ಹೊಸ ಕಲಾವಿದರು, ನುರಿತ ತಂತ್ರಜ್ಞರು ಸಮಾಗಮದಲ್ಲಿ ನಿರ್ಮಾಣಗೊಂಡಿರುವ ತೂತ್‌ಕಾಸು ಸಿನಿಮಾ ಮಾರ್ಚ್ 22 ರಂದು ರಾಜ್ಯದಾದ್ಯಂತ ತೆರೆ ಕಾಣಲಿದ್ದು, ಹಾಸ್ಯ ಮತ್ತು ಮನರಂಜನೆಯನ್ನು ಒಳಗೊಂಡ ಚಲನಚಿತ್ರವನ್ನು ಕನ್ನಡ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ವೀಕ್ಷಿಸಬೇಕೆಂದು ತೂತ್‌ಕಾಸು ಸಿನಿಮಾ ನಿರ್ದೇಶಕ ರತಿ ತೇಜಸ್ ಕೋರಿದ್ದಾರೆ.
ತುಮಕೂರಿನ ಅಕ್ಷಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಚಿತ್ರದ ಟೀಸರ್ ಮತ್ತು ಒಂದು ಹಾಡನ್ನು ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಮೂಲತಃ ತುಮಕೂರು ತಾಲೂಕಿನ ಸಾಸಲು ಗ್ರಾಮದವನು. ಹಾಸ್ಯ ಮತ್ತು ಮನರಂಜನೆಯನ್ನೇ ಕೇಂದ್ರವಾಗಿಟ್ಟು ಕೊಂಡು ಶ್ರೀಕರಗದಮ್ಮದೇವಿ ಸಿನಿ ಕ್ರಿಯೇಷನ್ ಅಡಿಯಲ್ಲಿ ತೂತ್‌ಕಾಸು ಎಂಬ ಸಿನಿಮಾ ಮಾಡಿದ್ದೇನೆ. ನನ್ನೊಂದಿಗೆ ನಿಮ್ಮ ತುಮಕೂರಿನವರೇ ಆದ ಕಿಟ್ಟಿ ಸಹ ನಿರ್ದೇಶಕನಾಗಿ ಕರ್ತವ್ಯ ನಿರ್ವಹಿಸಿದ್ದಾರೆ ಎಂದರು.
ಭಾರತ ದೇಶದಲ್ಲಿ 1942 ರಿಂದ 1946ರವರೆಗೆ ತೂತ್‌ಕಾಸು ಚಲಾವಣೆಯಲ್ಲಿ ಇತ್ತು. ಹಾಗಾಗಿಯೇ ಈ ಹೆಸರನ್ನು ಚಿತ್ರಕ್ಕೆ ಬಳಸಿದ್ದು, ಸಂಪೂರ್ಣ ಹೊಸತನದಿಂದ ಕೂಡಿದ ಸಿನಿಮಾ ಇದಾಗಿದೆ. ಹಂಸಲೇಖ ಗರಡಿಯಲ್ಲಿ ಬೆಳೆದಿದ್ದರಿಂದ ಸಿನಿಮಾದ ಚಿತ್ರಕಥೆ, ನಿರ್ದೇಶನ, ಹಾಡುಗಳನ್ನು ಬರೆದಿದ್ದು, ಹಿನ್ನೆಲೆ ಸಂಗೀತ ಸಹ ನೀಡಿದ್ದೇನೆ. ಖ್ಯಾತ ಗಾಯಕರಾದ ಸವೀನ್ ಸಜ್ಜು, ವಾಸುಕಿ ವೈಭವ್ ಹಾಗೂ ಶೇಶಾಂಕ ಹಾಡಿದ್ದಾರೆ. ತುಮಕೂರು, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ರಮ್ಯ ತಾಣಗಳಲ್ಲಿ ಚಿತ್ರೀಕರಣ ನಡೆದಿದೆ. ಎಲ್ಲರೂ ಉತ್ತಮವಾಗಿ ಅಭಿನಯಿಸಿದ್ದಾರೆ. ಚಿತ್ರವೂ ಚನ್ನಾಗಿ ಬಂದಿದೆ. ಜನರು ಥಿಯೇಟರ್‌ಗೆ ಬಂದು ನೋಡುವ ಮೂಲಕ ಹರಸಿ, ಹಾರೈಸಬೇಕೆಂದು ಮನವಿ ಮಾಡಿದರು.
ತೂತ್‌ಕಾಸು ಸಿನಿಮಾದ ನಾಯಕ ನಟ ವರುಣ್‌ದೇವಯ್ಯ ಮಾತನಾಡಿ, ಇದು ನನ್ನ ಎರಡನೇ ಸಿನಿಮಾ, ಮೊದಲನೇಯ ಸಿನಿಮಾ ಪ್ರೆಮಿಸಂ,ಚಿತ್ರದಲ್ಲಿ ಪ್ಲೇಬಾಯ್ ಆಗಿ ನಟಿಸಿದ್ದು,ಹಾಸ್ಯದ ಜೊತೆಗೆ ಮನರಂಜನೆಯೂ ಇದೆ. ಮನೆ ಮಂದಿಯೆಲ್ಲಾ ಕುಳಿತು ನೋಡಬಹುದಾದ ಸಿನಿಮ ಇದಾಗಿದೆ ಎಂದು ಹೇಳಿದರು.
ಟೀಸ್ಹರ್ ಬಿಡುಗಡೆ ಮಾಡಿದ ಹಿರಿಯ ನಿರ್ದೇಶಕ ಸಹನಾಮೂರ್ತಿ ಮಾತನಾಡಿ, ಪ್ರತಿಭಾವಂತ ನಿರ್ದೇಶಕ ರವಿತೇಜಸ್ ಒಂದು ಒಳ್ಳೆಯ ಸಿನಿಮಾ ಮಾಡಿದ್ದು, ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು ಸಿನಿಮಾ ನೋಡುವ ಕಾರಣಕ್ಕೆ ಇಂದು ಇಂಜಿನಿಯರಿಂಗ್ ಕಾಲೇಜಿನಲ್ಲಿ ಹಾಡು ಮತ್ತು ಟೀಸರ್ ಬಿಡುಗಡೆ ಮಾಡಲಾಗಿದೆ. ನೀವು ಸಿನಿಮಾ ನೋಡಿ, ನಿಮ್ಮ ತಂದೆ ತಾಯಿಗಳನ್ನು ಕರೆದುಕೊಂಡು ಹೋಗಿ ತೋರಿಸಿ ಎಂದು ಸಲಹೆ ನೀಡಿದರು.
ತೂತ್‌ಕಾಸು ಸಿನಿಮಾದ ಕಲಾವಿದರಾದ ಟಿಕ್‌ಟಾಕ್ ಸ್ಟಾರ್ ವಿನೋದ್ ಸೇರಿದಂತೆ ಸಿನಿಮಾದ ಎಲ್ಲಾ ಕಲಾವಿಧರು, ತಂತ್ರಜ್ಞರು ಹಾಗೂ ಅಕ್ಷಯ ಇಂಜಿನಿಯರಿAಗ್ ಕಾಲೇಜಿನ ಸಿಬ್ಬಂದಿ ವರ್ಗದವರು ಹಾಜರಿದ್ದರು.