Thursday, November 21, 2024
Google search engine
Homeಮುಖಪುಟಕೊರಟಗೆರೆ ಸಮೀಪ ಸ್ಥಾಪಿಸಿರುವ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಗಳಲ್ಲಿ ಶುಲ್ಕ ವಸೂಲಿ ಬೇಡ - ಸಚಿವ...

ಕೊರಟಗೆರೆ ಸಮೀಪ ಸ್ಥಾಪಿಸಿರುವ ರಾಜ್ಯ ಹೆದ್ದಾರಿಯಲ್ಲಿ ಟೋಲ್ ಗಳಲ್ಲಿ ಶುಲ್ಕ ವಸೂಲಿ ಬೇಡ – ಸಚಿವ ಕೆ.ಎನ್.ರಾಜಣ್ಣ ಆಗ್ರಹ

ಡಾ. ನಂಜುಂಡಪ್ಪ ವರದಿಯ ಪ್ರಕಾರ ತುಮಕೂರು ಜಿಲ್ಲೆಯ ಅತಿಹಿಂದುಳಿದ ತಾಲ್ಲೂಕುಗಳಾಗಿರುವ ಪಾವಗಡ, ಮಧುಗಿರಿ ಮತ್ತು ಕೊರಟಗೆರೆ ತಾಲ್ಲೂಕುಗಳಲ್ಲಿ ಜನರು ಸಂಚರಿಸುವ ರಾಜ್ಯ ಹೆದ್ದಾರಿಯಲ್ಲಿ ಸ್ಥಾಪಿಸಿರುವ ಟೋಲ್ ಗಳಲ್ಲಿ ಸರ್ವೀಸ್ ರಸ್ತೆ ನಿರ್ಮಿಸದೆ ಶುಲ್ಕ ವಸೂಲಿ ಮಾಡಬಾರದು ಎಂದು ಸಚಿವ ಕೆ.ಎನ್. ರಾಜಣ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ ಎಂದು ಬೆವರಹನಿ ದಿನಪತ್ರಿಕೆ ವರದಿ ಮಾಡಿದೆ.

ಕೊರಟಗೆರೆ ಸಮೀಪ ರಾಜ್ಯ ಹೆದ್ದಾರಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಎರಡು ಟೋಲ್ ಗಳನ್ನು ಸ್ಥಾಪಿಸಲಾಗಿದೆ. ಈ ಟೋಲ್ ಗಳಲ್ಲಿ ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿರುವುದರಿಂದ ಮಧುಗಿರಿ, ಕೊರಟಗೆರೆ ಮತ್ತು ಪಾವಗಡ ತಾಲ್ಲೂಕಿನ ಜನರಿಗೆ ತುಂಬಾ ತೊಂದರೆಯಾಗಿದೆ ಎಂದು ಹೇಳಿದ್ದಾರೆ.

ಮಧುಗಿರಿ, ಕೊರಟಗೆರೆ ಮತ್ತು ಪಾವಗಡ ಈ ಮೂರು ತಾಲೂಕುಗಳು ನಂಜುಂಡಪ್ಪ ವರದಿಯಲ್ಲಿ ಅತಿ ಹಿಂದುಳಿದ ತಾಲೂಕುಗಳೆಂದು ನಮೂದಿಸಲಾಗಿದೆ. ಸರ್ಕಾರ ಟೋಲ್ ವಸೂಲಿ ಮಾಡುವುದಾದರೆ ಪಕ್ಕದಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ಮಿಸಿ ಟೋಲ್ ಸ್ಥಾಪಿಸಬೇಕಾಗಿತ್ತು. ನಾವು ಓಡಾಡುವ ರಸ್ತೆಯಲ್ಲಿ ನಮಗೆ ಉಚಿತವಾಗಿ ಓಡಾಡುವ ಹಕ್ಕು ಇದ್ದೇ ಇರುತ್ತದೆ. ಸರ್ವೀಸ್ ರಸ್ತೆ ನಿರ್ಮಿಸದೆ ಟೋಲ್ ಹಾಕುವುದರಿಂದ ಈ ಭಾಗದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ತಿಳಿಸಿದ್ದಾರೆ.

ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದರೆ ಟೋಲ್ ತೆಗೆಸುತ್ತೇವೆ ಎಂದು ಜನರಿಗೆ ನಾನು, ಡಾ.ಜಿ.ಪರಮೇಶ್ವರ್ ಮತ್ತು ವೆಂಕಟೇಶ್ ಅವರು ಮನವಿ ಮಾಡಿದ್ದೆವು. ಮೇ 30ಕ್ಕೆ ಈ ಟೋಲ್ ನಲ್ಲಿ ಶುಲ್ಕ ವಸೂಲಿ ಮಾಡುವ ಅವಧಿ ಮುಕ್ತಾಯವಾಗುತ್ತದೆ. ಹಾಗಾಗಿ ಜೂನ್ 1 ರಿಂದ ಈ ಟೋಲ್ ಗಳ ಗುತ್ತಿಗೆ ಅವಧಿಯನ್ನು ನವೀಕರಿಸಿ ಶುಲ್ಕ ವಸೂಲಿ ಮಾಡಬಾರದೆಂದು ನಾನು, ಡಾ.ಜಿ.ಪರಮೇಶ್ವರ್ ಮತ್ತು ವೆಂಕಟೇಶ್ ಅವರ ಒತ್ತಾಯವಾಗಿದೆ ಎಂದಿದ್ದಾರೆ.

ಒಂದು ವೇಳೆ ಟೋಲ್ ಹಾಕುವುದಾದರೆ ಸರ್ವೀಸ್ ರಸ್ತೆ ಮಾಡಿ ಹಾಕಲಿ, ಇದಕ್ಕೆ ನಮ್ಮ ಅಡ್ಡಿಯಿಲ್ಲ. ಸರ್ವೀಸ್ ರಸ್ತೆ ನಿರ್ಮಿಸದೆ ಟೋಲ್ ಶುಲ್ಕ ವಸೂಲಿ ಮಾಡುವುದು ಅವೈಜ್ಞಾನಿಕ. ಹಾಗಾಗಿ ಜೂನ್ 1 ರಿಂದ ವಾಹನ ಸವಾರರಿಂದ ಟೋಲ್ ಶುಲ್ಕ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ಒಂದು ವೇಳೆ ಜನರ ಭಾವನೆಗೆ ಸ್ಪಂದಿಸದೆ ವ್ಯತಿರಿಕ್ತವಾಗಿ ನಡೆದರೆ, ಅದಕ್ಕೆ ಜನರು ಅವರದೇ ಆದ ರೀತಿಯಲ್ಲಿ ಭಾವನೆ ಗಳನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ನಾವ್ಯಾರೂ ಕಾರಣವಾಗುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಕೆ.ಎನ್.ರಾಜಣ್ಣ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular