ರಾಜ್ಯಕ್ಕೆ ಬರುವ ಆದಾಯವನ್ನು ಹೆಚ್ಚಳ ಮಾಡಿಕೊಂಡು, ಅದನ್ನು ಹಂಚಿಕೆ ಮಾಡಿ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ, ಸರ್ಕಾರದ ಖರ್ಚು ವೆಚ್ಚಗಳನ್ನು ಉಳಿಸಿಕೊಳ್ಳುವ ಮೂಲಕ ಕಾಂಗ್ರೆಸ್ ಗ್ಯಾರಂಟಿ ಅನ್ನು ಅನುಷ್ಠಾನ ಮಾಡುತ್ತದೆ ಎಂದು ತಮಿಳುನಾಡು ಕಾಂಗ್ರೆಸ್ ಉಸ್ತುವಾರಿ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ರಾಜ್ಯದಲ್ಲಿ ಭ್ರಷ್ಟಾಚಾರ ಎಷ್ಟರವರೆಗೆ ಮೀತಿಮೀರಿದೆ ಅಂದರೆ ದೇಶದ ಮತ್ತು ರಾಜ್ಯದ ಆಸ್ತಿ, ಸಂಪತ್ತುಗಳನ್ನು ಮನಸೋ ಇಚ್ಛೇ, ಕೆಲವೇ ಕೆಲವು ವ್ಯಕ್ತಿಗಳ ಜೇಬಿಗೆ ಹೋಗುತ್ತ ಇದೆ. ಸರ್ಕಾರದ ಹಣ ಅದು ಜನರ ಹಣ, ಅದನ್ನು ದಾರಿತಪ್ಪಿಸಿ, ಅದನ್ನು ಖಾಸಗಿಯಾಗಿ ಕೆಲವು ವ್ಯಕ್ತಿಗಳಿಗೆ ಅದರಲ್ಲೂ ಬಿಜೆಪಿ ಮುಖಂಡರಿಗೆ ಮತ್ತು ಬೆಂಬಲಿರಿಗೆ ಹಣ ಸೇರುವ ರೀತಿಯಲ್ಲಿ ಆಗುತ್ತ ಇದೆ ಎಂದು ಗಂಭೀರ ಆರೋಪ ಮಾಡಿದರು.
ಕೆಎಸ್.ಡಿ.ಎಲ್ ನೇಮಕಾತಿಯಲ್ಲಿ 5 ಕೋಟಿ ರಿಂದ 15 ಕೋಟಿ, ಇಂಜಿನಿಯರ್ ನೇಮಕಾತಿಯಲ್ಲಿ 1 ಕೋಟಿಯಿಂದ 5 ಕೋಟಿಯವರೆಗೆ, ಸಬ್ ರಿಜಿಸ್ಟ್ರಾರ್ 50 ಲಕ್ಷದಿಂದ 5 ಕೋಟಿ, ಬೆಸ್ಕಾಂ 1 ಕೋಟಿ, ಪಿಎಸೈ 80 ಲಕ್ಷ, ಕೆಪಿಎಸ್ಸಿ ಅಧ್ಯಕ್ಷ 5 ಕೋಟಿಯಿಂದ 15 ಕೋಟಿ, ಡಿಸಿ ಮತ್ತು ಎಸ್ಪಿ 5 ಕೋಟಿಯಿಂದ 15 ಕೋಟಿ, ಉಪ ಕುಲಪತಿ 5 ಕೋಟಿಯಿಂದ 10 ಕೋಟಿ ಈ ರೀತಿಯ ಹಗರಣದ ಮೂಲಕ ಹೆಚ್ಚು ಹಣ ಲೂಟಿ ಮಾಡಿದೆ. ಮಠದ ಸ್ವಾಮೀಜಿಯೋರ್ವರು ಹೇಳಿದರು ಎಂದರು.
ನಮ್ಮ ಅನುದಾನಕ್ಕೆ ದುಡ್ಡು ಕೊಡಬೇಕು, ಪೊಲೀಸ್ ಠಾಣಾಧಿಕಾರಿಯೊರ್ವ ಮೃತಪಟ್ಟಾಗ ರಾಜ್ಯದ ಸಚಿವರೊಬ್ಬರು ಹೇಳಿದರು ಅವನು ಹಣಕೊಟ್ಟು ಬಂದಿದ್ದಾನೆ ಅಂತ. ಮಂತ್ರಿಗಳೆ ಸ್ವತಃ ಬಿಜೆಪಿ ಶಾಸಕರೇ ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಿದ್ದಾರೆ. ಗುತ್ತಿಗೆದಾರರ ಸಂಘದ ಪತ್ರ, ಆತ್ಮಹತ್ಯೆ ಮಾಡಿಕೊಂಡಿರುವವರು ಆರೋಪ, ಸಾರ್ವಜನಿಕವಾಗಿಯೂ ಇಂದು ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಠಾಚಾರ, ಕಮಿಷನ್ ಬಗ್ಗೆ ಮಾತನಾಡುವಂತಾಗಿದೆ ಎಂದು ಹೇಳಿದರು.
ಈ ಸರ್ಕಾರದಲ್ಲಿ ಗುತ್ತಿಗೆದಾರರು ಬೀದಿಪಾಲಾಗಿದ್ದಾರೆ. ಈ ಪರಿಸ್ಥಿತಿ ರಾಜ್ಯದಲ್ಲಿ ಎಂದಿಗೂ ಇರಲ್ಲಿಲ್ಲ. ಇಂತಹ ಪರಿಸ್ಥಿತಿಯಿಂದ ರಾಜ್ಯ ಹೊರಬರಬೇಕಾಗುತ್ತದೆ. ನಾವು ಈ ರೀಪೋರ್ಟ್ ಕಾರ್ಡನ್ನು ಸ್ಪಷ್ಟ ಮಾಹಿತಿಯ ಆಧಾರದಲ್ಲಿ ನಾವು ಹೇಳಿದ್ದೇವೆ. ಇದೇನು ಕಪೋಲಕಲ್ಪಿತ ಸುದ್ದಿ ಅಲ್ಲ. ಮಂತ್ರಿ ಆಗಬೇಕಾದರೂ ದುಡ್ಡು ಕೊಡಬೇಕು. ಇಡೀ ರಾಜ್ಯವನ್ನೇ ಮಾರಾಟಕ್ಕೆ ಇಟ್ಟು ಬಿಟ್ಟಿದ್ದಾರೆ ಎಂದು ಆರೋಪಿಸಿದರು.
ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸೇರಿದಂತೆ ಮಾಧ್ಯಮ ಕ್ಷೇತ್ರದಲ್ಲೂ ಭ್ರಷ್ಟಾಚಾರವಿದೆ ಅದು ಒಂದು ಕ್ಯಾನ್ಸರ್ ವಿದ್ದಂತೆ. ಅದನ್ನು ನಿವಾರಣೆ ಮಾಡುಬೇಕಲ್ವ. ಅದಕ್ಕಾಗಿ ಯುಪಿಎ ಸರ್ಕಾರವಿದ್ದಾಗ ಮಾಹಿತಿ ಹಕ್ಕು ಕಾಯ್ದೆಯನ್ನು ತಂದಿದ್ದೇವೆ, ಅದಕ್ಕಾಗಿಯೇ ನಾವು ಆಧಾರ್ ತಂದಿದ್ದೇವೆ, ಕಾಂಗ್ರೆಸ್ ನವರಿಗೆ ಯಾವುದೇ ಭಯಭೀತಿಯಿಲ್ಲ. ವ್ಯವಸ್ಥೆಯನ್ನು ಸರಿಪಡಿಸಿವುದು ನಮ್ಮ ಬಧ್ಧತೆ. ಆದರೆ ಇಂದು ಬಿಜೆಪಿಯಲ್ಲಿ ಜನರ ಹಣವನ್ನು ಲೂಟಿ ಮಾಡಿ, ಇಂದು ನಗ್ನರಾಗಿದ್ದಾರೆ. ಒಂದು ಸರ್ಕಾರದಲ್ಲಿ 40% ಕಮಿಷನ್ ಹೆಸರು ಇದ್ದ ಮೇಲೆ ಎಲ್ಲರೂ ಈ ಸರ್ಕಾರದಲ್ಲಿ ಹಗರಣದಲ್ಲಿ ಭಾಗಿಯಾಗಿದ್ದಾರೆ ಅಂತ ಅರ್ಥ ಎಂದರು.