿರುವ ಹಿನ್ನೆಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಬರುವ ಹೆಣ್ಣು ಮಕ್ಕಳ ಸಂಖ್ಯೆ ಸಹ ಕುಸಿದಿದೆ. ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಹಾಗಾಗಿ ಸರ್ಕಾರ ಕೂಡಲೇ ಸೂಕ್ತ ತನಿಖೆ ನಡೆಸಿ, ತಪಿತಸ್ಥರನ್ನು ಪತ್ತೆ ಹೆಚ್ಚಿ ಉಗ್ರವಾದ ಶಿಕ್ಷೆಗೆ ಗುರಿ ಪಡಿಸಬೇಕು ಎಂದರು.

ವೈದ್ಯಕೀಯ ಕ್ಷೇತ್ರದ ಮಹಿಳೆಯರು ಸೇರಿದಂತೆ ಎಲ್ಲಾ ಕ್ಷೇತ್ರಗಳ ಮಹಿಳೆಯರ ಸಂರಕ್ಷಣೆಯ ದೃಷ್ಟಿಯಿಂದ ಸರ್ಕಾರ ತಜ್ಞರು ಸಲಹೆ ಪಡೆದು ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಈ ರೀತಿ ಘಟನೆಗಳು ಮಹಿಳೆಯರು ಮೇಲೆ ನಡೆಯುತ್ತಿರುವ ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬುದರ ಪ್ರತಿಬಿಂಬವಾಗಿದೆ. ಹಾಗಾಗಿ ಸರ್ಕಾರ ಮತ್ತು ಸಂಸ್ಥೆಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಬಾ.ಹ.ರಮಾಕುಮಾರಿ ಮಾತನಾಡಿ, ಸಮಾಜದಲ್ಲಿ ಹೆಣ್ಣು ಮಕ್ಕಳ ಸುರಕ್ಷತೆಯ ಬಗ್ಗೆ ಮನ ಪರಿವರ್ತನೆಯಾಗಬೇಕಿದೆ. ಆಗಸ್ಟ್ 8ರ ಘಟನೆ ಲಿಂಗತಾರತಮ್ಮದ ಪ್ರತೀಕವಾಗಿದೆ. ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗದ ಹೊರತು ಇಂತಹ ಘಟನೆಗಳ ನಿಲ್ಲಲ್ಲು ಸಾಧ್ಯವಿಲ್ಲ. ಹಾಗಾಗಿ ಶಾಲೆಗಳಲ್ಲಿ, ಮನೆಯಲ್ಲಿಯೇ ಹೆಣ್ಣು, ಗಂಡನ್ನು ನೋಡುವ ದೃಷ್ಟಿಕೋನದಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕಿದೆ. ಈ ಘಟನೆಯ ವಿರುದ್ದ ಎಲ್ಲರೂ ಹೋರಾಟಕ್ಕೆ ಇಳಿದು ಆಳುವ ಸರ್ಕಾರಗಳಿಗೆ ಪ್ರತಿರೋಧದ ದ್ವನಿ ತಟ್ಟುವಂತೆ ಮಾಡಬೇಕೆಂದರು.

ನಂತರ ನಗರದ ಟೌನ್‌ಹಾಲ್ ವೃತದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಡಾ.ಮೌಮಿತಾ ದೆಬನಾಥ್ ಮೇಲಿನ ಅತ್ಯಾಚಾರ ಮತ್ತು ಕೊಲೆಯನ್ನು ಖಂಡಿಸಿ, ಆಕೆಯ ಸಾವಿಗೆ ಸಂಪಾತ ಸೂಚಿಸಿ ಮೇಣದ ಬತ್ತಿ ಹಚ್ಚಲಾಯಿತು. ಐಎಂಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಮಹೇಶ್, ಡಾ.ಡಿ.ಹನುಮಕ್ಕ, ಐಎಂಎ ಮಹಿಳಾ ಘಟಕದ ಡಾ.ಅನಿತಾ ಬಿಗೌಡ, ಡಾ.ಶೃತಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular