Monday, September 16, 2024
Google search engine
Homeಮುಖಪುಟಲೋಕಸಭೆ ಪ್ರೇಕ್ಷಕರ ಗ್ಯಾಲರಿಯಿಂದ ಸದನಕ್ಕೆ ಧುಮುಕಿದ ದುಷ್ಕರ್ಮಿ - ಬೆಚ್ಚಿಬಿದ್ದ ಲೋಕಸಭಾ ಸದಸ್ಯರು

ಲೋಕಸಭೆ ಪ್ರೇಕ್ಷಕರ ಗ್ಯಾಲರಿಯಿಂದ ಸದನಕ್ಕೆ ಧುಮುಕಿದ ದುಷ್ಕರ್ಮಿ – ಬೆಚ್ಚಿಬಿದ್ದ ಲೋಕಸಭಾ ಸದಸ್ಯರು

ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದ ವೇಳೆ ಪ್ರೇಕ್ಷಕರ ಗ್ಯಾಲರಿಯಿಂದ ದುಷ್ಕರ್ಮಿಯೊಬ್ಬ ಸದನಕ್ಕೆ ಧುಮುಕಿ ಅತ್ತಿತ್ತ ಓಡಾಡಿರುವ ಘಟನೆ ನಡೆದಿದೆ. ದುಷ್ಕರ್ಮಿ ಧುಮುಕುತ್ತಿದ್ದಂತೆ ಸದನದಲ್ಲಿ ಕುಳಿತಿದ್ದ ಲೋಕಸಭಾ ಸದಸ್ಯರು ಭಯಭೀತರಾಗಿ ಹೊರಗೆ ಓಡಿದ್ದಾರೆ. ಕೆಲವು ಸದಸ್ಯರು ದುಷ್ಕರ್ಮಿಗಳನ್ನು ಹಿಡಿದು ಥಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಈ ಪ್ರಕರಣದ ಸಂಬಂಧ ದೆಹಲಿ ಪೊಲೀಸರು ಸಂಸತ್ ನ ಒಳಗೆ ಇಬ್ಬರು ಮತ್ತು ಸಂಸತ್ ಹೊರಗೆ ಇಬ್ಬರು ಹೀಗೆ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಸಂಸತ್ತಿನ ಹೊರಗಿನಿಂದ ಬಂಧಿಸಿ ಸಂಸತ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಕರೆದೊಯ್ದ ಪ್ರತಿಭಟನಾಕಾರರನ್ನು ಹರಿಯಾಣದ ಹಿಸಾರ್ ನಿವಾಸಿ ನೀಲಂ (42) ಮತ್ತು ಮಹಾರಾಷ್ಟ್ರದ ಲಾತೂರ್ ನಿವಾಸಿ ಅಮೋಲ್ ಶಿಂಧೆ (25) ಎಂದು ಗುರುತಿಸಲಾಗಿದೆ.

ಬಂಧಿತ ಇತರ ಇಬ್ಬರನ್ನು ಸಾಗರ್ ಶರ್ಮಾ ಮತ್ತು ಮನೋರಂಜನ್ ಎಂದು ಗುರುತಿಸಲಾಗಿದೆ. ಒಳನುಗ್ಗಿದವರಲ್ಲಿ ಒಬ್ಬರು ತಮ್ಮ ಶೂಗಳೊಳಗೆ ಡಬ್ಬಿಗಳನ್ನು ಬಚ್ಚಿಟ್ಟುಕೊಂಡು ಗ್ಯಾಲರಿಯಿಂದ ಜಿಗಿದು ಅದನ್ನು ಸಿಂಪಡಿಸುವ ಮೊದಲು ಸಂಸತ್ತಿನ ಒಳಗೆ ತೆಗೆದುಕೊಂಡು ಹೋದರು ಎಂದು ವರದಿಯಾಗಿದೆ.

ಲೋಕಸಭೆಯ ಗ್ಯಾಲರಿಯಲ್ಲಿ ಕುಳಿತುಕೊಂಡು ಕಲಾಪ ವೀಕ್ಷಿಸಲು ಮೈಸೂರಿನ ಇಬ್ಬರಿಗೆ ಸಂಸದ ಪ್ರತಾಪ್ ಸಿಂಹ ಕಚೇರಿಯಿಂದ ಪಾಸ್ ಗಳನ್ನು ವಿತರಣೆ ಮಾಡಿದ್ದರು ಎಂದು ಹೇಳಲಾಗಿದೆ.

ಹಳೆಯ ಸಂಸತ್ ಕಟ್ಟಡದ ಮೇಲಿನ ಭಯೋತ್ಪಾದಕ ದಾಳಿಯ 22ನೇ ವಾರ್ಷಿಕೋತ್ಸವದ ದಿನದಂದೇ ದುಷ್ಕರ್ಮಿಗಳು ಸಂಸತ್ ಒಳಗೆ ನುಗ್ಗಿ ಭೀತಿ ಉಂಟು ಮಾಡಿದ್ದಾರೆ ಎಂದು ಹೇಳಲಾಗಿದೆ.

ಈ ಹಿನ್ನೆಲೆಯಲ್ಲಿ ಕಲಾಪವನ್ನು ನಾಳೆ ಮುಂದೂಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular