Sunday, September 8, 2024
Google search engine
Homeಮುಖಪುಟಚಿತ್ರದುರ್ಗದ ಕಾವಡಿಗರಹಟ್ಟಿಗೆ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ನಿಯೋಗ ಭೇಟಿ

ಚಿತ್ರದುರ್ಗದ ಕಾವಡಿಗರಹಟ್ಟಿಗೆ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ನಿಯೋಗ ಭೇಟಿ

ಚಿತ್ರದುರ್ಗ ನಗರದ ಕಾವಡಿಗರಹಟ್ಟಿಯಲ್ಲಿ ಕಲುಷಿತ ನೀರು ಕುಡಿದು ಸತ್ತವರ ಸಂಖ್ಯೆ 5ಕ್ಕೆ ಏರಿದೆ. ನೂರಕ್ಕೂ ಹೆಚ್ಚು ಮಂದಿ ಅಸ್ವಸ್ತರಾಗಿದ್ದು ನಗರದ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಲುಷಿತ ನೀರು ಕುಡಿದು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಎಚ್.ಆಂಜನೇಯ, ದಲಿತ ಮುಖಂಡ ಕೊಟ್ಟ ಶಂಕರ್ ಅವರು ಕಾವಾಡಿಗರಹಟ್ಟಿಗೆ ಭೇಟಿ ನೀಡಿ ಮೃತ ಕುಟುಂಬದ ಸದಸ್ಯರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ, ದಲಿತ ಮುಖಂಡ ಕೊಟ್ಟಶಂಕರ್, ತಮ್ಮದಲ್ಲದ ತಪ್ಪಿಗೆ ಪ್ರಾಣ ತೆತ್ತಿರುವ ಮಂಜುಳ, ರಘು, ತಿಪ್ದೇರುದ್ರ, ಪಾರ್ವತಮ್ಮ ಮತ್ತು ಪ್ರವೀಣ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಾಯ್ಯಾಧ್ಯಕ್ಷ ಬಿ ಎನ್ ಚಂದ್ರಪ್ಪ ಮತ್ತು ಮಾಜಿ ಸಚಿವ ಹೆಚ್ ಆಂಜನೇಯ ಅವರ ಜೊತೆಯಲ್ಲಿ ನಾನು, ಕವಾಡಿಗರಹಟ್ಟಿ, ಬಸವೇಶ್ವರ ಆಸ್ಪತ್ರೆ ಸರ್ಕಾರಿ ಆಸ್ಪತ್ರೆ ಗೆ ಭೇಟಿ ನೀಡಿ ಸಾಂತ್ವನ ಹೇಳಿದೆವು ಎಂದು ತಿಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಕರುಳು ಹಿಂಡುವ ದೃಶ್ಯ ಕಂಡು ನಿಜಕ್ಕೂ ಗಾಬರಿ ಆಯ್ತು. ಹಟ್ಟಿಯಿಂದ ಸುಮಾರು 150 ಜನ ಆಸ್ಪತ್ರೆ ಸೇರಿದ್ದಾರೆ. ಅದರಲ್ಲಿ 110 ಬಸವೇಶ್ವರ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಉಳಿದವರು ಸರ್ಕಾರಿ ಆಸ್ಪತ್ರೆಯಲ್ಲಿದ್ದಾರೆ. ಐಸಿಯುನಲ್ಲಿ 25 ಜನರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಉಳಿದವರು ಚೇತರಿಸಿಕೊಳ್ಳತ್ತಿದ್ದಾರೆ ಎಂದು ಹೇಳಿದ್ದಾರೆ.

ವೈದ್ಯಕೀಯ ವರದಿ ಕಲುಷಿತ ನೀರು ಅಂತ ಬಂದಿದೆ. ಹೀಗಾಗಿ ಹಟ್ಟಿಯ ಜನ ವರದಿ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಹಿಂದೆ ನಡೆದ ಘಟನೆಯೊಂದರ ಪ್ರತೀಕಾರದ ಬಗ್ಗೆ ಗುಸು ಗುಸು ಇದ್ದು ಪೋಲಿಸ್ ಇಲಾಖೆ ತನಿಖೆಯ ಮೂಲಕ ಸತ್ಯ ಹೊರಬರಬೇಕಿದೆ ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular