Friday, October 18, 2024
Google search engine
Homeಮುಖಪುಟಪರ್ಯಾಯ ಮತ್ತು ಪರಿಹಾರ ಹುಡುಕಾಟಗಳಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾ

ಪರ್ಯಾಯ ಮತ್ತು ಪರಿಹಾರ ಹುಡುಕಾಟಗಳಲ್ಲಿ ಅಲೆಮಾರಿ ಬುಡಕಟ್ಟು ಮಹಾಸಭಾ

ಅಲೆಮಾರಿಗಳಿಗೆ ಸರ್ಕಾರಿ ಸೌಲಭ್ಯಗಳು ದೊರೆಯುವ ಅವಕಾಶಗಳು ಇರುವುದು ಹತ್ತಿರದ ಸರ್ಕಾರಿ ಕಛೇರಿಗಳಲ್ಲಿ ಎಂಬುದನ್ನು ಮರೆಯಬಾದು. ಮರೆತೆಯಾದರೆ ಬದುಕನ್ನೇ ಮರೆತು ಮರದಡಿಯ ಮನುಷ್ಯರಾಗಿ ಖಾಯಂ ಜೋಪಡಿ, ಚಾವಡಿಗಳ ಸನಿವಾಸವೇ ಗತಿ ಎಂದು ಯಾಮಾರಿ ಜೀವನದೂಡುವಂತಾಗುವುದು. ಬದುಕನ್ನು ಹುಡುಕುವ ಹಾದಿಯಲ್ಲಿ ಅಲೆಮಾರಿಗಳ ಅನುಕೂಲಗಳನ್ನು ಬಚ್ಚಿಟ್ಟುಕೊಂಡಿರುವ ಸರ್ಕಾರಿ ಕಛೇರಿಗಳನ್ನೂ ಪದೇಪದೇ ಯಡತಾಕುವುದು ಬಹಳ ಮುಖ್ಯ. ಕಛೇರಿಗಳ ಮುಖ ಹೇಡಿತನಕ್ಕೆ ಅಲೆಮಾರಿ ಬುಡಕಟ್ಟು ಸಮುದಾಯಗಳ ಕಷ್ಟಗಳ ಕನ್ನಡಿಯನ್ನು ಆಗಾಗ ಇಡಿಯಬೇಕಾಗುವುದು.

ಕಳೆದ ತಿಂಗಳು ಕರ್ನಾಟಕ ರಾಜ್ಯ ಅಲೆಮಾರಿ ಬುಡಕಟ್ಟು ಮಹಾ ಸಭಾ ಅಧ್ಯಕ್ಷ ಹನುಮಂತಪ್ಪ ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ ಚಿಕ್ಕೇನಹಳ್ಳಿ ಮಠದ ಮಾರ್ಗ, ಮಾರುತಿ ನಗರದ ಸಮೀಪ ದಕ್ಕಲಿಗರ ಗ್ರಾಮಕ್ಕೆ ಬೇಟಿ ನೀಡಿದ್ದರು. ಕುಷಿಯ ಸಂಗತಿಯೆಂದರೆ ದಕ್ಕಲಿಗ ಸಭಾಸದರ ಸಭೆಯಲ್ಲಿ ನನ್ನನ್ನು ಕರ್ನಾಟಕ ರಾಜ್ಯ ಬುಡಕಟ್ಟು ಮಹಾಸಭಾ ತುಮಕೂರು ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದರು. ಅವರು, ಹನುಮಂತಪ್ಪ ಬೆಂಗಳೂರಿಗೆ ತೆರಳುವಾಗ ಮಾರ್ಗ ಮಧ್ಯೆ ಕಿಬ್ಬನಹಳ್ಳಿ ಕ್ರಾಸ್ ಬಳಿಯ ಅಲೆಮಾರಿಗಳ ಕೇರಿಗೆ ಬೇಟಿ ನೀಡಿದ್ದರು. ಜೊತೆಯಲ್ಲಿ, ಕರ್ನಾಟಕ ರಾಜ್ಯ ಅಲೆಮಾರಿ ಬಡಕಟ್ಟು ಮಹಾ ಸಭಾ ರಾಜ್ಯ ಉಪಾದ್ಯೆಕ್ಷ ಶಾಂತಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹೈಕೋರ್ಟ ಯುವ ವಕೀಲ ಕಡೂರು ನಾಗರಾಜ್, ಚಿಕ್ಕನಾಯ್ಕನಹಳ್ಳಿ ತಾಲ್ಲೂಕು ಅಧ್ಯೆಕ್ಷ ರಂಗನಾಥ್ ಸಹ ಬೇಟಿ ನೀಡಿದ್ದರು.

ಅಲ್ಲಿಯ ಪರಿಸ್ಥಿತಿಯನ್ನು ಅಕ್ಷರಗಳಲ್ಲಿ ಬರೆದರೆ ಅವರಿಗೆ ಮೋಸಾ ಮಾಡಿದಂತಾಗುವುದೇನೋ? ಆಡಳಿತದ ವಂಚನೆಗೆ ದೀರ್ಘಕಾಲದಿಂದಲೂ ಅಲ್ಲಿಯ ಅಲೆಮಾರಿಗಳು ಒಳಗಾಗಿದ್ದಾರೆ. ಓಟು ಗೆಬರಿಕೊಳ್ಳಲು ಮಾತ್ರ ಅವರಿಗೆ ಓಟರ್ ಐಡಿ ಕಾರ್ಡ ನೀಡಲಾಗಿದೆ.

ಕಮಾನುಗಳನ್ನು ಬಗ್ಗಿಸಿದ ತಾತ್ಕಾಲಿಕ ಟೆಂಟ್ ಗಳಲ್ಲಿಯೇ ಅವರ ಎರಡು ತಲೆಮಾರುಗಳ ಬದುಕು ಮುಕ್ತಾಯಗೊಂಡಿದೆ. ಬೆನ್ನುರಿ ನಡವನ್ನು ನೆಲದತ್ತ ಬಗ್ಗಿಸಿದರೆ ಮಾತ್ರ ಅವರ ಜೋಪಡಿ ಒಳಗೆ ಹೋಗಬಹುದು. ಜೀವ ಮಾನವಿಡೀ ನಡಬಗ್ಗಿಯೇ ಅವರು ಅವುಗಳಲ್ಲಿ ವಾಸಿಸ ಬೇಕಾದ ದುರ್ಗತಿಯನ್ನು ತಿಪಟೂರು ತಾಲ್ಲೂಕು ಸಾರ್ವಜನಿಕ ಆಡಳಿತ ನಿಗದಿ ಮಾಡಿದಂತಿದೆ. ಮೂರನೇ ತಲೆಮಾರಿನವರ ಶೈಕ್ಷಣಿಕ ಬದುಕು ಮುಂದುವರಿಯಲು ಅವರ ಗುಡಿಸಲುಗಳಲ್ಲಿ ಕಲಿಯುವ ಮಕ್ಕಳು ಓದಲು ಬೆಳಕಿನ ಆಸರೆ ಇಲ್ಲ. ನಾವು “ಸ್ವಾತಂತ್ರ್ಯದ ಅಮೃತ ಮಹೋತ್ಸ”ವದ ಸಡಗರದಲ್ಲಿದ್ದೇವೆ. ತಿಪಟೂರು ತಾಲ್ಲೂಕು ಆಡಳಿತದ ಹೊಣಗೇಡಿತನಕ್ಕೆ ಯಾವ ಪ್ರಶಸ್ತಿ ಕೊಡ ಮಾಡುವುದೋ ತಿಳಿಯದು. ಮೇಣದ ಬತ್ತಿ ಉರಿಯ ಮಬ್ಬಾದ ಬೆಳಕಿನ ಆಸರೆ ಅಷ್ಟೇ ಆ ಮಕ್ಕಳ ರಾತ್ರಿ ಪಾಳಯದ ಓದಿಗೆ. ಅದರೂ ಕೆಲವು ಮಕ್ಕಳು ಓದು ಮುಂದುವರಿಸಿವೆ. ಪದವಿ ಪೂರ್ವ ಶಿಕ್ಷಣದತ್ತ ಧಾವಿಸಿವೆಯಾದರೂ ಅವರಿಗೆ ದೊರೆಯಬೇಕಾದ ಶೈಕ್ಷಣಿಕ ಅನುಕೂಲಗಳ ಕೊರತೆಯಿದೆ.

ಬಹುತೇಕ ಮಕ್ಕಳು ಶಾಲೆ ಬಿಟ್ಟಿವೆ. ಅವರ ಗೈರು ಹಾಜರಾತಿಯನ್ನೂ ತಿಪಟೂರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮತ್ತು ತಿಪಟೂರು ತಾಲ್ಲೂಕು ಕ್ಷೇತ್ರ ಸಂಪನ್ಮೂಲ ಕಛೇರಿ ಪರಿಗಣಿಸಿರುವಂತಿಲ್ಲ. ಅಲ್ಲಿ ಕಡ್ಡಾಯ ಶಿಕ್ಷಣದ ಕಾನ್ಸೆಪ್ಟ್ ಗಳು, ಬೆಂಗಳೂರು- ಶಿವಮೊಗ್ಗ ಹೆದ್ದಾರಿಯಲ್ಲಿ ಕಿಬ್ಬನಹಳ್ಳಿ ಕ್ರಾಸ್ ಬಳಿ ಅಪಘಾತಕ್ಕೀಡಾಗಿವೆ. ಅಪಘಾತಕ್ಕೀಡಾಗಿ ಸಾವನ್ನಪ್ಪಿದ, ಉದ್ದೇಶಿತ ಶೈಕ್ಷಣಿಕ ವಾರ್ಷಿಕ ಕಾರ್ಯಕ್ರಮಗಳ ಕಳೇಬರಗಳು ತಿಪಟೂರು ಸಾರ್ವಜನಿಕ ಆಸ್ಪತ್ರೆಯ ಶವಾಗಾರ ಅಥವಾ ಹತ್ತಿರದ ಬಿಳಿಗೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಶವಾಗಾರ ತಲುಪಿವೆ ಎಂದರ್ಥ ತಾನೆ? ಬಿ.ಇ.ಒ ಮತ್ತು ಬಿ.ಆರ್.ಸಿ., ಬಿ. ಆರ್.ಪಿ., ಸಿ.ಆರ್. ಪಿ ಗಳು ಉತ್ತರಿಸಬೇಕು.

ರಾಜ್ಯಾಧ್ಯೆಕ್ಷ ಹನಮಂತಪ್ಪ ಅವರ ಜೊತೆಯಲ್ಲಿ ನಾವು ಅಲ್ಲಿಗೆ ಬೇಟಿ ನೀಡಿದಾಗ, ತಿಪಟೂರು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಮತ್ತು ಬಿಳಿಗೆರೆ ಗ್ರಾಮಪಂಚಾಯ್ತಿ ಪಿಡಿಒ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದೆವು. ತಡವಾಗಿ ಗಮನ ಹರಿಸಿರುವ ಗ್ರಾಮ ಪಂಚಾಯಿತಿ ಆಡಳಿತ ಓದುವ ಮಕ್ಕಳ ಕೆಲವು ಕುಟುಂಬಗಳಿಗೆ ಸಾವಿರಗಳ ಬೆಲೆ ಬಾಳುವ ಸೌರ ವಿಧ್ಯುತ್ ದೀಪಗಳನ್ನು ವಿತರಿಸಿದೆ. ಆಗಬೇಕಾಗಿರುವ ಅಗತ್ಯ ತಾತ್ಕಾಲಿಕ ಮೂಲಭೂತ ಸೌಕರ್ಯಗಳನ್ನು ಇ. ಒ. ಸುದರ್ಶನ್ ಮತ್ತು ಪಿಡಿಒ ದಶರಥ ಕುಮಾರ್ ಗಮನಕ್ಕೆ ತರಲಾಗಿದೆ.

ಉಜ್ಜಜ್ಜಿ ರಾಜಣ್ಣ, ಲೇಖಕರು. 9448747360

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular