ತಮ್ಮ ತ್ಯಾಗ ಬಲಿದಾನಗಳಿಂದ ಸಂಘಟನೆಗಳನ್ನು ಕಟ್ಟಿ, ಚಳುವಳಿಗಳನ್ನು ಬೆಳೆಸುತ್ತಾ, ಜೀವನಪೂರ್ತಿ ಹೋರಾಟ ನಡೆಸುವವರು ಸಮಾಜದ ಗುರುಗಳು ಎಂದು ಎಲ್.ಐ.ಸಿ.ಅಭಿವೃದ್ಧಿ ಅಧಿಕಾರಿಗಳ ಸಂಘದ ಬೆಂಗಳೂರು ವಿಭಾಗ – 1 ರ ಸಹ ಕಾರ್ಯದರ್ಶಿ ಎಸ್. ಆನಂದಮೂರ್ತಿ ತಿಳಿಸಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ನ ಎಲ್.ಐ.ಸಿ.ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಗುರು ಪೂರ್ಣಿಮಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿ ಐಕ್ಯ ಹೋರಾಟಗಳನ್ನು ಕಟ್ಟಿ, ಸಂಘಟನೆಗಳನ್ನು, ಕಾರ್ಮಿಕರನ್ನು ಸರಿಯಾದ ದಿಕ್ಕಿನೆಡೆಗೆ ನಡೆಸಲು ತಮ್ಮೆಲ್ಲ ಸುಖವನ್ನು ಬದಿಗಿರಿಸಿ, ಸಮುದಾಯದ ಏಳಿಗೆಗೆ ದುಡಿಯುವ ನಾಯಕರನ್ನು ಸ್ಮರಿಸುವುದು ನೈಜ ಅರ್ಥದಲ್ಲಿ ಗುರು ಪೂರ್ಣಿಮ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ಶಾಖೆಯ ಕಾರ್ಯದರ್ಶಿ ಅಜಯ್ ಕುಮಾರ್ ಎಲ್.ಐ.ಸಿ.ಅಭಿವೃದ್ಧಿ ಅಧಿಕಾರಿಗಳ ಸಂಘವು ತಮ್ಮ ಮುಖಂಡರ ದಿನಾಚರಣೆಯ ಮೂಲಕ ಗುರು ಪೂರ್ಣಿಮಾ ಆಚರಿಸುತ್ತಿರುವುದು ಅರ್ಥ ಪೂರ್ಣ ಕಾರ್ಯಕ್ರಮ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಸಂಗಾತಿಗಳಾದ ಎಸ್.ಡಬ್ಲ್ಯು . ಕಲ್ವಿಟ್, ಕೆ.ಬಿ.ಶ್ರೀನಿವಾಸನ್, ಮೊದಲಾದವರನ್ನು ಸ್ಮರಿಸಲಾಯಿತು.
ಸಮಾರಂಭದಲ್ಲಿ ಖಜಾಂಚಿ ರೇವಣ್ಣ, ಸೇಲ್ಸ್ ವಿಭಾಗದ ವೆಂಕಟರೆಡ್ಡಿ, ನಾಗೇಂದ್ರ ಪ್ರಸಾದ್, ಶಾಖಾ ಕಾರ್ಯದರ್ಶಿ ಅಜಯ್ ಕುಮಾರ್, ಖಜಾಂಚಿ ರೇವಣ್ಣ, ವೆಂಕಟ್ ರೆಡ್ಡಿ, ನಾಗೇಂದ್ರ ಪ್ರಸಾದ್, ಸರ್ಜನ್ ಹಾಗೂ ಗಿರೀಶ್ ಇದ್ದರು.