Thursday, January 29, 2026
Google search engine
Homeಮುಖಪುಟಸದನದಲ್ಲಿ ಉಪಸಭಾಧ್ಯಕ್ಷರ ಮೇಲೆ ಕಾಗದಪತ್ರ ಎಸೆದು ಅನುಚಿತ ವರ್ತನೆ ತೋರಿದ 10 ಬಿಜೆಪಿ ಸದಸ್ಯರ ಅಮಾನತು

ಸದನದಲ್ಲಿ ಉಪಸಭಾಧ್ಯಕ್ಷರ ಮೇಲೆ ಕಾಗದಪತ್ರ ಎಸೆದು ಅನುಚಿತ ವರ್ತನೆ ತೋರಿದ 10 ಬಿಜೆಪಿ ಸದಸ್ಯರ ಅಮಾನತು

ವಿಧಾನಸಭೆಯಲ್ಲಿ ಅಧಿವೇಶನ ನಡೆಯುತ್ತಿದ್ದ ವೇಳೆ ಉಪಸಭಾಧ್ಯಕ್ಷರ ಮೇಲೆ ಕಾಗದ ಪತ್ರ ಹರಿದು ಸ್ಪೀಕರ್ ಸ್ಥಾನಕ್ಕೆ ಅಗೌರವ ಮತ್ತು ಅಸಭ್ಯ ವರ್ತನೆ ತೋರಿದ ಬಿಜೆಪಿಯ 10 ಮಂದಿ ಸದಸ್ಯರನ್ನು ಸದನದಿಂದ ಅಮಾನತುಗೊಳಿಸಲಾಗಿದೆ.

ಸದನದಲ್ಲಿ ಅಗೌರವ ತೋರಿದ 10 ಬಿಜೆಪಿ ಶಾಸಕರನ್ನು ಅಮಾನತು ಮಾಡಲಾಗಿದೆ. ಬಿಜೆಪಿಯ ಸುನಿಲ್ ಕುಮಾರ್, ಆರ್. ಅಶೋಕ್, ಅರಗಜ್ಞಾನೇಂದ್ರ, ಭರತ್ ಶೆಟ್ಟಿ, ಧೀರಜ್ ಮುನಿರಾಜು, ಯಶಪಾಲ್ ಸುವರ್ಣ, ವೇದವ್ಯಾಸ್ ಕಾಮತ್, ಅರವಿಂದ ಬೆಲ್ಲದ್, ಡಾ.ಅಶ್ವತ್ಥನಾರಾಯಣ, ಉಮಾನಾಥ್ ಕೋಟ್ಯಾನ್ ಅವರನ್ನು ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ.

ಕಲಾಪ ನಡೆಯುತ್ತಿದ್ದ ವೇಳೆ ಬಿಜೆಪಿ ಸದಸ್ಯರು ಬಾವಿಗೆ ಬಂದು ಉಪಸಭಾಧ್ಯಕ್ಷರ ಮೇಲೆ ಕಾಗದ ಪತ್ರಗಳನ್ನು ಎಸೆಯಲಾಗಿದ್ದು, ಈ ವಿಷಯವನ್ನು ಕಾಂಗ್ರೆಸ್ ಸದಸ್ಯರು ಸ್ಪೀಕರ್ ಯು.ಟಿ.ಖಾದರ್ ಅವರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇಲೆ ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿ ಸದನದಲ್ಲಿ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸದಸ್ಯರನ್ನು ಅಮಾನತು ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular