Saturday, July 20, 2024
Google search engine
Homeಚಳುವಳಿದಸಂಸ ನಾಯಕ ಪಾರ್ಥಸಾರಥಿ ನಿಧನ

ದಸಂಸ ನಾಯಕ ಪಾರ್ಥಸಾರಥಿ ನಿಧನ

ದಲಿತ ಸಂಘರ್ಷ ಸಮಿತಿಯ ನಾಯಕ, ಒಳಮೀಸಲಾತಿಯ ಹೋರಾಟಗಾರ ಪಾರ್ಥಸಾರಥಿ ಅವರು ಜುಲೈ 8ರಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಸಿದ್ದಾಪುರ ನಿವಾಸಿ ಪಾರ್ಥಸಾರಥಿ ತುಮಕೂರಿನಲ್ಲೇ ನೆಲೆಸಿದ್ದರು. ಶೋಷಿತ ಸಮುದಾಯದ ಚಿಂತಕರು, ಒಳಮೀಸಲಾತಿ ಚಳವಳಿಯ ಪ್ರಖರ ಚಿಂತಕರೂ ಆಗಿದ್ದ ಪಾರ್ಥಸಾರಥಿ ತುಮಕೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ ಒಳಮೀಸಲಾತಿಯ ತಾರ್ಕಿಕ ಅಂತ್ಯಕ್ಕೆ ಕಾನೂನು ಹೋರಾಟವೇ ಮಾರ್ಗ ಎಂದು ಕಳೆದ 15 ವರ್ಷದಿಂದ ಸುಪ್ರೀಂಕೋರ್ಟಿನಲ್ಲಿ ಕಾನೂನು ಹೋರಾಟವನ್ನ ಮುನ್ನೆಡೆಸುತ್ತಿದ್ದರು ಪಾರ್ಥಸಾರಥಿ.

ಒಳಮೀಸಲಾತಿಯ ಚಳವಳಿಗಾರರಿಗೆ ಉತ್ತಮ ವಿಚಾರ ವಿನಿಯಮಯ ಮಾಡಿಕೊಳ್ಳುತ್ತಾ ನಮ್ಮ ಸ್ವ ಸಾಮರ್ಥ್ಯದ ಮೇಲೆ ನ್ಯಾಯಾಂಗದಲ್ಲಿ ಪ್ರತಿಪಾದಿಸೋಣ ಎಂದು ಹೇಳಿ ಸ್ವತಃ ತಾವೇ ತಮ್ಮೊಂದಿಗಿರುವ ಚಿಂತಕರನ್ನು ಕಟ್ಟಿಕೊಂಡು ಸುಪ್ರೀಂಕೋರ್ಟ್ ನಲ್ಲಿಯೂ ದಾವೆ ದಾಖಲಿಸಿದ್ದು ಇತಿಹಾಸದಲ್ಲಿ ಉಳಿಯಲಿದ ಎಂದು ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಸ್ಮರಿಸಿದ್ದಾರೆ.

ಬದುಕಿನ ಪಯಣ ಮುಗಿಸಿದ ಪಾರ್ಥಸಾರಥಿ..

ಪಾರ್ಥ ಅವರು ವಿಶಿಷ್ಟ ಮಾಹಿತಿಗಳ ಕಣಜ. ಅವರಲ್ಲಿರುವ ಸಂಗ್ರಹವನ್ನು ಯಾರಿಗೂ ಕೊಟ್ಟಿಲ್ಲವೆನಿಸುತ್ತದೆ. ಹೋರಾಟ, ಸಮುದಾಯದ ಬಗೆಗಿನ ಕಾಳಜಿ, ಚರ್ಚೆಗಳು ನಮ್ಮನ್ನು ತಲ್ಲಣಗೊಳಿಸುತ್ತಿದ್ದವು. ಕಳೆದ ಒಂದು ತಿಂಗಳ ಹಿಂದೆ ತಮಿಳುನಾಡಿಗೆ ಹೋಗೋಣ ಬಾ ರವಿ ಅಲ್ಲಿನ ರಾಜನ ಬಗೆಗೆ ನೀನು ಅಧ್ಯಯನ ಮಾಡುವಂತೆ ಅಂದಿದ್ದರು. ರಜ ಸಿಗಲಿ ಸರ್ ಒಂದು ವಾರ ಅಲ್ಲೇ ಇದ್ದು ಮಾಡೋಣ ಅಂದಿದ್ದೆ. ಅದು ಅವರಲ್ಲಿನ ಅಂಕಿಅಂಶ, ಚಾರಿತ್ರಿಕ ವಿವರಗಳು, ಒಳಮೀಸಲಾತಿ ಬಗೆಗೆ ಇದ್ದ ಕ್ಲಾರಿಟಿ.. ಈಗಲೂ ಗುನುಗುವಂತೆ ಮಾಡುತ್ತಿವೆ ಎಂದು ವಿಮರ್ಶಕ ರವಿಕುಮಾರ್ ನಿ.ಹ. ನೆನಪಿಸಿಕೊಂಡಿದ್ದಾರೆ.

ಅಧ್ಯಾಪಕ ಪ್ರಕಾಶ್ ಮಂಟೇದ, ಪಾರ್ಥಸಾರಥಿ ಈ ಹೆಸರನ್ನು ನಾನು ಡಾ. ಟಿ ಹೆಚ್ ಲವಕುಮಾರ್ ಜೊತೆ ಕೇಳಿದ್ದೆ ಹಾಗೂ ಅವರ ಜೊತೆನೆ ಇವರನ್ನು ನೋಡಿದ್ದು ಸಹ. ಆಗ ನಾವು ರಾಮನಗರದ ಸಂವಾದದಲ್ಲಿದ್ದೆವು. ಪಾರ್ಥ ಅವ್ರು ಅಲ್ಲಿಗೆ ಬರೋರು. ದಲಿತ ಚಳವಳಿ ಜೊತೆಗೆ ಆಗತಾನೆ ನಾನು ಕೇಳಿದ ದಲಿತರೊಳಗೆ ಎಡಬಲದ ಪ್ರಶ್ನೆಗಳನ್ನು ಕೇಳಿ ಒಂತರ ಹೀಗೂ ಉಂಟೆ ಎಂದು ಅಲೋಚಿಸಿದ್ದೆ. ಪಾರ್ಥ ಅವರು ದಲಿತ ಚಳವಳಿಯ ಬೇರೆ ಮಗ್ಗಲುಗಳ ಬಗ್ಗೆ ಮಾತಾಡುತ್ತಿದ್ದರು ಸಹ. ಮತ್ತೆ ಒಂದು ಪೇಟಿಂಗ್ ಪ್ರದರ್ಶನವನ್ನು ಬೆಂಗಳೂರಿನ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದರು. ಬಿಡುಗಡೆಯ ಬಣ್ಣಗಳು ಅಂತ. ರಾಮನಗರದ ಸಂವಾದದಲ್ಲಿ ನಾವು ಒಂತರ ಆಕ್ಟೀವ್ ಆಗಿದ್ದಾಗ ಇಂಥವರು ಬರುತ್ತಿದ್ದರು. ನನಗೆ ದಲಿತ ಚಳವಳಿಯ ಒಳಬಿಕ್ಕಟ್ಟುಗಳು ಅರಿವಾದವು. ಇವರ ಎಡಬಲದ ವಿಚಾರಗಳು MRHS ಮೂಲಕ ಹರಡಿಕೊಳ್ಳುತ್ತಿದ್ದವು. ನಾನು ಇವರ ವಿಚಾರಗಳನ್ನು ಸಹಜವಾಗಿಯೇ ಸಂದೇಹಿಸುತ್ತಿದ್ದೆ. ಮತ್ತೆ ಈ ವೈರುದ್ದ್ಯಗಳ ಬಗ್ಗೆ ಸಹನೆ ಬಳೆಸಿಕೊಂಡು ನನ್ನ ಅಲೋಚನೆಯನ್ನು ಸಕಾರಾತ್ಮಕಗೊಳಿಸಿಕೊಳ್ಳಲು ಇವರೂ ಕಾರಣರಾದರು.ಒಂದೆರಡು ಸಲ ನನಗೆ ಪೋನ್ ಮಾಡಿದ್ದರು….ನಾನೂ ಯಾವುದೋ ಕಾರಣಕ್ಕೆ ಪೋನ್ ಮಾಡಿದ್ದೆ…..ಈಗ ಇವರು ಇಲ್ಲವಾಗಿರುವುದು ಬಹಳ ಬೇಸರವನ್ನು ತಂದಿದೆ. ಬ್ರದರ್ ಶಾಂತಿಯಲ್ಲಿ ನಿದ್ರಿಸಿ. ಜೈ ಭೀಮ್ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular