Monday, September 16, 2024
Google search engine
Homeಮುಖಪುಟಜನವರಿ 18ರಂದು ರೈತರ ಸಮಾವೇಶ ನಡೆಸಲು ನಿರ್ಧಾರ

ಜನವರಿ 18ರಂದು ರೈತರ ಸಮಾವೇಶ ನಡೆಸಲು ನಿರ್ಧಾರ

ಕಳೆದ 9 ದಿನಗಳಿಂದ ಕೊಬ್ಬರಿ ಖರೀದಿಗೆ ನ್ಯೇಪೇಡ್ ಕೇಂದ್ರ ತೆರೆಯಬೇಕು, 15 ಸಾವಿರ ಕ್ವಿಂಟಾಲ್ ದರದಲ್ಲಿ ಕೊಬ್ಬರಿ ಖರೀದಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಹಮ್ಮಿಕೊಂಡಿರುವ ಆಹೋರಾತ್ರಿ ಧರಣಿಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ದೊರೆಯ ಹಿನ್ನೆಲೆಯಲ್ಲಿ ಜನವರಿ 18ರಂದು ಬೃಹತ್ ರೈತರ ಸಮಾವೇಶ ಹಮ್ಮಿಕೊಂಡಿರುವುದಾಗಿ ರೈತ ಸಂಘದ ಜಿಲ್ಲಾಧ್ಯಕ್ಷ ಧನಂಜಯ್ ಆರಾಧ್ಯ ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ನಡೆಸುತ್ತಿರುವ ಧರಣಿ ಸ್ಥಳದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಈಗಾಗಲೇ ಕ್ವಿಂಟಾಲ್ ಕೊಬ್ಬರಿಯನ್ನು 12 ಸಾವಿರ ರೂಗಳಿಗೆ ಖರೀದಿಸಲು ಆದೇಶ ಮಾಡಿದೆ. ಆದರೆ ರಾಜ್ಯ ಸರ್ಕಾರ ಒಂದು ಕ್ವಿಂಟಾಲ್ ಕೊಬ್ಬರಿಗೆ ಮೂರು ಸಾವಿರ ರೂ ಪ್ರೋತ್ಸಾಹ ಧನ ನೀಡಬೇಕೆಂಬ ವಿಚಾರದಲ್ಲಿ ಇದುವರೆಗೂ ಯಾವುದೇ ನಿರ್ಣಯಕ್ಕೆ ಬಂದಿಲ್ಲ. ಹಾಗಾಗಿ ಜನವರಿ 18 ರಂದು ಕೊಬ್ಬರಿ ಬೆಳೆಯುವ ಎಲ್ಲಾ ಪ್ರದೇಶಗಳ ರೈತರೊಂದಿಗೆ ಸೇರಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಬೃಹತ್ ಸಮಾವೇಶ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಕಳೆದ ದಿನಗಳಿಂದ ರೈತ ಮುಖಂಡರು ಮನೆ, ಮಠ ಬಿಟ್ಟು, ಹಬ್ಬದ ದಿನವೂ ಆಹೋರಾತ್ರಿ ಧರಣಿ ನಡೆಸುತ್ತಿದ್ದೇವೆ. ಮನೆಗಳಲ್ಲಿ ದನ, ಕರುಗಳಿಗೆ ಹುಲ್ಲು, ನೀರು ನೀಡುವವರು ಇಲ್ಲದಂತಾಗಿದೆ. ಸರ್ಕಾರ ಬಹಳ ಹಠಮಾರಿ ಧೋರಣೆ ಅನುಸರಿಸುತ್ತಿದೆ. ಹಾಗಾಗಿ ಅನಿವಾರ್ಯವಾಗಿ ಕೊಬ್ಬರಿ ಬೆಳೆಯುವ ರಾಜ್ಯದ ಸುಮಾರು 20 ಜಿಲ್ಲೆಗಳ ಸಾವಿರಾರು ರೈತರು ಜನವರಿ 18 ರಂದು ತಾವು ಕೃಷಿಗೆ ಬಳಸುವ ಟ್ರಾಕ್ಟರ್, ಟ್ರಿಲ್ಲರ್ ಇನ್ನಿತರ ವಾಹನಗಳ ಮೂಲಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಂದು 10 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಸೇರುವ ರೈತರು ತಮ್ಮ ವಾಹನಗಳೊಂದಿಗೆ ಮಂಡಿಪೇಟೆ ರಸ್ತೆ, ಜೆ.ಸಿ.ರಸ್ತೆ, ಬಿ.ಹೆಚ್.ರಸ್ತೆ ಮೂಲಕ ಬಟವಾಡಿ ತಲುಪಿ, ಅಲ್ಲಿಂದ ಹಳೆಯ ರಾಷ್ಟ್ರೀಯ ಹೆದ್ದಾರಿ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರಗೆ ಮೆರವಣಿಗೆ ನಡೆಸಲಿದ್ದೇವೆ. ಸೂಕ್ತ ಮತ್ತು ವೈಜ್ಞಾನಿಕ ಬೆಂಬಲ ಬೆಲೆ ಪಡೆಯುವುದು ನಮ್ಮ ಹಕ್ಕು ಹಾಗಾಗಿ ಹೋರಾಟವನ್ನು ತೀವ್ರಗೊಳಿಸಲು ಮುಂದಾಗಿರುವುದಾಗಿ ಧನಂಜಯ್ ಆರಾಧ್ಯ ತಿಳಿಸಿದರು.

ಈ ವೇಳೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್, ಲೋಕೇಶ್,ಕೆ.ವಿ, ಸೇರಿ ಹಲವು ಮುಖಂಡರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular