200 ಕೋಟಿ ವೆಚ್ಚದಲ್ಲಿ 115 ಜಲ ಸಂರಕ್ಷಣಾ ಕಾಮಗಾರಿ ಅನುಷ್ಠಾನ
ರಾಜ್ಯದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ 20 ಸಾವಿರ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ 10 ಕೋಟಿ ರೂ ವೆಚ್ಚದಲ್ಲಿ ಎನ್ಇಇಟಿ/ಜೆಇಇ/ಸಿಇಟಿ ತರಬೇತಿ ಕಾರ್ಯಕ್ರಮ ಅನುಷ್ಠಾನ.
ರಾಜ್ಯದ 30 ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜುಗಳು ಮತ್ತು ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಗಳ ಉನ್ನತೀಕರಣಕ್ಕಾಗಿ ಒಟ್ಟು 30 ಕೋಟಿ ರೂ ಅನುದಾನ ಮೀಸಲು
ರಾಜ್ಯದ ಏಳು ಜಿಲ್ಲೆಗಳಲ್ಲಿ 187 ಕೋಟಿ ರೂ ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್ ಕಟ್ಟಡ ನಿರ್ಮಾಣ
ಎರಡು ವರ್ಷಗಳಲ್ಲಿ 350 ಕೋಟಿ ರೂ ವೆಚ್ಚದಲ್ಲಿ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಉನ್ನತೀಕರಣ
ಕಲ್ಯಾಣ ಕರ್ನಾಟಕ ಭಾಗದಲ್ಲಿ 221 ಕೋಟಿ ರೂ ವೆಚ್ಚದಲ್ಲಿ 40 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ
ಗೃಹಲಕ್ಷ್ಮಿ ಯೋಜನೆಗೆ 2024-25ನೇ ಸಾಲಿಗೆ 28,608 ಕೋಟಿ ರೂ ನಿಗದಿ
ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಮೇಲ್ವಿಚಾರಕಿಯರಿಗೆ 90 ಕೋಟಿ ರೂ ವೆಚ್ಚದಲ್ಲಿ 75,938 ಸ್ಮಾರ್ಟ್ ಫೋನ್ ಒದಗಿಸಲು ಕ್ರಮ
ರಾಜ್ಯದಲ್ಲಿ 200 ಕೋಟಿ ರೂ ವೆಚ್ಚದಲ್ಲಿ 1 ಸಾವಿರ ಅಂಗನವಾಡಿಗಳ ನಿರ್ಮಾಣ
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ವಸತಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕಾಗಿ 2,710 ಕೋಟಿ ರೂ ಅನುದಾನ
ಹಾಸ್ಟೆಲ್ ವಿದ್ಯಾರ್ಥಿಗಳ ಮಾಸಿಕ ಭೋಜನ ವೆಚ್ಚ 100 ರೂ ಹೆಚ್ಚಳ
ಹಿಂದುಳಿದ ವರ್ಗಗಳ 150 ಮೆಟ್ರಿಕ್ ನಂತರದ ಹೊಸ ವಸತಿ ನಿಲಯಗಳ ಪ್ರಾರಂಭ, 174 ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಿಗೆ 200 ಕೋಟಿ ರೂ ವೆಚ್ಚದಲ್ಲಿ ಮೂಲಸೌಕರ್ಯ ಕಲ್ಪಿಸಲು ಕ್ರಮ
100 ಹೊಸ ಮೌಲಾನಾ ಅಜಾದ್ ಶಾಲೆಗಳ ಪ್ರಾರಂಭ ಹಾಗೂ 25 ಶಾಲೆಗಳಲ್ಲಿ ಪದವಿ ಪೂರ್ವ ಶಿಕ್ಷಣ ಪ್ರಾರಂಭ.
80 ವರ್ಷ ದಾಟಿದ ಹಿರಿಯ ನಾಘರಿಕರು ಮಾತ್ರ ಇರುವ ಮನೆಯ ಬಾಗಿಲಿಗೆ ಆಹಾರ ಧಾನ್ಯಗಳನ್ನು ತಲುಪಿಸಲು ಅನ್ನ-ಸುವಿಧಾ ಯೋಜನೆ ಜಾರಿ.
ಪ್ರಗತಿಪಥ ಯೋಜನೆಯಡಿ 5,200 ಕೋಟಿ ರೂ ವೆಚ್ಚದಲ್ಲಿ 189 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ 9,450 ಕಿಮೀ ಉದ್ದದ ರಸ್ತೆ ಸಂಪರ್ಕ ಜಾಲವನ್ನು ಅಭಿವೃದ್ಧಿಪಡಿಸಲು ಕ್ರಮ
ಕಲ್ಯಾಣ ಪಥ ಯೋಜನೆಯಡಿ ಕಲ್ಯಾಣ ಕರ್ನಾಟಕದ 38 ಗ್ರಾಮೀಣ ವಿಧಾನಸಭಾ ಕ್ಷೇತ್ರಗಳಲ್ಲಿ 1 ಸಾವಿರ ಕೋಟಿ ರೂಗಳ ವೆಚ್ಚದಲ್ಲಿ ಒಟ್ಟು 1150 ಕಿ.ಮೀ ರಸ್ತೆ ಅಭಿವೃದ್ಧಿ.
ಮೈಸೂರು, ಮಂಗಳೂರು, ಹುಬ್ಬಳ್ಳಿ -ಧಾರವಾಡ, ಬೆಳಗಾವಿ, ಕಲಬುರಗಿ ಮತ್ತು ತುಮಕೂರಿನ ವಸಂತನರಸಾಪುರ ಕೆಜಿಎಫ್ ಮತ್ತು ಬಳ್ಳಾರಿ ನಗರಗಳ ಸಮೀಪದಲ್ಲಿ ಇಂಟಿಗ್ರೇಟೆಡ್ ಟೌನ್ ಶಿಫ್ ಅಭಿವೃದ್ಧಿ
ಗೃಹಜ್ಯೋತಿ ಯೋಜನೆಯಡಿ 165 ಕೋಟಿ ಗ್ರಾಹಕರ ನೋಂದಣಿ
2024-25ನೇ ಸಾಲಿಗೆ 26 ಸಾವಿರ ಕೋಟಿ ರೂಗಳ ರಾಜಸ್ವ ಸಂಗ್ರಹ ಗುರಿ
ಮದ್ಯದ ಘೋಷಿತ ಸ್ಲಾಬ್ ಗಳನ್ನು ತರ್ಕಬದ್ದಗೊಳಿಸುವ ಮೂಲಕ ಐಎಂಎಲ್ ಹಾಗೂ ಬಿಯರ್ ಸ್ಲಾಬ್ ಗಳ ಪರಿಷ್ಕರಣೆ