Sunday, September 8, 2024
Google search engine
Homeಮುಖಪುಟರೈತರು ಭಯೋತ್ಪಾದಕರಲ್ಲ - ರೈತ ಸಂಘದ ರಾಜ್ಯಾಧ್ಯಕ್ಷ ವಾಸುದೇವಮೇಟಿ

ರೈತರು ಭಯೋತ್ಪಾದಕರಲ್ಲ – ರೈತ ಸಂಘದ ರಾಜ್ಯಾಧ್ಯಕ್ಷ ವಾಸುದೇವಮೇಟಿ

ಹರಿಯಾಣ ಮತ್ತು ಪಂಜಾಬ್ ರಾಜ್ಯದ ರೈತರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ ನಡೆಸಿದರೆ ಅವರ ಮೇಲೆ ಕೇಂದ್ರ ಸರ್ಕಾರ ಬಲಪ್ರಯೋಗ ಮಾಡುತ್ತಿದೆ. ರೈತರು ದೇಶಕ್ಕೆ ಅನ್ನ ನೀಡುವವರೆ ಹೊರತು ಭಯೋತ್ಪಾದಕರಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ವಾಸುದೇವಮೇಟಿ ತಿಳಿಸಿದರು.

ತುಮಕೂರಿನ ಮುರುಘರಾಜೇಂದ್ರ ಸಭಾಂಗಣದಲ್ಲಿ ನಡೆದ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೇಶಕ್ಕೆ ಅನ್ನ ಕೊಡುವ ರೈತನಿಗೆ ಬೆಂಬಲ ಬೆಲೆ ನೀಡಲು ಸರ್ಕಾರಗಳು ಮೀನಾ ಮೇಷ ಎಣಿಸುತ್ತಿವೆ. ಸಂಸದರು ಶಾಸಕರು ಅವರ ವೇತನ ಮತ್ತು ಭತ್ಯಗಳನ್ನು ಐದು ವರ್ಷಕ್ಕೊಮ್ಮೆ ಹೆಚ್ಚಿಸಿಕೊಳ್ಳುತ್ತಾರೆ. ವ್ಯಾಪಾರಿಗಳು ಮತ್ತು ಉತ್ಪಾದಕರು ತಮ್ಮ ವಸ್ತುಗಳಿಗೆ ತಾವೇ ಬೆಲೆಗಳನ್ನು ನಿರ್ಧಾರ ಮಾಡುತ್ತಾರೆ. ರೈತರು ಬೆಳೆದ ಬೆಳೆಗೆ ರೈತರೆ ಯಾಕೆ ಬೆಲೆ ನಿರ್ಧಾರ ಮಾಡಬಾರದು ಎಂದು ಪ್ರಶ್ನಿಸಿದರು.

ಕೇಂದ್ರ ‌ಸರ್ಕಾರ ದಿನದಿಂದ ದಿನಕ್ಕೆ ರೈತ ವಿರೋಧಿ ವರ್ತನೆ ತಳಿಯುತ್ತಿದೆ. ಇದು ಪ್ರಜಾಪ್ರಭುತ್ವ ರಾಷ್ಟ್ರ, ರಾಜಪ್ರಭುತ್ವ ಅಲ್ಲ. ಐದು ವರ್ಷಕ್ಕೊಮ್ಮೆ ಜನರ ಮುಂದೆ ಮತಯಾಚನೆಗೆ ಬರಲೇ ಬೇಕಾಗುತ್ತದೆ. ಅನ್ನ ಕೊಡುವ ರೈತರ ವಿಚಾರದಲ್ಲಿ ಕೇಂದ್ರ ಮೃದು ಧೋರಣೆ ಅನುಸರಿಸದೆ, ರೈತರಿಗೆ ತೊಂದರೆ ನೀಡಲೆಂದು ರೈತ ವಿರೋಧಿ ‌ಕಾನೂನುಗಳನ್ನು ಜಾರಿಗೆ ತಂದರೆ ರೈತರು ತಕ್ಕ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಸಂಘಟನೆಯ ರಾಜ್ಯ ಉಪಾದ್ಯಕ್ಷೆ ಪುಷ್ಪಲತಾ ಮಾತನಾಡಿ, ರೈತ ಸಂಘಟನೆಗಳಲ್ಲಿ ಮಹಿಳೆಯರು ಮೊದಲು ಪಾಲ್ಗೊಳ್ಳುತ್ತಿರಲಿಲ್ಲ. ಇತ್ತೀಚೆಗೆ ರೈತ ಸಂಘಟನೆಗಳಲ್ಲಿ ಹೋರಾಟಗಳಲಿ ಪುರುಷರ ಜೊತೆ ಮಹಿಳೆಯರು ಪಾಲ್ಗೊಳ್ಳುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು. ಸರ್ಕಾರ ಬೆಂಬಲ ಬೆಲೆಯ ಜೊತೆಗೆ ಉಳಿಮೆ ಕಾಲದಲ್ಲಿ ಸಹಾಯಹಸ್ತ ಚಾಚಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಮಟ್ಟದ ಪದಾಧಿಕಾರಿಗಳು :

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತುಮಕೂರು ಜಿಲ್ಲಾ ಜಿಲ್ಲಾಧ್ಯಕ್ಷರಾಗಿ ಕೋಡ್ಲಾಪುರ ಗೋವಿಂದರಾಜು, ಉಪಧ್ಯಾಕ್ಷರಾಗಿ ದೇವರಾಜು, ಪ್ರಧಾನ ಕಾರ್ಯದರ್ಶಿ ಗಳಾಗಿ ಕೆಸ್ತೂರು ಮೂರ್ತಿ, ಲಿಂಗಮಯ್ಯ, ಕಾರ್ಯದರ್ಶಿಯಾಗಿ ರಂಗಯ್ಯ ಎಲ್,ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಸುನೀಲ್. ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾಗಿ ಸೌಭಾಗ್ಯ, ಉಪಾಧ್ಯಕ್ಷರಾಗಿ ವಸುಂಧರ ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಶೃತಿ, ಕಾರ್ಯದರ್ಶಿಯಾಗಿ ಮಂಜುಳಾ, ಸಂಘಟನಾ ಕಾರ್ಯದರ್ಶಿಗಳಾಗಿ ರಮ್ಯಾ, ಜಯ ರವರನ್ನು ನೇಮಕ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular