Thursday, January 29, 2026
Google search engine
Homeಜಿಲ್ಲೆತುಮಕೂರಿನಲ್ಲಿ ಸೆ.28ರಂದು ಕುಂದೂರು ತಿಮ್ಮಯ್ಯ ಆತ್ಮಕಥನ ಅಂಗುಲಿಮಾಲ ಕೃತಿ ಬಿಡುಗಡೆ

ತುಮಕೂರಿನಲ್ಲಿ ಸೆ.28ರಂದು ಕುಂದೂರು ತಿಮ್ಮಯ್ಯ ಆತ್ಮಕಥನ ಅಂಗುಲಿಮಾಲ ಕೃತಿ ಬಿಡುಗಡೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ, ಜೀವಕಾರುಣ್ಯ ಪ್ರಕಾಶನ ಮತ್ತು ಜಾತ್ಯತೀತ ಯುವ ವೇದಿಕೆಯಿಂದ ತುಮಕೂರಿನ ಕನ್ನಡ ಭವನದಲ್ಲಿ ಸೆಪ್ಟೆಂಬರ್ 28ರಂದು ಬೆಳಗ್ಗೆ 10.30 ಗಂಟೆಗೆ ಕುಂದೂರು ತಿಮ್ಮಯ್ಯನವರ ಆತ್ಮಕಥನ ಅಂಗುಲಿಮಾಲ ಜನಾರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಸಭೆಯ ಅಧ್ಯಕ್ಷತೆಯನ್ನು ಜನಪರ ಚಿಂತಕ ಕೆ.ದೊರೈರಾಜ್ ವಹಿಸಲಿದ್ದು, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಚರಕ ಆಸ್ಪತ್ರೆಯ ಡಾ.ಬಸವರಾಜು ಪ್ರಾಸ್ತಾವಿಕ ಮಾತುಗಳನ್ನು ಆಡಲಿದ್ದಾರೆ.

ಅಂಗುಲಿಮಾಲ ಕೃತಿಯನ್ನು ಲೇಖಕ ಡಾ.ನಟರಾಜ್ ಹುಳಿಯಾರು ಅವರು ಜನಾರ್ಪಣೆಗೊಳಿಸಲಿದ್ದಾರೆ. ಕೃತಿಯನ್ನು ಕುರಿತು ಕುವೆಂಪು ವಿಶ್ವವಿದ್ಯಾಲಯದ ಪ್ರೊ. ಬಿ.ಎಲ್.ರಾಜು ಮಾತನಾಡಲಿದ್ದಾರೆ.

ಕಾರ್ಯಕ್ರಮಕ್ಕೆ ಕವಿ ಹೋರಾಟಗಾರ ಕೋಟಿಗಾನಹಳ್ಳಿ ರಾಮಯ್ಯ, ಕವಿ ಎಚ್.ಗೋವಿಂದಯ್ಯ, ಹೋರಾಟಗಾರ ಎನ್.ವೆಂಕಟೇಶ್, ಪ್ರಗತಿಪರ ಚಿಂತಕ ರುದ್ರಸ್ವಾಮಿ, ಕೃಷ್ಣಪ್ಪ ಬೆಲ್ಲದಮಡುಗು, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜ್, ಕಥೆಗಾರ ಟಿ.ಕೆ.ದಯಾನಂದ್, ರಂಗ ನಿರ್ದೇಶಕ ಕೆ.ಪಿ.ಲಕ್ಷ್ಮಣ್, ಹೋರಾಟಗಾರ ಕುಂದೂರು ತಿಮ್ಮಯ್ಯ, ಕವಿ ಗುರುಪ್ರಸಾದ್ ಕಂಟಲಗೆರೆ ಮೊದಲಾದವರು ಆಗಮಿಸಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular