ಆಧುನಿಕ ಭರಟೆಯಲ್ಲಿ ಕೆಲವರು ತಮ್ಮ ವಯಕ್ತಿಕ ಸೋಕಿಗಾಗಿ ಇತ್ತೀಚಗೆ ಬರೆಯುತ್ತಿರುವುದು ಕಳವಳಕಾರಿ ಸಂಗತಿ, ಈ ನಿಟ್ಟಿನಲ್ಲಿ ಪ್ರಸ್ತುತ ಸಾಹಿತ್ಯದ ಉಳುವಿಗಾಗಿ ಕನ್ನಡ ಕೃತಿಗಳು ಹೆಚ್ಚೆಚ್ಚು ಹೊರ ತರಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್ ಸಿದ್ಧಲಿಂಗಪ್ಪ ಅಭಿಪ್ರಾಯಪಟ್ಟರು.
ತುಮಕೂರು ನಗರದ ಜಿಲ್ಲಾ ಕಸಾಪ ಭವನದಲ್ಲಿ ನಡೆದ ತುಮಕೂರಿನ ಉದಯೋನ್ಮುಕ ಸಾಹಿತಿ, ಲೇಖಕಿ ಉಷಾ ರವಿ ಅವರ ಚೊಚ್ಚಲ ಕಾದಂಬರಿ ಅಂತರಪಟವನ್ನು ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಾಸ್ತವದಲ್ಲಿ ಇಂದೆಲ್ಲಾ ನೈಜ ಪ್ರೀತಿ, ಸಂಬಂಧವನ್ನು ವ್ಯವಹಾರಿಕ ದೃಷ್ಠಿಕೋನದ ಮಾಪನದಲ್ಲಿ ಅಳೆಯುತ್ತಿದ್ದೇವೆ. ಗಟ್ಟಿ ಸಾಹಿತ್ಯದ ಕೃಷಿಯನ್ನು ಮಾಡಬೇಕಿದೆ, ಇಂತಹ ಕಾರ್ಯಕ್ಕೆ ಕಸಾಪ ಯಾವಗಲೂ ಲೇಖಕರ ಬೆನ್ನಿಂದ ಇದ್ದು, ಸದಾ ಪ್ರೋತ್ಸಾಹಿಸುತ್ತದೆ ಎಂದರು.
ಕಾದಂಬರಿ ಕುರಿತು ಪರಿಚಯ ಮಾಡಿದ ವಿಶ್ವ ವಿದ್ಯಾಲಯ ಅಧ್ಯಾಪಕಿ ಡಾ.ಆಶಾ ಬಗ್ಗನಡು ಮಾತನಾಡಿ, ಹೆಣ್ಣು ಮಕ್ಕಳು ತಾವು ಹೆತ್ತ ಮಗುವಿಗೆ ಎದೆಹಾಲು ನೀಡದೆ ತಮ್ಮ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ ಎಂಬ ಹಪಿಹಪಿಯಿಂದ ಮಗುವಿಗೆ ಉಯಿಹಾಲನ್ನು ಹಾಕುತ್ತಿರುವುದು ದುರಂತವೇ ಸರಿ. ಕೇವಲ ಬಂಡವಾಳಶಾಹಿಗಳ ಕಪಿಮುಷ್ಠಿಯಲ್ಲಿ ಈವತ್ತಿಗೂ ನಾವು ಮುಂದುವರಿಯುತ್ತಿದ್ದೇವೆ ಎನ್ನುವುದನ್ನು ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಸಂಬಂಧಗಳು ಕೇವಲ ವ್ಯವಹಾರಕ್ಕೆ ಸೀಮಿತವಾಗುತ್ತಿವೆ. ಇದರಿಂದ ನಾವೆಲ್ಲರೂ ಹೊರಬರಬೇಕಿದೆ ಎಂದು ಹೇಳಿದರು.
ಕಾದಂಬರಿಯಲ್ಲಿ ನಮ್ಮಲ್ಲಿನ ಗ್ರಾಮ್ಯ ಭಾಷೆಯ ಜೊತೆಗೆ ಕೆಲವು ಮೌಢ್ಯಗಳನ್ನು ಹೊಡೆದೋಡಿಸುವಂತಹ ಪಾತ್ರಗಳನ್ನು ಕಾದಂಬರಿಗಾರ್ತಿ ಸೃಷ್ಠಿಸಿ ಅವುಗಳಿಗೆ ಇಂಬು ನೀಡಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದು ವ್ಯಾಖ್ಯಾನಿಸಿದರು. ಕಾದಂಬರಿ ಓದುಗರಿಗೆ ತೀವ್ರ ಕುತೂಹಲ ಭರಿತವಾಗಿ ಓದಿಸಿಕೊಂಡು ಹೋಗುತ್ತದೆ ಎಂದು ತಿಳಿಸಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಬಾ.ಹ ರಮಾಕುಮಾರಿ, ಸಾಮಾಜಿಕ ಕಳಕಳಿಗೆ ಪೂರಕವಾದ ಶೃಜನಶೀಲತೆಯ ಕೃತಿಗಳು ಧಾವಿಸುವ ಅತ್ಯಗತ್ಯವಿದೆ ಎಂದರು. ಕಾದಂಬರಿಯನ್ನು ಸಾಮೂಹಿಕವಾಗಿ ಗಣ್ಯರಿಂದ ಲೋಕಾರ್ಪಣೆಗೊಳಿಸಲಾಯಿತು.
ಮಲ್ಲಿಕಾ ಬಸವರಾಜು, ಆರ್.ಶೇಷಾದ್ರಿ, ಬಿ.ಎ ಶಮೀರ್ ಪಾಷಾ,, ಸಿ.ಇ ಮಲ್ಲೇಶ್ , ಕೃತಿಕರ್ತೃ ಉಷಾ ರವಿ ಮಾತನಾಡಿದರು. ಅನಿತಾ ಪ್ರಾರ್ಥಿಸಿದರು. ಮಂಜುನಾಥ ಅತ್ರೇಯ ಸ್ವಾಗತಿಸಿದರು. ರಾಣಿ ಚಂದ್ರಶೇಖರ್ ನಿರೂಪಿಸಿದರು. ಮರಿಯಂಬಿ ವಂದಿಸಿದರು.