Sunday, September 8, 2024
Google search engine
Homeಮುಖಪುಟಕಾಡುಗೊಲ್ಲರನ್ನು ದಿಕ್ಕು ತಪ್ಪಿಸುತ್ತಿರುವ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ದಂಪತಿ

ಕಾಡುಗೊಲ್ಲರನ್ನು ದಿಕ್ಕು ತಪ್ಪಿಸುತ್ತಿರುವ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ದಂಪತಿ

ಮಾಜಿ ಶಾಸಕರಾದ ಪೂರ್ಣಿಮಾ ಅವರು ಈಗ ಕರ್ನಾಟಕ ಕಾಡುಗೊಲ್ಲರಿಗಾದ ಅನ್ಯಾಯವನ್ನು ಬಹಳ ಮುಗ್ದವಾಗಿ ಮಾತನಾಡಲಾರಂಭಿಸಿದ್ದಾರೆ. ಅವರು ಬಿಜೆಪಿ ಪಕ್ಷ ತೊರೆಯುವ ಸಲುವಾಗಿ ಆಡುತ್ತಿರುವ ಮಾತುಗಳಿವು. ಅವರು ಪಕ್ಷ ಬದಲಾವಣೆ ಮಾಡಿಕೊಳ್ಳುತ್ತಿರುವ ಪ್ರಜಾಪ್ರಭುತ್ವ ಮಾದರಿಯ ನಡೆಯೂ ಸರಿಯಾದುದೇ. ಸಮಾಜದ ಬಗ್ಗೆ ಮಮಕಾರವುಳ್ಳವರಾಗಿ ಮಮತೆಯಿಂದ ಅವರಾಡುವ ಮಾತುಗಳಿಗೆ ಈಗ ಕಾಡುಗೊಲ್ಲ ಬಡಕಟ್ಟು ಸಮಾಜ ಮರುಳಾಗಬಹುದೇ?

ಕಾಡುಗೊಲ್ಲ ಬುಡಕಟ್ಟು ಸಮುದಾಯದ ನೆರವಿಗೆ ಸಿದ್ದರಾಮಯ್ಯನವರು ಮತ್ತು ಯಡ್ಯೂರಪ್ಪನವರ ನೇತೃತ್ವದ ಸರ್ಕರಗಳು ಪ್ರಯತ್ನಪಟ್ಟಾಗಲೆಲ್ಲಾ ಈ ರಾಜದಂಪತಿಗಳು ಯಡವಟ್ಟಾದ ಮಾಹಿತಿಗಳ ಮೂಲಕ ಸರ್ಕಾರಗಳ ಹಾದಿತಪ್ಪಿಸಿದ ಸಂಗತಿಗಳೇನೂ ಅವರಿಗೆ ಮರೆತು ಹೋಗಿರಲಾರವು. ಬಜೆಪಿ ಪಕ್ಷದ ನೇತೃತ್ವದ ಸರ್ಕಾರದಲ್ಲಿ  ಅಸಂಬ್ಲಿ ಒಳಗೆ ಹೊರಗೆ ಇವರು ಆಡಿದ ಮಾತುಗಳು ಕಾಡುಗೊಲ್ಲರ ಎಸ್ ಟಿ. ಮೀಸಲಾತಿಗೆ ಗೊಂದಲವುಟುಮಾಡುವಂತಹುಗಳಾಗಿದ್ದವು. ಇತ್ತೀಚೆಗೆ ಆದಿವಾಸಿಗಳು ಮತ್ತು ಬಡಕಟ್ಟು ಸಮಾಜಗಳ ಸಮಾಲೋಚನಾ ಮಾತು ಕತೆಯ ಸಂದರ್ಬದಲ್ಲಿ ವಿಷಯ ಪ್ರಸ್ತಾಪವಾದಾಗಲೂ ಸಚಿವ ಶಿವರಾಜ ತಂಗಡಗಿಯವರು ಬಹಳ ಮುಜುಗರದಿಂದಲೇ ಉತ್ತರಿಸಿದರು. ಆ ವಿಷಯವನ್ನೇ ಮಾತನಾಡಬೇಡಿ, ಮಾನ್ಯ ಗೌರವಾನ್ವಿತ ಮುಖ್ಯಮಂತ್ರಿಯವರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ದಾರಕ್ಕೆ ಬರುತ್ತಾರೆಂದು ಸಚಿವರು ಮೌನವಾದರು.

ಕಾಡುಗೊಲ್ಲರ ಎಸ್. ಟಿ. ಮೀಸಲಾತಿ ಚರ್ಚೆಗಳು ಮಾನ್ಯ ಮುಖ್ಯಮಂತ್ರಿಗಳು ಸಚಿವರು ಮತ್ತು ಸರ್ಕಾರಗಳು ಸೂಕ್ತ ನಿರ್ದಾರಕ್ಕೆ ಬರುವಾಗ ಸಂಬಂದಪಟ್ಟವರು ಮುಜುಗರಕ್ಕೆ ಒಳಗಾಗುವಂತಹ ಅನಿರ್ಧಿಷ್ಟಾವದಿಯ ಸನ್ನಿವೇಶ ನಿರ್ಮಾಣವಾಗಲು ಕಾರಣ ಮಾಜಿ ಶಾಸಕರು ಕಾಲಕಾಲಕ್ಕೆ ಸರ್ಕಾರದ ಮುಂದೆ ಸೂಕ್ತ ಕಾಲದಲ್ಲಿ ತಂದಿಟ್ಟ ಅಸೂಕ್ತವಾದ ಕಾಗದಪತ್ರಗಳು ಮತ್ತು ಚರ್ಚೆಗಳು.

ಸರ್ಕಾರಗಳೇ ಗೊಂದಲಕ್ಕೊಳಗಾಗುವಂತಹ ಪರಿಸ್ಥತಿ ನಿರ್ಮಾಣಗೊಂಡಿತು ಇವರ ನಡೆಗಳು ಮತ್ತು ಪ್ರಯತ್ನಗಳಿಂದಾಗಿ. ಊರುಗೊಲ್ಲರು ಮತ್ತು ಕಾಡುಗೊಲ್ಲರು ಎಂತಹ ವೆತ್ಯಾಸಗಳು ಗೊಲ್ಲರು ಮತ್ತು ಕಾಡುಗೊಲ್ಲರ ಮಧ್ಯೆ ಮನ್ನಲೆಯ ಚರ್ಚೆಗಳಾಗಿ, ಸರ್ಕಾರದ ಪ್ರಯತ್ನಗಳೂ ಮೂಲೆಗುಂಪಾಗುವಂತಹ ಪರಿಸ್ಥತಿ ನಿರ್ಮಾಣವಾತು ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿಯದಿರುವ ಸಂಗತಿಯೇನಲ್ಲ. ಯಡ್ಯೂರಪ್ಪ ನವರ ನೇತೃತ್ವದ ಸರ್ಕಾರಕ್ಕೆ ಕಾಡುಗೊಲ್ಲರನ್ನು ಎಸ್. ಟಿ. ಗೆ ಸೇರಿಸಬಾರದು ಎನ್ನುವಂತಹ ಉದ್ದೇಶವೇನಿರಲಿಲ್ಲ. ಸಿದ್ದರಾಮಯ್ಯನವರು ಕೇಂದ್ರ ಸರ್ಕಾರಕ್ಕೆ ಕಾಡುಗೊಲ್ಲ ಬುಡಕಟ್ಟು ಜನಾಂಗವನ್ನು ಎಸ್. ಟಿ. ಪಟ್ಟಿಗೆ ಸೇರಿಸುವಂತೆ ಮೊದಲೇ ಶಿಪಾರಸ್ಸು ಮಾಡಿದ್ದರು. ಕುಮಾರಸ್ವಾಮಿಯವರು ಮುಖ್ಯಮಂತ್ರಿಗಳಾಗಿದ್ದಾಗ, ಆಗಿನ ಹಿಂದುಳಿದ ವರ್ಗಗಳ ಆಯೋಗದ ಅಧ್ಯೆಕ್ಷರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದವತಿಯಿಂದ, ಕಾಡುಗೊಲ್ಲರ ಬಗ್ಗೆ ಸರಿಯಾದ ಶಿಪಾರಸ್ಸುಗಳನ್ನೇ ಮಾಡಿದರು.

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯೆಕ್ಷರು ಹಾಗು ಸಂವಿಧಾನ ತಜ್ಞರು ಮತ್ತು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾ ಸಭಾ ಗೌರವಾಧ್ಯೆಕ್ಷರು ಡಾ. ಸಿ. ಎಸ್. ದ್ವಾರಕಾನಾಥ್ ಅವರು ಕಾಡುಗೊಲ್ಲರನ್ನು ಎಸ್. ಟಿ. ಪಟ್ಟಿಗೆ ಸೇರಿಸಬೇಕಾದ ಔಚಿತ್ಯವನ್ನು ಅವರ ವರದಿಗಳು ಮತ್ತು ಬರೆಹಗಳಲ್ಲಿ ದಾಖಲು ಮಾಡಿದರು. ಮತ್ತು ಮಾದ್ಯಮಗಳ ಮುಂದೆ ವಿಶ್ಲೇಷಿಸುತ್ತಲೇ ಬಂದಿದ್ದಾರೆ. ಅವರು ಇಂದಿಗೂ ಮಾದ್ಯಮಗಳ ಮೂಲಕ ಕಾಡುಗೊಲ್ಲರನ್ನು ಎಸ್.ಟಿ. ಗೆ ಸೇರಿಸಲು ಸರ್ಕಾರಗಳನ್ನು ಒತ್ತಾಯಿಸುವುದನ್ನು ಮುಂದುವರಿಸಿದ್ದಾರೆ.

ಸದರಿ ವಿಷಯದಲ್ಲಿ ನಟರು ಮತ್ತು ಚಿಂತಕರು ಹಾಗು ಹೋರಾಟಗಾರರು ಚೇತನ್ ಅಹಿಂಸಾ, ಅವರೂ ಕೂಡ ನಿನ್ನೆ ಮೊನ್ನೆಯವರೆವಿಗೂ ಮುಂದೆಯೂ ಕಾಡುಗೊಲ್ಲರನ್ನು ಎಸ್.ಟಿ. ಗೆ ಸೇರಿಸಬೇಕಾದ ಸರ್ಕಾರದ ಹೊಣೆಗಾರಿಕೆಯ ಕುರಿತು ಮಾದ್ಯಮಗಳ ಜೊತೆಯಲ್ಲಿ ಮಾತುಕತೆ ಮುಂದುವರಿಸಿದ್ದಾರೆ‌ ಹಾಗು ಸರ್ಕಾರದ ಗಮನ ಸೆಳೆಯುತಿದ್ದಾರೆ. ಆದರೆ ಗೊಲ್ಲ ಸಮುದಾಯ ಈ ಕುರಿತು ಮಾತನಾಡಲು ಹಿಂದು ಮುಂದು ನೋಡುವುದಾದರೂ ಏಕೆ?. ಗೊಲ್ಲ ಸಮುದಾಯದ ಈ ರಾಜದಂಪತಿಗಳೂ ಸುಮ್ಮನಾಗಲಿಲ್ಲ. ಅವರು ಪದೇಪದೇ ಕಾಡುಗೊಲ್ಲರಿಗೆ ಎಸ್.ಟಿ. ಮೀಸಲಾತಿ ವಿಚಾರ ಬಂದಾಗಲೆಲ್ಲಾ ವಿರುದ್ದವಾಗಿಯೇ ನಡೆದುಕೊಂಡಿರುವುದೂ ಜನಜನಿತವಾದ ವಿಚಾರ.

ಅಲೆಮಾರಿ/ ಅರೆ ಅಲೆಮಾರಿ ಬುಡಕಟ್ಟು ಸಮಾಜಕ್ಕೆ ಉಂಟಾದ ಮೀಸಲಾತಿಯ ಹಾನಿಯ ಕುರಿತು ಕಾಡುಗೊಲ್ಲ ಬುಡಕಟ್ಟು ಜನಾಂಗವನ್ನೇ ವಿಶ್ವಾಸಕ್ಕೆ ತೆಗೆದುಕೊಳ್ಳದ ಶ್ರೀಮತಿ ಪೂರ್ಣಿಮಾ ಶ್ರೀನಿವಾಸ್ ಅವರು ಬಿಜೆಪಿ ಪಕ್ಷ ತೊರೆಯುವ ಸಂದರ್ಬದಲ್ಲಿ ನಿರ್ಧಿಷ್ಟ ಆರೋಪ ಮಾಡುವುದರ ಬದಲಾಗಿ ಕಾಡುಗೊಲ್ಲರಿಗಾದ ಅನ್ಯಾಯದ ಅನುಭವಗಳನ್ನು ಮುನ್ನಲೆಗೆ ತರುವುದು ಎಷ್ಟರಮಟ್ಟಿಗೆ ಸಮಂಜಸ?

ಉಜ್ಜಜ್ಜಿ ರಾಜಣ್ಣ
ತುಮಕೂರು ಜಿಲ್ಲಾ ಅಧ್ಯೆಕ್ಷರು
ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾ ಸಭಾ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular