Saturday, October 19, 2024
Google search engine
Homeಜಿಲ್ಲೆಬೆಳ್ಳಿ ವಸ್ತುಗಳಿದ್ದ ಬ್ಯಾಗ್ ನ್ನು ಎಸ್.ಪಿಗೆ ಒಪ್ಪಿಸಿದ ಟ್ಯಾಂಕ್ ಕ್ಲೀನಿಂಗ್ ಮಾಲಿಕ

ಬೆಳ್ಳಿ ವಸ್ತುಗಳಿದ್ದ ಬ್ಯಾಗ್ ನ್ನು ಎಸ್.ಪಿಗೆ ಒಪ್ಪಿಸಿದ ಟ್ಯಾಂಕ್ ಕ್ಲೀನಿಂಗ್ ಮಾಲಿಕ

ಟ್ಯಾಂಕ್ ಕ್ಲೀನಿಂಗ್ ವೃತ್ತಿಯಲ್ಲಿ ನಿರತರಾಗಿರುವ ವ್ಯಕ್ತಿಯೊಬ್ಬರಿಗೆ ತಮ್ಮ ಕೆಲಸದ ವೇಳೆ ಟ್ಯಾಂಕ್‌ನಲ್ಲಿ ದೊರೆತ ವಾರಸುದಾರರಿಲ್ಲದ ಬೆಳ್ಳಿಯ ವಸ್ತುಗಳಿರುವ ಬ್ಯಾಗ್‌ವೊಂದು ದೊರೆತ್ತಿದ್ದು, ಇದರ ನಿಜವಾದ ವಾರಸುದಾರರಿಗೆ ತಲುಪಿಸುವಂತೆ ಹರ್ಷಿತ್ ಟ್ಯಾಂಕ್ ಕ್ಲೀನಿಂಗ್‌ನ ಮಾಲೀಕ ಹನುಮಂತರಾಜು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಲುಪಿಸಿದ್ದಾರೆ.

ತುಮಕೂರು ನಗರದ ಬಟವಾಡಿಯ ಮಹಾಲಕ್ಷ್ಮೀ ಬಡಾವಣೆಯ 14ನೇ ಕ್ರಾಸ್‌ನ ಮನೆಯೊಂದರಲ್ಲಿ ವಾಸವಿರುವ ಹನುಮಂತರಾಜು ಟ್ಯಾಂಕ್ ಕ್ಲಿನಿಂಗ್ ಮತ್ತು ಸೋಲಾರ್ ಸರ್ವಿಸ್ ವೃತ್ತಿಯಲ್ಲಿ ತೊಡಗಿದ್ದು, ಅಸ್ಸಾಂ ಮೂಲದ ನಾಲ್ವರು ಮತ್ತು ಸಂಬಂಧಿಕ ಮನು ಹಾಗೂ ಸ್ಥಳೀಯ ವ್ಯಕ್ತಿ ಶಶಿಕುಮಾರ್ ಎಂಬ ಆರು ಜನ ಕೆಲಸಗಾರರನ್ನು ಇಟ್ಟುಕೊಂಡು ಕೆಲಸ ನಿರ್ವಹಿಸುತ್ತಿರುತ್ತಾರೆ.

ಫೆಬ್ರವರಿ 19 ರಂದು ಸಂಜೆ 5.30ರ ಸುಮಾರಿಗೆ ಹರ್ಷಿತ ಟ್ಯಾಂಕ್ ಕ್ಲಿನಿಂಗ್‌ನ ಮಾಲೀಕ ಹನುಮಂತರಾಜು ಅವರ ಬಳಿ ಕೆಲಸ ಮಾಡುವ ಅವರ ಅಣ್ಣನ ಮಗ ಮನು ಅವರಿಗೆ ದೂ. 9901233022 ನಂಬರ್ ನಿಂದ ಕರೆ ಮಾಡಿ, ಮಂಜುನಾಥ ನಗರದ ಮನೆಯೊಂದಕ್ಕೆ ನಾವು ಬಾಡಿಗೆಗೆ ಬರಬೇಕೆಂದುಕೊಂಡಿದ್ದೇವೆ. ಆ ಮನೆಯ ಟ್ಯಾಂಕ್ ಮತ್ತು ಸಂಪ್ ಕ್ಲೀನ್ ಮಾಡುವಂತೆ ತಿಳಿಸಿದ ಎನ್ನಲಾಗಿದೆ.

ಟ್ಯಾಂಕ್ ಕ್ಲೀನ್ ಕೆಲಸ ಸಿಕ್ಕಿದ್ದರಿಂದ ಕೆಲಸ ಮಾಡುತ್ತಿದ್ದ ಹುಡುಗರನ್ನು ಕರೆದುಕೊಂಡು ಹೋಗಿ ಟ್ಯಾಂಕ್‌ಗೆ ಇಳಿದು ಮೂವರು ಸಂಪ್ ಕ್ಲೀನ್ ಮಾಡುವ ವೇಳೆ ಸಿಂಟೆಕ್ ಟ್ಯಾಂಕ್‌ನಲ್ಲಿ ಬ್ಯಾಗ್‌ವೊಂದು ದೊರೆತ್ತಿದೆ. ಕ್ಲಿನಿಂಗ್ ಕೆಲಸ ಮುಗಿದ ನಂತರ ಸುಮಾರು 8 ಗಂಟೆಗೆ ಕೆಲಸ ಹುಡುಗರು, ಸಿಕ್ಕಿದ ಬ್ಯಾಗ್‌ನ್ನು ಮಾಲೀಕ ಹುಮಂತರಾಜು ಅವರಿಗೆ ತಲುಪಿಸಿದರು ಎನ್ನಲಾಗಿದೆ.

ಬ್ಯಾಗ್ ತೆರೆದು ನೋಡಿದಾಗ ಅದರಲ್ಲಿ ವಿವಿಧ ರೀತಿಯ 26 ಬೆಳ್ಳಿಯ ಸಾಮಾನುಗಳಿದ್ದು, 160 ರೂ ನಗದು ಸಹ ಇತ್ತು. ಬ್ಯಾಗಿನಲ್ಲಿ ಯಾವುದೇ ವಿಳಾಸವಾಗಲಿ, ದೂರವಾಣಿ ಸಂಖ್ಯೆಯಾಗಲಿ ಲಭ್ಯವಿಲ್ಲದ ಕಾರಣ, ಅದೇ ಮನೆಯಲ್ಲಿ ಈ ಹಿಂದೆ ವಾಸವಿದ್ದ ಕುಟುಂಬಕ್ಕೆ ಸಂಬಂಧಿಸಿದ ವಿಳಾಸವಿಲ್ಲದ ಕಾರಣ, ಈ ಬೆಳ್ಳಿಯ ವಸ್ತುಗಳ ನಿಜ ವಾರಸುದಾರರನ್ನು ಪತ್ತೆ ಹೆಚ್ಚಿ ಅವರಿಗೆ ತಲುಪಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಲುಪಿಸಿದ್ದಾರೆ.

ಹನುಮಂತರಾಜು ಅವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular